Advertisement
ಕನ್ನಡ ಪರೀಕ್ಷೆಯನ್ನು ಸುಲಭ ವಾಗಿ ಎದುರಿಸಲು ಕೀ ವರ್ಡ್ಸ್ :
Advertisement
ಕವಿ ಪರಿಚಯವನ್ನು ಕಂಠಪಾಠ ಮಾಡಬಾರದು. ಕವಿಯ ಪರಿಚ ಯದ ಜತೆಗೆ ಆ ಪಾಠದ ಹೆಸರು ನೆನಪಿಟ್ಟುಕೊಳ್ಳಬೇಕು. ಇದ ರಿಂದ ಸುಲಭವಾಗಿ ಎರಡು ಅಥವಾ ಮೂರು ಅಂಕಗಳನ್ನು ಕವಿ ಪರಿಚ ಯದಲ್ಲಿ ಪಡೆಯಬಹುದು. ಉದಾ: ಪು.ತಿ. ನರಸಿಂಹಾಚಾರ್- ಕವಿಯಾಗಿದ್ದು, ಇವರ ಕೃತಿ ಶಬರಿ, ವಿ.ಕೃ. ಗೋಕಾಕರ ಕೃತಿ ಲಂಡನ್ ನಗರ ಇದೊಂದು ಪ್ರವಾಸ ಕಥನ, ಯುದ್ಧ ಪಾಠ ಸಾರಾ ಅಬೂಬಕರ್ ಅವರದು ಎಂಬುದು ನೆನಪಿದ್ದರೆ ಸಾಕು. ಇವಿಷ್ಟನ್ನು ಬರೆದರೂ ಕನಿಷ್ಠ ಎರಡು ಅಂಕಗಳು ಸಿಗಲಿವೆ.
ಷಟ್ಪದಿ :
ಲಘು, ಗುರು ಹಾಕುವಾಗ ಸ್ವಲ್ಪ ಗಮನ ಹರಿಸಬೇಕಾಗುತ್ತದೆ. ಒಂದೇ ಸಾಲಿನ ಪದ್ಯ ಕೇಳಿದರೆ ಅದು ಖ್ಯಾತ ಕರ್ನಾಟಕ ವೃತ್ತವೇ ಆಗಿರುತ್ತದೆ. ಎರಡು ಸಾಲಿನ ಪದ್ಯ ಕೇಳಿದರೆ ಅದು ಕಂದ ಪದ್ಯವೇ ಆಗಿರುತ್ತದೆ. ಮೂರು ಸಾಲಿನ ಪದ್ಯ ಕೇಳಿದರೆ ಷಟ್ಪದಿ ಆಗಿರುತ್ತದೆ. ಷಟ್ಪದಿಯಲ್ಲಿ ಎರಡು ಪದ್ಯ ಇದೆ. ಲವ-ಕುಶನ ಕಥೆ ಬಂದರೆ ಅದು ವಾರ್ಧಕ ಷಟ್ಪದಿ, ಕೃಷ್ಣ-ಕರ್ಣರ ಕಥೆ ಬಂದರೆ ಭಾಮಿನಿ ಷಟ್ಪದಿ ಆಗಿರುತ್ತದೆ. ಇವಿಷ್ಟು ನೆನಪಿಟ್ಟುಕೊಂಡರೆ ಲಘು, ಗುರು ಹಾಕುವುದು ಸುಲಭವಾಗುತ್ತದೆ.
ಪ್ಯಾರಗ್ರಾಫ್ :
ಪ್ಯಾರಗ್ರಾಫ್ ಓದಿ ಬರೆಯು ವಾಗ ಕೊಟ್ಟ ಪ್ರಶ್ನೆಯನ್ನು ಚೆನ್ನಾಗಿ ಓದಿಕೊಂಡು ಅದರಲ್ಲಿರು ವುದನ್ನೇ ಉತ್ತರಿಸಬೇಕಾಗುತ್ತದೆ. ಉದಾ: ಯುದ್ಧದ ಬಗ್ಗೆ ಬಂದಿದ್ದರೆ, ಎರಡು ಬಗೆಯ ಯುದ್ಧ ಎನ್ನುವ ಪದ ಎಲ್ಲಿದೆ ಎಂಬುದನ್ನು ಗುರುತಿಸಿಟ್ಟುಕೊಳ್ಳಬೇಕು. ಅದರ ಮೇಲಿನಿಂದ ಕೆಳಗೆ ಬರೆಯಬೇಕಾಗುತ್ತದೆ. ಶಬ್ದವನ್ನು ಸರಿಯಾಗಿ ಅರ್ಥಮಾಡಿಕೊಂಡು, ಎರಡು ಭಾಗ ಮಾಡಿಕೊಂಡು ಪ್ಯಾರಗ್ರಾಫ್ ಬರೆದರೆ ಬಹುತೇಕ ಅಂಕ ಸಿಗುತ್ತದೆ. ಇಲ್ಲಿಯೂ ಕೀ ವರ್ಡ್ಸ್‌ಗಳು ಹೆಚ್ಚು ಉಪಯೋಗಕ್ಕೆ ಬರುತ್ತವೆ.
