Advertisement

ಮಲ್ಪೆ ಸೈಂಟ್‌ ಮೇರಿ ಐಲ್ಯಾಂಡ್‌ ಇಂದಿನಿಂದ ಬೋಟ್‌ ಯಾನ ಶುರು

10:04 AM Sep 16, 2019 | Sriram |

ಮಲ್ಪೆ: ಪ್ರವಾಸಿಗರ ಆಕರ್ಷಣೀಯ ತಾಣ ಸೈಂಟ್‌ಮೇರಿ ದ್ವೀಪ ಇಂದಿನಿಂದ ಮತ್ತೆ ಪ್ರವಾಸಿಗರಿಗೆ ತೆರೆದುಕೊಳ್ಳಲಿದೆ.ಮಳೆಗಾಲದಲ್ಲಿ 4 ತಿಂಗಳ ಕಾಲ ಹೇರಲಾಗಿದ್ದ ಪ್ರವೇಶ ನಿರ್ಬಂಧದ ಅವಧಿ ಇಂದಿನಿಂದ(ಸೆ. 15) ತೆರವಾಗಿದೆ.

Advertisement

ಆದರೂ ಇಲ್ಲಿಗೆ ಪ್ರಯಾಣ ಬೆಳೆಸಲು ಸಮುದ್ರದಲ್ಲಿ ಗಾಳಿ ನೀರಿನ ಒತ್ತಡ ತಡೆಯುಂಟು ಮಾಡೀತೆಂಬ ಅಂದಾಜಿದೆ. ಸಮುದ್ರದ ವಾತಾವರಣವನ್ನು ಹೊಂದಿಕೊಂಡು ಯಾನ ಆರಂಭಿಸಲಾಗುತ್ತದೆ. ಅಭಿವೃದ್ಧಿ ಸಮಿತಿಯು ದ್ವೀಪ ದಲ್ಲಿ ಸ್ವತ್ಛತೆಯೊಂದಿಗೆ ಪೂರ್ವ ಸಿದ್ಧತೆ ಆರಂಭಿಸಿದೆ. ಮಲ್ಪೆ ಟೆಬಾ¾ ಶಿಪ್‌ಯಾರ್ಡ್‌ ಬಳಿ 3 ದೊಡ್ಡ ಟೂರಿಸ್ಟ್‌ ಬೋಟ್‌, ಮಲ್ಪೆ ಬೀಚ್‌ನಲ್ಲಿ 4 ಸ್ವೀಡ್‌ಬೋಟ್‌ಗಳು ಸಿದ್ಧಗೊಂಡಿವೆ.

ಪ್ರಾಕೃತಿಕ ಸೌಂದರ್ಯದ ಸೊಬಗು ಸವಿಯಲು ಲಕ್ಷಾಂತರ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಕೆಲವು ವರ್ಷಗಳಿಂದ ಪ್ರವಾಸಿಗರಿಗೆ ಕುಡಿಯುವ ನೀರು, ಶೌಚಾಲಯ, ಸೇರಿದಂತೆ ಮೂಲ ಸೌಕರ್ಯವನ್ನು ಜಿಲ್ಲಾಡಳಿತ ಒದಗಿಸುತ್ತಿದೆ.

ಹೆಚ್ಚುವರಿ ವಾಟರ್‌ ನ್ಪೋರ್ಟ್ಸ್
ಕಳೆದ ವರ್ಷ ಕ್ಲಿಪ್‌ ಡೈವ್‌, ಸೈಕ್ಲಿಂಗ್‌, ಜೆಸ್ಕೀ, ಬನಾನ ರೈಡ್‌, ಇಕೋಟ್ರೇಲ್‌ ಮುಂತಾದ ಜಲಸಾಹಸ ಕ್ರೀಡೆಗಳಿದ್ದವು. ಈ ಬಾರಿ ಅಕ್ಟೋಬರ್‌ ಮೊದಲ ವಾರದಿಂದ ಕಯಾಕಿಂಗ್‌, ಸ್ನೋರ್ಕೆಲಿಂಗ್‌, ಝೋರ್ಬಿಂಗ್‌ ಕ್ರೀಡೆಗಳಿರಲಿವೆ.

