Advertisement
ಬಳಿಕ ಸಂದೇಶ ನೀಡಿದ ಅವರು, ನಮ್ಮ ಸತ್ಕಾರ್ಯಗಳು ದೇವರ ಅನುಗ್ರಹಕ್ಕೆ ಪಾತ್ರವಾಗುವುದು. ಏಸುಕ್ರಿಸ್ತರು ಇಡೀ ಸಮಾಜದ ಒಳಿತನ್ನು ಬಯಸಿದ್ದರು. ನಾವೂ ಕೂಡ ಪರಸ್ಪರ ಪ್ರೀತಿ ಹಂಚಿ ಏಸು ಕ್ರಿಸ್ತರ ಆದರ್ಶವನ್ನು ಅನುಕರಣೆ ಮಾಡಬೇಕು ಎಂದರು.
ವಾರ್ಷಿಕ ಮಹೋತ್ಸವದ ಮೂರನೇ ದಿನವಾದ ಮಂಗಳವಾರ ಒಟ್ಟು 11 ಬಲಿಪೂಜೆಗಳು ನೆರವೇರಲಿವೆ. ಬೆಳಗ್ಗೆ 10.30ಕ್ಕೆ ಪುತ್ತೂರು ಧರ್ಮಪ್ರಾಂತದ ಧರ್ಮಾಧ್ಯಕ್ಷ ರೈ| ರೆ| ಡಾ| ಗೀವರ್ಗೀಸ್ ಮಾರ್ ಮಕಾರಿಯೊಸ್ ಕಲಯಿಲ್ ಹಾಗೂ ಸಂಜೆ 6ಕ್ಕೆ ಶಿವಮೊಗ್ಗದ ಧರ್ಮಾಧ್ಯಕ್ಷ ರೈ| ರೆ| ಡಾ| ಫ್ರಾನ್ಸಿಸ್ ಸೆರಾವೊ ಅವರಿಂದ ಕನ್ನಡ ಭಾಷೆಯಲ್ಲಿ ಬಲಿಪೂಜೆ ನೆರವೇರಲಿದೆ. 7ಕ್ಕೆ ಕೊಂಕಣಿಯಲ್ಲಿ ಬಲಿ ಪೂಜೆ ನಡೆಯಲಿದೆ.