Advertisement

ಕಟ್ಟಿಕೆರೆ : ಹೆದ್ದಾರಿ ಪಾರ್ಶ್ವದಲ್ಲಿ ಬಾಯ್ದೆರೆದ ಗುಂಡಿಗೆ ಮೋಕ್ಷ

06:45 AM Jul 26, 2018 | Team Udayavani |

ಕಟಪಾಡಿ: ರಾಷ್ಟ್ರೀಯ ಹೆದ್ದಾರಿ 66ರ ಪಾಂಗಾಳ ಕಟ್ಟಿಕೆರೆ ಬಳಿ ಹೆದ್ದಾರಿಯ ಪೂರ್ವ ಪಾರ್ಶ್ವದಲ್ಲಿ  ಮಳೆ ನೀರು ಮತ್ತು ವಾಹನ ಸಂಚಾರದ ಒತ್ತಡದ ಕಾರಣದಿಂದ ದೊಡ್ಡ ಗಾತ್ರದ ಗುಂಡಿಯೊಂದು ಬಾಯ್ದೆರೆದುಕೊಂಡಿದ್ದು, ಬುಧವಾರ ಗುಂಡಿಗೆ ಮೋಕ್ಷ ಕಾಣಿಸಲಾಗಿದೆ.

Advertisement

ಈ ಭಾಗದಲ್ಲಿ ಶಾಲೆ, ಹೂವಿನ ಮಾರಾಟದ ಕಟ್ಟೆಯು ಕಾರ್ಯಾಚರಿಸುತ್ತಿದೆ. ಹೆಚ್ಚಿನ ಜನ ಸಂಚಾರ ಈ ಭಾಗದಲ್ಲಿ  ನಿತ್ಯ ಸಂಚಾರಿಗಳಾಗಿದ್ದು, ಶಾಲಾ ಮಕ್ಕಳು ಇದೇ ದಾರಿಯಾಗಿ ಸಾಗುತ್ತಿದ್ದಾರೆ. ಇದರೊಂದಿಗೆ ಹೆದ್ದಾರಿ ವಾಹನಗಳ ಸಂಚಾರ ಭರಾಟೆಯು ಇಲ್ಲಿ ಸ್ವಲ್ಪ ಹೆಚ್ಚಾಗಿದ್ದು, ಹೆದ್ದಾರಿಯಲ್ಲೂ ಈ ಭಾಗದಲ್ಲಿ ಹೊಂಡ ನಿರ್ಮಾಣಗೊಂಡಿದೆ. ಹಾಗಾಗಿ ಈ ಸ್ಥಳ ಅತ್ಯಂತ ಅಪಾಯಕಾರಿಯಾಗಿ ಕಂಡು ಬರುತ್ತಿದ್ದು, ಯಾವುದೇ ಕ್ಷಣದಲ್ಲಿ ಈ ಗುಂಡಿಯು ಮೃತ್ಯು ಕೂಪವಾಗಿ ಪರಿವರ್ತನೆಯಾಗ ಬಲ್ಲುದು ಎಂದು ನಿತ್ಯ ಸಂಚಾರಿಗಳು ಭಯವನ್ನು ವ್ಯಕ್ತ ಪಡಿಸುತ್ತಿದ್ದಾರೆ ಎಂದು ಉದಯವಾಣಿಗೆ ಜು.12ರಂದು ವರದಿ ಪ್ರಕಟಿಸಿತ್ತು.

ತಡವಾಗಿಯಾದರೂ ಎಚ್ಚೆತ್ತ ಸಂಬಂಧ ಪಟ್ಟ ಇಲಾಖೆಯು ಕೊನೆಗೂ ಪಕ್ಕದ ತೋಡಿನಿಂದ ಮಣ್ಣನ್ನು ಜೆಸಿಬಿ ಮೂಲಕ ತೆಗೆದು ಈ ಹೊಂಡವನ್ನು ಮುಚ್ಚುವ ಮೂಲಕ ಸ್ಥಳೀಯರ ಆತಂಕಕ್ಕೆ ಮುಕ್ತಿ ನೀಡಿದ್ದಾರೆ.

ಹೆದ್ದಾರಿ ಪಕ್ಕದಲ್ಲಿ ಮಣ್ಣು ಕುಸಿದು ಈ ಗುಂಡಿ ಬಾಯ್ದೆರೆದು ನಿಂತಿದ್ದು, ಇನ್ನು ಮುಂದುವರೆಯ ಬಹುದಾದ ಮಳೆಯ ತೀವ್ರತೆಗೆ ಹೆದ್ದಾರಿಯೂ ಇದರೊಂದಿಗೆ ಕುಸಿಯುವ ಸಾಧ್ಯತೆಯು ಹೆಚ್ಚಾಗಿತ್ತು. ಜೋರಾಗಿ ಮಳೆ ಬಂದಾಗ ಇಲ್ಲಿ ನಿಲ್ಲುವ ನೀರಿನಿಂದಾಗಿ ಈ ಗುಂಡಿಯು ಗೋಚರಕ್ಕೆ ಬರದೆ ವಾಹನ ಸವಾರರು ಅಥವಾ ಪಾದಾಚಾರಿಗಳು ಅನಾಹುತವನ್ನೆದುರಿಸಬೇಕಾದ ದುಸ್ಥಿತಿ ಹೊಂದಿತ್ತು ಎಂದು ನಾಗರೀಕರು ಕಳವಳ ವ್ಯಕ್ತ ಪಡಿಸಿದ್ದು, ಇದೀಗ ನಿರಾಳರಾಗುವಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next