ಮೈಸೂರು: ವಿಶ್ವವಿದ್ಯಾನಿಲಯದ ನಿಯಮ ಪದೇ ಪದೆ ಉಲ್ಲಂಘನೆ ಮಾಡುವ ಸಂತ ಫಿಲೋಮಿನಾ ಕಾಲೇಜಿಗೆ ನೀಡಲಾಗಿರುವ ಕೋರ್ಸ್‌ಗಳ ಮಾನ್ಯತೆ ರದ್ದುಪಡಿಸುವ ಬಗ್ಗೆ ಮೈಸೂರು ವಿವಿ ಶೈಕ್ಷಣಿಕ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ನಗರದ ಮೈಸೂರು ವಿವಿ ಕ್ರಾಪರ್ಡ್ ಭವನದಲ್ಲಿ ಪ್ರಭಾರ ಕುಲಪತಿ ಪ್ರೊ. ದಯಾನಂದ ಮಾನೆ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಯಿತು. ಪ್ರಥಮ ವರ್ಷದ ಎಂಎ ಇಂಗ್ಲಿಷ್ ಕೋರ್ಸ್‌ಗೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗೆ ವಿವಿ ನಿಗದಿಪಡಿಸಿರುವ ಅರ್ಹತಾ ಮಾನದಂಡವನ್ನು ಅನುಸರಿಸುತ್ತಿಲ್ಲ.
ಹೀಗೆ ವಿವಿ ನಿಯಮ ಉಲ್ಲಂ ಸಿ ಈವರೆಗೆ 13 ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡಲಾಗಿದ್ದು, ಈ ಬಗ್ಗೆ ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ಕಾಲೇಜು ಆಡಳಿತ ಮಂಡಳಿ ಇದನ್ನು ಸರಿಪಡಿಸಿಕೊಳ್ಳದೆ ಮೇಲಿಂದ ಮೇಲೆ ನಿಯಮ ಉಲ್ಲಂ ಸುತ್ತಿದೆ. ಈ ಹಿನ್ನೆಲೆ ಅಂತಿಮವಾಗಿ ಕಾಲೇಜಿಗೆ ಎಚ್ಚರಿಕೆ ನೀಡಿ ಬಾರೀ ದಂಡ ವಿಧಿಸುವ ಜತೆಗೆ ಮುಂದಿನ ವರ್ಷದಿಂದ ಕೋರ್ಸ್ ಮಾನ್ಯತೆ ರದ್ದುಪಡಿಸುವ ಬಗ್ಗೆ ನಿರ್ಧಾರ ಕೈಗೊಳ್ಳಬೇಕೆಂದು ಸಭೆಯಲ್ಲಿ ಪ್ರಸ್ತಾಪಿಸಿದರು.
ಅಧಿನಿಯಮಕ್ಕೆ ಆಕ್ಷೇಪ: ವಿವಿ ಕುಲಸಚಿವ ಪ್ರೊ.ಆರ್.ರಾಜಣ್ಣ ಮಾತನಾಡಿ, ಮೈಸೂರು ವಿವಿ (ಬಹದ್ದೂರ್ ನಿರ್ವಹಣಾ ವಿಜಾnನ ಸಂಸ್ಥೆ) ಶಾಸನ-2016 ಕರಡು ಅಧಿನಿಯಮದ ಪರಿಶೀಲನೆ ಮತ್ತು ಅನುಮೋದನೆಗಾಗಿ ಮಂಡಿಸಿದರು. ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೆಲವು ಸದಸ್ಯರು, ಬಿ.ಎನ್.ಬಹದ್ದೂರ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸೈನ್ಸ್ ಅಧ್ಯಯನ ವಿಭಾಗಕ್ಕೆ ಶೈಕ್ಷಣಿಕ ಸ್ವಾಯತ್ತತೆ ನೀಡಿ ಕಟ್ಟಡ ನಿರ್ಮಿಸಿಕೊಡುವ ಬೇರೆ ಸಂಸ್ಥೆಯ ಸುಪರ್ದಿಗೆ ವಹಿಸುವ ಅಧಿನಿಯ ಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು.
ಶಿಕ್ಷಣ ಮಂಡಳಿ ಸದಸ್ಯೆ ಆಯಿಷಾ ಖಾನಂ ಮಾತನಾಡಿ, ಬಹದ್ದೂರ್ ಸಂಸ್ಥೆಗೆ ಸ್ವಾಯತ್ತತೆ ನೀಡಿದರೆ ಬೇರೆಯವರು ಬಂದು ಸಂಸ್ಥೆ ಆಕ್ರಮಿಸಿಕೊಳ್ಳುತ್ತಾರೆ. ಖಾಸಗಿ ಸಂಸ್ಥೆಯೊಂದು 3 ಕೋಟಿ ಖರ್ಚು ಮಾಡಿ ಕಟ್ಟಡ ನಿರ್ಮಿಸಿಕೊಡುತ್ತದೆ ಎಂಬ ಕಾರಣಕ್ಕೆ ಇಡೀ ಸಂಸ್ಥೆ ಬಿಟ್ಟುಕೊಡುವುದರಿಂದ ನಮ್ಮ ಸಿಬ್ಬಂದಿ ಹೊರ ಬರಬೇಕಾಗುತ್ತದೆ. ಈ ಕ್ರಮದಿಂದ ಇತರೆ ಅಧ್ಯಯನ ವಿಭಾಗಗಳ ಕಥೆಯೂ ಇದೇ ರೀತಿ ಆಗುತ್ತದೆ. ಕೂಡಲೇ ಈ ಕರಡನ್ನು ವಾಪಸ್ಸು ಪಡೆಯಬೇಕು’ ಎಂದು ಆಗ್ರಹಿಸಿದರು.
ಸಭೆಯ ಅಭಿಪ್ರಾಯ ಆಲಿಸಿದ ಕುಲಪತಿ ಪ್ರೊ.ದಯಾನಂದ ಮಾನೆ, “ಒಟ್ಟು ಸದಸ್ಯರ ಅಭಿಪ್ರಾಯದಂತೆ ಈ ಕರಡು ಅಧಿನಿಯಮಕ್ಕೆ ಶಿಕ್ಷಣ ಮಂಡಳಿಯಲ್ಲಿ ಅನುಮೋದನೆ ನೀಡದೆ ಪುನಃ ಸಿಂಡಿಕೇಟ್‌ಗೆ ವರ್ಗಾಯಿಸಲಾಗಿದೆ. ಅಲ್ಲಿ ಕೂಲಂಕಷವಾಗಿ ಚರ್ಚಿಸಿ ಕರಡು ಅಧಿನಿಯಮ ರದ್ದುಪಡಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು’ ಎಂದರು. ವಿಧಾನಪರಿಷತ್ ಸದಸ್ಯ ರಾಮಚಂದ್ರಗೌಡ ಇತರರು ಹಾಜರಿದ್ದರು.