ಸಿಂಧನೂರು: ಹಿಂದುಳಿದ ಸಮಾಜಕ್ಕೆ ಸೌಲಭ್ಯ ಕೇಳುವುದು ನಮ್ಮ ಹಕ್ಕು. ಎಂದೋ ಸಿಗಬೇಕಿದ್ದಎಸ್ಟಿ ಮೀಸಲು ಈವರೆಗೆ ಸಿಗದ ಹಿನ್ನೆಲೆಯಲ್ಲಿಆಗಿರುವ ಅನ್ಯಾಯ ಸರಿಪಡಿಸುವಂತೆಆಗ್ರಹಿಸಿ ಚಳವಳಿ ನಡೆಸಲಾಗುತ್ತಿದೆಎಂದು ಕುರುಬ ಸಮುದಾಯದ ಎಸ್ಟಿಮೀಸಲು ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಕೆ. ವಿರೂಪಾಕ್ಷಪ್ಪ ಹೇಳಿದರು.
ನಗರದಲ್ಲಿ ಜ. 4ರಂದು ನಡೆಯಲಿರುವಬೃಹತ್ ಸಮಾವೇಶದ ಸಿದ್ಧತೆ ವೀಕ್ಷಿಸಿದಬಳಿಕ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರುಮಾತನಾಡಿದರು. ಕುರುಬ ಸಮುದಾಯ1976ರಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಬೇಕಿತ್ತು.ಇತರ ಎಲ್ಲ ಸಮುದಾಯ ಸೇರಿಸಿ ಕುರುಬರನ್ನು ಮಾತ್ರ ಕೈ ಬಿಡಲಾಯಿತು.ಕೊಡುಗು ಜಿಲ್ಲೆಯಲ್ಲಿ ಮಾತ್ರ ಸಮುದಾಯಕ್ಕೆ ಮೀಸಲು ನೀಡಿ, ಉಳಿದ ಜಿಲ್ಲೆಗಳ ಕುರುಬರನ್ನು ಕೈ ಬಿಡಲಾಯಿತು.
1868 ರಲ್ಲೇ ಬ್ರಿಟಿಷ್ ಸರಕಾರ ತಂದಿರುವ ಪುಸ್ತಕದಲ್ಲಿ ಕುರಬರ್ ಅಥವಾ ಕುರುಂಬರ್ ಅತ್ಯಂತ ಮೂಲ ನಿವಾಸಿ ಬುಡಕಟ್ಟು ಜನಾಂಗವೆಂದು ನಮೂದಿಸಲಾಗಿತ್ತು. 1891ರಲ್ಲಿ ಗಣತಿನಡೆಸಿದಾಗಲೂ ಕುರುಬರು ಮೂಲ ನಿವಾಸಿ, ಅರೆನಾಗರಿಕ ಬುಡಕಟ್ಟು ಜನರೆಂದು ಉಲ್ಲೇಖೀಸ ಲಾಗಿತ್ತು. ರಾಜ್ಯದಲ್ಲಿ ಕೊಡುಗಿಗೆ ಮಾತ್ರ ಸೀಮಿತವಾದ ಮೀಸಲನ್ನು 1976ರ ಕೇಂದ್ರ ಸರಕಾರದ ಆದೇಶದ ಪ್ರಕಾರ ಇಡೀ ರಾಜ್ಯಕ್ಕೆ ವಿಸ್ತರಿಸಬೇಕಿತ್ತು. ಇದಕ್ಕಾಗಿ ದೇವರಾಜು ಅರಸು ನೇತೃತ್ವದ ಸರಕಾರಕೇಂದ್ರ ಸರಕಾರಕ್ಕೆ ಪತ್ರ ಸಲ್ಲಿಸಿತ್ತು. ಕೊರಮ,ಭೋವಿ, ಲಮಾಣಿ, ಕೊರವ ಸಮಾಜಕ್ಕೆ ಸಿಗಬೇಕಿದ್ದ ಮೀಸಲನ್ನು ರಾಜ್ಯಕ್ಕೆ ವಿಸ್ತರಿಸುವಮಸೂದೆ ಅಂಗೀಕರವಾಯಿತು. ಕುರುಬ ಸಮುದಾಯದ 6 ಉಪ ಪಂಗಡಗಳಿಗೆ ಸಂಬಂಧಿಸಿ ಬಿಲ್ ತಿರಸ್ಕೃತವಾಯಿತು. ಆಯಾ ಸಂದರ್ಭದಲ್ಲಿ ಗಟ್ಟಿ ಪ್ರಯತ್ನಗಳಿಲ್ಲದಪರಿಣಾಮ ಕುರುಬ ಜನಾಂಗಕ್ಕೆ ಅನ್ಯಾಯವಾಗಿದ್ದು, ಇದೀಗ ಕೊಡಿಸುವುದಕ್ಕಾಗಿ ದಿಟ್ಟ ಹೆಜ್ಜೆ ಇಡಲಾಗಿದೆ ಎಂದರು.
ಜ.4ರಂದು ಈ ನಿಟ್ಟಿನಲ್ಲಿ ಎಸ್ಟಿಹೋರಾಟ ಸಮಿತಿಯ ಬೃಹತ್ ಸಮಾವೇಶನಡೆಯುತ್ತಿದ್ದು, ರಾಯಚೂರು, ಕೊಪ್ಪಳ,ಬಳ್ಳಾರಿ, ಯಾದಗಿರಿ ಜಿಲ್ಲೆಯಿಂದ ಜನಆಗಮಿಸಲಿದ್ದಾರೆ. 40-50 ಸಾವಿರ ಜಸೇರುವ ನಿರೀಕ್ಷೆಯಿದೆ. 25 ಸಾವಿರ ಆಸನದವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಜಗದ್ಗುರುಗಳಾದನಿರಂಜನಾನಂದ ಪುರಿ ಸ್ವಾಮೀಜಿ,ಈಶ್ವಾರನಂದಪುರಿ ಸ್ವಾಮೀಜಿ, ಸಿದ್ದರಾಮನಂದ ಪುರಿಸ್ವಾಮೀಜಿ, ಶಿವನಾಂದಪುರಿ ಸ್ವಾಮೀಜಿ ಸೇರಿದಂತೆ ಹಾಲು ಮತ ಸಮಾಜದ ಎಲ್ಲ ರಾಜ್ಯಮಟ್ಟದ ಮುಖಂಡರು ಪಕ್ಷಾತೀತವಾಗಿ ಈ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ಎಂದರು.
ಪಿಎಲ್‌ಡಿಬಿ ಬ್ಯಾಂಕ್ ಅಧ್ಯಕ್ಷ, ಹಾಲುಮತಸಮಾಜದ ತಾಲೂಕು ಅಧ್ಯಕ್ಷ ಪೂಜಪ್ಪಪೂಜಾರಿ, ಪ್ರಧಾನ ಕಾರ್ಯದರ್ಶಿ ಶಂಬಣ್ಣಸುಕಾಲಪೇಟೆ, ಎಸ್ಟಿ ಹೋರಾಟ ಸಮಿತಿತಾಲೂಕು ಅಧ್ಯಕ್ಷ ಫಕೀರಪ್ಪ ಬಾಗೋಡಿ,ಕಾರ್ಯದರ್ಶಿ ಕೆ. ಚಿದಾನಂದ್,ವೆಂಕಣ್ಣ ತಿಪ್ಪನಹಟ್ಟಿ, ನಾಗರಾಜ ಬಾದರ್ಲಿ,ಸುರೇಶ್ ಸುಕಾಪೇಟೆ ಸೇರಿದಂತೆ ಇತರರು ಇದ್ದರು.