Advertisement

ಎಸೆಸೆಲ್ಸಿ ಟಿಪ್ಸ್: ಹಿಂದಿ; ಕನಿಷ್ಠ ಸೂತ್ರಗಳನ್ನು ಪಾಲಿಸಿ ಗರಿಷ್ಠ ಅಂಕ ಗಳಿಸಿ

11:38 PM Mar 18, 2022 | Team Udayavani |

ಹಿಂದಿ ನಮ್ಮ ರಾಷ್ಟ್ರೀಯ ಭಾಷೆ. ಎಸೆಸೆಲ್ಸಿಯಲ್ಲಿ ಹಿಂದಿ ಭಾಷೆಯ ಕಲಿಕೆ ಅಷ್ಟೇನೂ ಕಷ್ಟದಾಯಕವಲ್ಲ. ಆದರೆ ಹಿಂದಿ ಕಲಿಕೆಯಲ್ಲಿ ಶಿಕ್ಷಕರ ಮಾರ್ಗದರ್ಶನ ಅತ್ಯಗತ್ಯವಾಗಿರುತ್ತದೆ. ಇಂಗ್ಲಿಷ್‌ ಮತ್ತು ಕನ್ನಡ ಭಾಷೆಗೆ ಹೋಲಿಸಿದಾಗ ಹಿಂದಿ ಒಂದಿಷ್ಟು ಕಠಿನ ಎಂದೆನಿಸಿದರೂ ಪ್ರಾಥಮಿಕ ತರಗತಿಗಳಲ್ಲಿ ಹಿಂದಿ ಭಾಷೆಯನ್ನು ಸಮರ್ಪಕವಾಗಿ ಅರ್ಥೈಸಿಕೊಂಡು ಕಲಿತಿದ್ದರೆ ಪ್ರೌಢ ತರಗತಿಗಳಲ್ಲಿ ಹಿಂದಿ ಕಲಿಕೆ ತೀರಾ ಸರಳ. ಆದರೆ ಕಳೆದೆರಡು ವರ್ಷಗಳಲ್ಲಿ ಭೌತಿಕ ತರಗತಿಗಳು ಸಮರ್ಪಕವಾಗಿ ನಡೆಯದೇ ಇದ್ದುದರಿಂದ ವಿದ್ಯಾರ್ಥಿಗಳಿಗೆ ಹಿಂದಿ ಒಂದಿಷ್ಟು ಕಠಿನ ಎಂಬ ಭಾವನೆ ಮೂಡಿರುವುದು ಸಹಜ. ಹಾಗೆಂದು ತೀರಾ ಆತಂಕಪಡುವ ಅಗತ್ಯವಿಲ್ಲ. ಹಿಂದಿ ಪಠ್ಯದ ಬಗೆಗೆ ಯಾವುದೇ ಸಂಶಯಗಳು, ಪ್ರಶ್ನೆಗಳು ಕಾಡಿದಲ್ಲಿ ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶನ ಪಡೆದುಕೊಳ್ಳಬೇಕು. ಏಕಾಗ್ರತೆಯಿಂದ ಮನಸ್ಸಿಟ್ಟು ಅಭ್ಯಸಿಸಿದಲ್ಲಿ ಹಿಂದಿಯಲ್ಲಿ ಗರಿಷ್ಠ ಅಂಕಗಳನ್ನು ಪಡೆಯಬಹುದಾಗಿದೆ.

Advertisement

ಕೊರೊನಾ ಬರುವುದಕ್ಕಿಂತ ಮೊದಲು ಪ್ರತೀ ತರಗತಿಯಲ್ಲಿ 50 ವಿದ್ಯಾರ್ಥಿಗಳಲ್ಲಿ ಮೂರ್‍ನಾಲ್ಕು ವಿದ್ಯಾರ್ಥಿಗಳಿಗೆ ಹಿಂದಿ ಬಹಳ ಕಷ್ಟವಾಗುತ್ತಿತ್ತು. ಕೊರೊನಾದ ಪ್ರಭಾವದಿಂದ ತರಗತಿಗಳು ಸರಿಯಾಗಿ ನಡೆಯಲಿಲ್ಲ. ಈಗ ಪ್ರತೀ ತರಗತಿಯ 50 ವಿದ್ಯಾರ್ಥಿಗಳಲ್ಲಿ ಶೇ.20ರಷ್ಟು ವಿದ್ಯಾರ್ಥಿಗಳಿಗೆ ಹಿಂದಿ ಕಠಿನವಾಗಿದೆ. ಹೀಗಾಗಿ  ಪಾಸಿಂಗ್‌ ಪ್ಯಾಕೇಜ್‌ ಅತೀ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಎಸೆಸೆಲ್ಸಿ ಹಿಂದಿ ಪರೀಕ್ಷೆಗೆ ಸಿದ್ಧತೆ ಹೇಗಿರಬೇಕು, ಗರಿಷ್ಠ ಅಂಕಗಳನ್ನು ಪಡೆಯಲು ಸೂತ್ರಗಳು ಯಾವುವು ಎಂಬುದನ್ನು ಬೆಳ್ಮಣ್‌ ಸರಕಾರಿ ಪಿಯು ಕಾಲೇಜಿನ ಹಿಂದಿ ಪ್ರಾಧ್ಯಾಪಕಿ ಹಾಗೂ ವಿಷಯ ತಜ್ಞೆ ಡಾ| ಮಾಲತಿ ಪೈ ಅವರು ಇಲ್ಲಿ ವಿವರಿಸಿದ್ದಾರೆ.