ಈಜು ಪ್ರಿಯರಿಗಾಗಿ ಒಂದು ಕಡೆ ಸ್ವಿಮ್ಮಿಂಗ್‌ ಝೋನನ್ನು ಸ್ಥಾಪಿಸಲಾಗುತ್ತದೆ. ಸೆಲ್ಫಿ ಪ್ರಿಯರಿಗಾಗಿ ಎರಡು ಕಡೆ ಸೆಲ್ಫಿ ಪಾಯಿಂಟ್‌ ತೆರೆಯಲಾಗುತ್ತದೆ. ಫೊಟೋಗ್ರಫಿ, ಆರ್ಟ್‌ ಕ್ಯಾಂಪ್‌ ಸೇರಿದಂತೆ ಇನ್ನಿತರ ಚಟುವಟಿಕೆಗಳನ್ನು ನಡೆಸಲು ಸಮಿತಿ ಯೋಜಿಸಿದೆ.

Advertisement

ಪ್ಲಾಸ್ಟಿಕ್‌ಗೆ ನಿಷೇಧ
ಪ್ರವಾಸಿಗರು ಪ್ಲಾಸ್ಟಿಕ್‌ನಿಂದ ಯಾವುದೇ ಆಹಾರ ಪದಾರ್ಥಗಳನ್ನು ಕೊಂಡೊಯ್ಯುವಂತಿಲ್ಲ. ಸ್ಟೀಲ್‌ ಪಾತ್ರೆ ಅಥವಾ ಇತರ ಬಾಕ್ಸ್‌ಗಳಲ್ಲಿ ಆಹಾರವನ್ನು ತರಬಹುದು. ಪುಟ್ಟ ಮಕ್ಕಳಿಗಾಗಿ ಬಳಸುವ‌ ಹಾಲು ಬಾಟಲಿ, ಬಟ್ಟೆಯ ಚೀಲಗಳನ್ನು ಒಯ್ಯಬಹುದು.

ಧೂಮಪಾನ, ಮದ್ಯಪಾನ ಕಡ್ಡಾಯವಾಗಿ ನಿಷೇಧಿಸಲಾಗಿದೆ. ದ್ವೀಪದಲ್ಲಿ ಸಿಗುವ ಚಿಪ್ಪುಗಳು, ಕಲ್ಲುಗಳನ್ನು ವಾಪಸು ತರುವಂತಿಲ್ಲ. 4 ಮಂದಿ ಜೀವರಕ್ಷಕ ಸಿಬಂದಿ, 5 ಮಂದಿ ಸ್ವತ್ಛತಾ ಕಾರ್ಯಕ್ಕೆ ನಿಯೋಜನೆಗೊಂಡಿದ್ದಾರೆ.

ಕರಾವಳಿಯ ಖಾದ್ಯಗಳಾದ ನೀರುದೋಸೆ, ಕೋರಿರೊಟ್ಟಿ, ಪತ್ರೋಡೆ, ಸೇಮಿಗೆ, ಬೆಲ್ಲ ತೆಂಗಿನಕಾಯಿ ಗಟ್ಟಿ, ಪುಂಡಿ, ಸಮುದ್ರದ ತಾಜಾ ಮೀನಿನ ಫ್ತೈ, ಎಟ್ಟಿಸುಕ್ಕ ಸೇರಿದಂತೆ ನಾನಾ ಪದಾರ್ಥಗಳು ಲಭ್ಯವಿರಲಿವೆ. ಸಸ್ಯಾಹಾರಿಗಳಿಗಾಗಿ ಪ್ರತ್ಯೇಕ ಕೌಂಟರ್‌ ಇರುತ್ತದೆ.ಮಳೆಗಾಲದಲ್ಲಿ ದ್ವೀಪ ಪ್ರಯಾಣ ಅಪಾಯಕಾರಿ ಎಂಬ ಹಿನ್ನೆಲೆಯಲ್ಲಿ ಪ್ರತಿ ವರ್ಷ ಮೇ 15ರಿಂದ ಸೆ. 14ರ ವರೆಗೆ ಜಿಲ್ಲಾಡಳಿತ ನಿರ್ಬಂಧ‌ ವಿಧಿಸುತ್ತದೆ.

