Advertisement
ಎರಡೂ ಪಕ್ಷಗಳ ಹಗ್ಗಜಗ್ಗಾಟದಿಂದ ಅತಂತ್ರ ಸ್ಥಿತಿ ತಲುಪಿರುವ ಮಾಜಿ ಸಚಿವ ಸೋಮಶೇಖರ್, ಅತ್ತ ತಮ್ಮ ಬೆಂಬಲಿಗರನ್ನು ಕಾಂಗ್ರೆಸ್‌ಗೆ ಸೇರಿಸಿದ್ದು, ಇತ್ತ ಆ. 25ರಂದು ಬಿಜೆಪಿ ವರಿಷ್ಠರನ್ನು ಭೇಟಿ ಮಾಡಲು ದಿಲ್ಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ರಾಷ್ಟ್ರೀಯ ಸಂಘಟನ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಭೇಟಿಯಾಗುವ ಸಾಧ್ಯತೆಗಳಿವೆ. ದಿಲ್ಲಿಗೆ ಬರುವಂತೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ನಿರ್ಮಲ ಕುಮಾರ್ ಸುರಾನ ಮೂಲಕ ಬಿ.ಎಲ್. ಸಂತೋಷ್ ಅವರು ಸೋಮಶೇಖರ್‌ಗೆ ಸಂದೇಶ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ.
ಪ್ರಸ್ತುತ ಪರಿಸ್ಥಿತಿಯಲ್ಲಿ ಸೋಮಶೇಖರ್ ತಮ್ಮ ಮುಂದೆ ಎರಡು ಆಯ್ಕೆಗಳನ್ನು ಇಟ್ಟುಕೊಂಡು, ಸಾಧಕ-ಬಾಧಕಗಳ ಚಿಂತೆಯಲ್ಲಿ ಮುಳುಗಿದ್ದಾರೆ. ಬೆಂಬಲಿಗರನ್ನು ಕಾಂಗ್ರೆಸ್‌ನಲ್ಲಿ ದಡ ಮುಟ್ಟಿಸಿ, ತಾವು ಬಿಜೆಪಿಯಲ್ಲೇ ಉಳಿಯುವ ಯೋಚನೆ ಒಂದೆಡೆಯಾದರೆ, ತಾವೂ ಕಾಂಗ್ರೆಸ್ ಸೇರುವ ಯೋಚನೆ ಇನ್ನೊಂದೆಡೆ ಇದೆ. ಕಾಂಗ್ರೆಸ್ ಸೇರುವುದರಿಂದ ಉಪಚುನಾವಣೆ ಎದುರಿಸಬೇಕಾಗುತ್ತದೆ. ಈಗಾಗಲೇ ಜೆಡಿಎಸ್‌ನ ಜವರಾಯಿ ಗೌಡರೊಂದಿಗೆ ಮಾಜಿ ಸಿಎಂ ಕುಮಾರಸ್ವಾಮಿ ಸಭೆ ನಡೆಸಿದ್ದು, ಸೋಮಶೇಖರ್ ಹಾಗೂ ಕಾಂಗ್ರೆಸ್ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ. ಉಪ ಚುನಾವಣೆಯಲ್ಲಿ ಸೋತು ಶಾಸಕ ಸ್ಥಾನ ಕಳೆದುಕೊಳ್ಳುವುದಕ್ಕಿಂತ ಬೆಂಬಲಿಗರನ್ನಷ್ಟೇ ಕಾಂಗ್ರೆಸ್ ಸೇರಿಸಿ, ತಾವು ಬಿಜೆಪಿಯಲ್ಲಿ ಪದಾಧಿಕಾರ ಗಿಟ್ಟಿಸಿಕೊಂಡು ಶಾಸಕರಾಗಿಯೇ ಉಳಿಯುವ ಯೋಚನೆಯಲ್ಲಿದ್ದಾರೆ.
Related Articles
– ಆರ್. ಅಶೋಕ್, ಮಾಜಿ ಸಚಿವ
Advertisement