ಹಿಂದಿಯಲ್ಲಿ 8 ವಸ್ತುನಿಷ್ಠ ಪ್ರಶ್ನೆಗಳು ಇರುತ್ತವೆ. ವ್ಯಾಕರಣ ಭಾಗದಿಂದ ಪ್ರಶ್ನೆಗಳಿರುತ್ತವೆ. ವಿಲೋಮ, ವಚನ, ಲಿಂಗ, ಸಮಾನಾರ್ಥಕ, ಪ್ರೇರಣಾರ್ಥಕ, ಮುಹಾವರೆ, ಕಾರಕ, ವಿರಾಮ ಚಿಹ್ನೆಗಳು, ಸಂಧಿ, ಸಮಾಸ ಇತ್ಯಾದಿ ವ್ಯಾಕರಣ ಅಂಶಗಳ ಮೇಲೆ ಪ್ರಶ್ನೆಗಳಿಗೆ ನಾಲ್ಕು ಆಯ್ಕೆ ಉತ್ತರಗಳನ್ನು ಕೊಡಲಾಗಿರುತ್ತದೆ. ಅದರಲ್ಲಿ ಸರಿಯಾದ ಉತ್ತರ ಆರಿಸಿ ಬರೆಯಬೇಕು. ಅನುರೂಪತಾ ಪ್ರಶ್ನೆಗಳ ವಿಭಾಗದಲ್ಲಿ ಪದಗಳ ಸಹಸಂಬಂಧ ಜೋಡಿಸಬೇಕು. ಗಮನವಿಟ್ಟು ಓದಿ ಉತ್ತರಿಸಬೇಕಾಗುತ್ತದೆ. ಇದಕ್ಕಾಗಿ ಪ್ರತೀ ಅಧ್ಯಾಯದ ಪ್ರಮುಖ ಅಂಶಗಳನ್ನು ಒಂದು ಸಾಲಿನಲ್ಲಿ ಬರೆದು ನೆನಪಿಟ್ಟುಕೊಳ್ಳಬೇಕು.

ಒಂದು ಅಂಕದ ಪ್ರಶ್ನೆಗಳು: ಇದರಲ್ಲಿ ನಾಲ್ಕು ಪ್ರಶ್ನೆಗಳನ್ನು ಕೇಳಲಾಗುತ್ತದೆ. ಸರಳ -ನೇರ ಪ್ರಶ್ನೆಗಳಾಗಿದ್ದು, ಇಡೀ ವಾಕ್ಯದಲ್ಲಿ ಉತ್ತರಿಸಬೇಕಾಗುತ್ತದೆ.

2 ಅಂಕದ ಪ್ರಶ್ನೆಗಳು: ಇದರಲ್ಲಿ 8 ಪ್ರಶ್ನೆಗಳಿರುತ್ತವೆ. 2 ಪ್ರಶ್ನೆಗಳು ಪೂರಕ ವಾಚನ ಪಾಠಗಳಾದ “ಶನಿ ಸಬ್‌ಸೇ ಸುಂದರ್‌ ಗ್ರಹ್‌’ ಮತ್ತು  “ಸತ್ಯ ಕೀ ಮಹಿಮಾ’ ದಿಂದ 4 ಪ್ರಶ್ನೆಗಳು ಬರುತ್ತವೆ.  ಇವುಗಳಲ್ಲಿ 2 ಪ್ರಶ್ನೆಗಳಿಗೆ  ಮಾತ್ರ ಉತ್ತರಿಸಬೇಕಾಗುತ್ತದೆ. ಹೀಗಾಗಿ ಈ ಎರಡು ಪಾಠಗಳನ್ನು ಹೆಚ್ಚು ಅಧ್ಯಯನ ಮಾಡಬೇಕು.