ಬೀಚ್‌ಗಳ ದರ್ಶನ
ಐಲ್ಯಾಂಡ್‌ನ‌ಲ್ಲಿ ಪ್ರವಾಸಿಗರಿಗೆ 3 ಬೀಚ್‌ಗಳನ್ನು ನೋಡಬಹುದು. ಬೋಲ್ಡರ್‌ ಬೀಚ್‌, ಸೀಶೇಲ್‌ಬೀಚ್‌ ಮತ್ತು ನಾರ್ಮಲ್‌ ಬೀಚ್‌ಗಳಿವೆ. ಬೋಲ್ಡರ್‌ ಬೀಚ್‌ನಲ್ಲಿ ಸಣ್ಣ ಕಲ್ಲುಗಳ ರಾಶಿಗಳಿವೆ. ಸೀಶೆಲ್‌ ಬೀಚ್‌ನಲ್ಲಿ ವಿವಿಧ ಅಕರ್ಷಕ ಚಿಪ್ಪುಗಳು ನೋಡಬಹುದು. ನಾರ್ಮಲ್‌ ಬೀಚ್‌ನಲ್ಲಿ ನೆರಳಿದ್ದು, ಕುಳಿತು ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಬಹುದು.

ಮಲ್ಪೆ ಯಿಂದ‌ ಸ್ಪೀಡ್‌ಬೋಟ್‌
ಸೈಂಟ್‌ಮೇರಿ ದ್ವೀಪಕ್ಕೆ ತೆರಳುವ ಪ್ರವಾಸಿಗರಿಗೆ ಮಲ್ಪೆ ಬೀಚ್‌ನಿಂದಲೂ ಸ್ಪೀಡ್‌ಬೋಟ್‌ ಸೇವೆ ಇದೆ. ಇಲ್ಲಿ ಒಟ್ಟು 4 ಸೀ³ಡ್‌ಬೋಟ್‌ಗಳಿದ್ದು ಇದರಲ್ಲಿ 15 ನಿಮಿಷದಲ್ಲಿ ಪ್ರಯಾಣಿಸ ಬಹುದು. ಚಾಲಕರು ನಿರ್ವಾಹಕರು ಸೇರಿದಂತೆ 14 ಮಂದಿಗೆ ಮಾತ್ರ ತೆರಳಲು ಅವಕಾಶವಿದೆ ಎನ್ನುತ್ತಾರೆ ಸ್ಪೀಡ್‌ಬೋಟ್‌ ಮಾಲಕ ಸನತ್‌ ಸಾಲ್ಯಾನ್‌.

ಇಕೋ ಟೂರಿಸಂ ಮಾದರಿ
ಇಕೋ ಟೂರಿಸಂ ಮಾದರಿಯಲ್ಲಿ ಅಭಿವೃದ್ಧಿ ಕೈಗೊಳ್ಳಲಾಗಿದೆ. ಸೈಂಟ್‌ಮೇರಿ ಐಲ್ಯಾಂಡನ್ನು ಜನರು ಕೇವಲ ಪಿಕ್‌ನಿಕ್‌ ಪಾಯಿಂಟ್‌ ಆಗಿ ಬಳಸ ಬಾರದು, ಐತಿಹಾಸಿಕ ಸ್ಥಳವಾಗಿ ಆಸ್ವಾದಿಸಬೇಕು. ಇಲ್ಲಿನ ಬಗ್ಗೆ ಅಧ್ಯಯನ ಮಾಡಲು ಅನುಕೂಲವಾಗುವಂತೆ ಒಬ್ಬ ಗೈಡನ್ನು ನೇಮಿಸುತ್ತೇವೆ.
– ಸುದೇಶ್‌ ಶೆಟ್ಟಿ, ಕಾರ್ಯ ನಿರ್ವಹಣಾಧಿಕಾರಿ, ಮಲ್ಪೆ ಅಭಿವೃದ್ದಿ ಸಮಿತಿ         

Advertisement

Udayavani is now on Telegram. Click here to join our channel and stay updated with the latest news.

Next