Advertisement

ಆಪ್ತ ಸಿಬಂದಿಗೆ ಕೋವಿಡ್‌ ದೃಢ: ಸ್ವಯಂ ಕ್ವಾರಂಟೈನ್‌ ಗೆ ಒಳಗಾದ ಸಚಿವ ಸೋಮಶೇಖರ್

10:14 PM Jul 28, 2020 | sudhir |

ಬೆಂಗಳೂರು: ಆಪ್ತ ಸಿಬಂದಿಯ ಪರೀಕ್ಷಾ ವರದಿಯಲ್ಲಿ ಕೋವಿಡ್‌ 19 ದೃಢ ಪಟ್ಟಿದ್ದು, ಸಚಿವ ಎಸ್‌.ಟಿ. ಸೋಮಶೇಖರ್‌ ಸ್ವಯಂ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ.

Advertisement

ಸಚಿವ ಸೋಮಶೇಖರ್‌ ಅವರ ವಿಶೇಷ ಕರ್ತವ್ಯಾಧಿಕಾರಿ ವಿಕಾಸ ಸೌಧ‌ದ 38, 39ರಲ್ಲಿ ಕಾರ್ಯ ನಿರ್ವಹಿಸಿಸುತ್ತಿದ್ದ ದಿನೇಶ್‌ ಗೂಳಿಗೌಡ ಅವರಿಗೆ ಕೋವಿಡ್‌ ದೃಢ ಪಟ್ಟಿದ್ದು ಸಚಿವರನ್ನು ಆತಂಕಕ್ಕೀಡು ಮಾಡಿದೆ. ಸಚಿವರ ನಿಗದಿತ ಕಾರ್ಯಕ್ರಮಗಳು ಮುಂದೂಡಲ್ಪಟ್ಟಿದ್ದು ಕ್ಷೇತ್ರ ಮತ್ತು ಮೈಸೂರಿನ ಕಾರ್ಯಚಟುವಟಿಕೆಗಳ ಬಗ್ಗೆ ದೂರವಾಣಿಯಲ್ಲಿ ಅವರು ಮಾಹಿತಿ ಪಡೆದುಕೊಂಡರು. ಅಗತ್ಯ ಬಿದ್ದರೆ ಮನೆಯಿಂದಲೇ ಅಧಿಕಾರಿಗಳ ಜತೆ ವೀಡಿಯೋ ಕಾನ್ಫರೆನ್ಸ್‌ ಮೂಲಕ ಸಭೆ ನಡೆಸಲಾಗುವುದೆಂದು ಅವರು ತಿಳಿಸಿದ್ದಾರೆ.

ಮುಂಜಾಗೃತ ಕ್ರಮವಾಗಿ ಕೊಠಡಿಗೆ ಸ್ಯಾನಿಟೈಸ್‌ ಮಾಡಲಾಗಿದ್ದು, 7 ದಿನ ಕಚೇರಿಗೆ ಸಾರ್ವಜನಿಕರನ್ನು ನಿರ್ಬಂಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next