Advertisement

3 ಅಂಕದ ಪ್ರಶ್ನೆಗಳು: ಇದರಲ್ಲಿ 9 ಪ್ರಶ್ನೆಗಳು ಇರುತ್ತವೆ. ತುಲಸೀ ಕೇ ದೋಹೇ-ದೋಹಾದಿಂದ ಒಂದು ಪ್ರಶ್ನೆ ಬಂದಿರುತ್ತದೆ. 5 ದೋಹಾಗಳ ಭಾವಾರ್ಥ ತಯಾರಿ ಮಾಡಿಕೊಂಡಿದ್ದಲ್ಲಿ ಅದನ್ನು ಬರೆದು 3 ಅಂಕಗಳನ್ನು ಗಳಿಸಬಹುದು. ಇನ್ನೊಂದು ಪ್ರಶ್ನೆ ಮಾತೃಭಾಷೆಗೆ ಅನುವಾದ ಮಾಡುವುದಿರುತ್ತದೆ. ಇನ್ನುಳಿದವು ಗದ್ಯ ಪದ್ಯಗಳಿಂದ ಬಂದಿರುತ್ತದೆ. 4 ಪದ್ಯಗಳು (ಮಾತೃಭೂಮಿ, ಅಭಿನವ ಮನುಷ್ಯ, ಸಮಯ್‌ ಕೀ ಪಹಚಾನ್‌ ಮತ್ತು ಕೋಶಿಶ್‌ ಕರ್ನೇವಾಲೋಂಕೀ ಕಭೀ ಹಾರ್‌ ನಹೀಂ ಹೋತೀ) ಹಾಗೂ ದೋಹಾ ಓದಿ ನೆನಪಿಟ್ಟುಕೊಳ್ಳಬೇಕು. ಆಗ ಪದ್ಯಭಾಗದಿಂದ ಯಾವುದೇ ಪ್ರಶ್ನೆ ಬಂದರೂ ಸುಲಭವಾಗಿ ಉತ್ತರಿಸಲು ಸಾಧ್ಯವಿದೆ.

4 ಅಂಕದ ಪ್ರಶ್ನೆಗಳು: ದೀರ್ಘ‌ ಉತ್ತರ ವಿಭಾಗದಲ್ಲಿ ಕೇಳಲಾಗುವ ಪ್ರಶ್ನೆಗಳನ್ನು ಉತ್ತರಿಸುವುದಕ್ಕಾಗಿ ಗಿಲ್ಲು, ಬಸಂತ ಕೀ ಸಚ್ಚಾಯಿ, ಕರ್ನಾಟಕ ಸಂಪದಾ ಪಾಠಗಳ ತಯಾರಿ ಮಾಡಿಕೊಳ್ಳಬೇಕು. ನಿಬಂಧ ತಯಾರಿಗಾಗಿ ಪಠ್ಯದ ಕರ್ನಾಟಕ ಸಂಪದಾ ಮತ್ತು ಇಂಟರ್‌ನೆಟ್‌ ಕ್ರಾಂತಿ ಅಧ್ಯಾಯವನ್ನು ಹೆಚ್ಚು ಗಮನವಿಟ್ಟು ಓದಿಕೊಳ್ಳಬೇಕು.

ಕಂಠಪಾಠ ಪದ್ಯ: ಕೋಶಿಶ್‌ ಕರ್ನೇವಾ ಲೋಂಕಿ ಕಭೀ ಹಾರ್‌ ನಹೀ ಹೋತಿ ಪದ್ಯದ ಕೊನೆಯ ಸಾಲುಗಳನ್ನು ಕೇಳಲಾಗುತ್ತದೆ. ಈ ಸಾಲುಗಳನ್ನು ಬರೆದು, ಬರೆದು ಕಂಠಪಾಠ ಮಾಡಿಕೊಳ್ಳುವುದು ಉತ್ತಮ.

5 ಅಂಕದ ಪ್ರಶ್ನೆ ಪತ್ರಲೇಖನ: ವ್ಯವಹಾರಿಕ ಪತ್ರದಲ್ಲಿ ರಜೆ ಕೇಳುವ ಪತ್ರವನ್ನು ಮುಖ್ಯ ಶಿಕ್ಷಕರನ್ನು ಉದ್ದೇಶಿಸಿ ಬರೆಯಬೇಕು. ವೈಯಕ್ತಿಕ ಪತ್ರದಲ್ಲಿ ಅಭ್ಯಾಸ ಅಥವಾ ಆರೋಗ್ಯದ ಕುರಿತು ತಂದೆ, ತಾಯಿ ಅಥವಾ  ಸಂಬಂಧಿಕರಿಗೆ  ಪತ್ರ  ಬರೆಯಬೇಕಾಗುತ್ತದೆ. ಯಾವುದಾದರೊಂದು ಪತ್ರ ಆಯ್ಕೆ ಮಾಡಿ ಬರೆಯಬೇಕಾಗುತ್ತದೆ.

ಇನ್ನಷ್ಟು ಸಲಹೆಗಳು: ಮಾದರಿ ಪ್ರಶ್ನೆ ಪತ್ರಿಕೆಯ ಸಣ್ಣ ಮತ್ತು ದೊಡ್ಡ ಉತ್ತರಗಳ ಪ್ರಶ್ನೆಗಳನ್ನು ಗಮನಿಸಬೇಕು. ಪ್ರಶ್ನೆಯೊಂದಿಗೆ ಉತ್ತರ ಎಷ್ಟಿರಬೇಕು, ಹೇಗೆ ಬರೆದರೆ ಅನುಕೂಲ ಎಂಬುದನ್ನು ಆಯಾ ಪಠ್ಯದ ಕೊನೆಗೆ ಇರುವ ನೋಟ್ಸ್‌ ಓದಿ ತಿಳಿದುಕೊಂಡು ನೆನಪಿಟ್ಟುಕೊಳ್ಳುವುದು. ಮುಖ್ಯವಾದ ಪಾಠಗಳನ್ನು ಗಮನಿಸಿ, ಸಣ್ಣ ಸಣ್ಣ ಅಂಶಗಳನ್ನು ನೆನಪಿಟ್ಟುಕೊಳ್ಳಿ. ಹಿಂಜ ರಿಕೆ ಬೇಡ. ಚೆನ್ನಾಗಿ ಓದಿ,  ಪುನರಾವರ್ತಿಸಿ. ಸಂದೇಹಗಳೇನೇ ಇದ್ದರೂ ನಿಮ್ಮ ಗುರು ಗಳನ್ನು ಕೇಳಿ ಬಗೆಹರಿಸಿಕೊಳ್ಳಬೇಕು. ಟಿ.ವಿ., ಮೊಬೈಲ್‌ನಿಂದ ದೂರವಿದ್ದು, ಓದು, ಪರೀಕ್ಷೆಯ ಕಡೆಯೇ ಗಮನ ಇರಲಿ. ಸರಿಯಾಗಿ ನಿದ್ದೆ ಹಾಗೂ ನಿತ್ಯದ ವ್ಯಾಯಾಮವನ್ನು ಅವಗಣಿಸಬೇಡಿ. ಒತ್ತಡಗಳಿಂದ ದೂರವಾಗಿ ಪರೀಕ್ಷೆಯನ್ನು ಸಂತೋಷದಿಂದ ಎದುರುಗೊಳ್ಳಿ. ಖಂಡಿತ ಯಶಸ್ಸು ನಿಮ್ಮದಾಗಲಿದೆ.

ಹಿಂದಿ ಪಠ್ಯವನ್ನು ಓದುವ ಸಂದರ್ಭ ದಲ್ಲಿ ಪ್ರತಿಯೊಂದೂ ಅಧ್ಯಾಯದ ಪ್ರಮುಖಾಂಶಗಳನ್ನು ಟಿಪ್ಪಣಿ ಮಾಡಿಕೊಳ್ಳ ಬೇಕು. ಇದು ಪರೀಕ್ಷೆ ಸಮೀಪಿಸಿದಾಗ ವಿದ್ಯಾರ್ಥಿಗಳಿಗೆ ಅನುಕೂಲವಾಗು ತ್ತದೆ. ವ್ಯಾಕರಣವನ್ನು ಸರಿಯಾಗಿ ಅರ್ಥೈಸಿಕೊಂಡಲ್ಲಿ ಉತ್ತರಗಳ ಆಯ್ಕೆ ಸುಲಭವಾಗು ತ್ತದೆ. ಸಾಧ್ಯವಾ ದಷ್ಟು ಈ ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳಲ್ಲಿ ಕೇಳ ಲಾದ ಪ್ರಶ್ನೆಗಳಿಗೆ ಉತ್ತರಗಳನ್ನು ಬರೆದು ಅಭ್ಯಾಸ ಮಾಡಿಕೊಂಡರೆ ಉತ್ತಮ. ಪುನರಾವರ್ತನೆಯಾದ ಮತ್ತು ಪ್ರಮುಖ ಪಾಠಗಳ ಪ್ರಶ್ನೆಗಳತ್ತ ಗಮನವನ್ನು ಕೇಂದ್ರೀಕ ರಿಸಿ ಓದಿದಲ್ಲಿ ಪರೀಕ್ಷೆಯಲ್ಲಿ ಗರಿಷ್ಠ ಅಂಕಗಳನ್ನು ಪಡೆಯಬಹುದು.

-ಡಾ| ಮಾಲತಿ ಪೈ

Advertisement

Udayavani is now on Telegram. Click here to join our channel and stay updated with the latest news.

Next