ಸಾರಾಂಶ :
ಪದ್ಯವನ್ನು ಕೊಟ್ಟು ಅದರ ಸಾರಾಂಶ ಬರೆಯಲು ಹೇಳು ತ್ತಾರೆ. ಕೊಟ್ಟಿರುವ ಪದ್ಯವನ್ನೇ ಕವಿ ಹಾಗೂ ಪದ್ಯದ ಹೆಸರು ಸಹಿತ ವಾಗಿ ನೇರವಾಗಿ ಬರೆದುಕೊಂಡು ಹೋದರೂ ಅಂಕ ಸಿಗುತ್ತದೆ. ಸಾರಾಂಶ ಗೊತ್ತಿದ್ದರೆ ಅದನ್ನು ಮೊದಲಿಗೆ ಬರೆಯುವ ಪ್ರಯತ್ನ ಮಾಡಬೇಕು. ಪತ್ರ ಲೇಖನದಲ್ಲೂ ಏನು ಕೇಳಿದ್ದಾರೆ ಎಂಬುದನ್ನು ಅರ್ಥಮಾಡಿಕೊಂಡು, ಇವರಿಂದ, ಇವರಿಗೆ, ದಿನಾಂಕ, ಸ್ಥಳ ಇಷ್ಟನ್ನು ಸರಿಯಾಗಿ ಬರೆಯಬೇಕು.
ಪ್ರಮುಖ ಪಾಠ, ಪದ್ಯ, ಕಥೆ :
ವಾಘ್ರಗೀತೆ, ಶಬರಿ, ಲಂಡನ್ ನಗರ, ವೃಕ್ಷಸಾಕ್ಷಿ, ವೀರಲವ, ಭಾಗ್ಯಶಿಲ್ಪಿಗಳು, ಕೌರವೇಂದ್ರನ ಕೊಂದೆ ನೀನು ಇತ್ಯಾದಿ ಪಾಠ, ಪದ್ಯ ಹಾಗೂ ಸಣ್ಣ ಕಥೆಯ ಜತೆಗೆ ಕವಿ ಪರಿಚಯ ತಿಳಿದುಕೊಳ್ಳಬೇಕು. ಈ ವರ್ಷ ಡಾ| ಜಿ.ಎಸ್.ಶಿವರುದ್ರಪ್ಪ ಅವರ ಬಗ್ಗೆ ಪ್ರಶ್ನೆ ಬಂದರೂ ಬರಬಹುದು.
ಅರ್ಥವಾಗುವುದನ್ನೇ ಚೆನ್ನಾಗಿ ಓದಿ :
ಯಾವ ಅಧ್ಯಾಯ ಸುಲಭ ಇದೆಯೋ ಅದನ್ನೇ ಚೆನ್ನಾಗಿ ಓದಿ ನೆನಪಿಟ್ಟು ಕೊಳ್ಳಬೇಕು. ಯಾವುದು ಕಷ್ಟ ಎಂಬ ಭಾವನೆ ಇದೆಯೋ ಅದರಲ್ಲಿ ಪ್ರಮುಖಾಂಶ ಗಳನ್ನು ಗೊತ್ತುಮಾಡಿ ಕೊಂಡು ಓದಬೇಕು. ಕನ್ನಡದಲ್ಲಿ ಸಣ್ಣ ಸಣ್ಣ ಕಥೆಗಳು ಇರುವುದರಿಂದ ನೆನಪಿಟ್ಟುಕೊಳ್ಳುವುದಕ್ಕೂ ಸುಲಭವಾಗುತ್ತದೆ. ಇನ್ನು ಪರೀಕ್ಷೆ ಸಂದರ್ಭದಲ್ಲಿ ಮೊದಲು ನಿಮಗೆ ಉತ್ತರ ಗೊತ್ತಿರುವ ಪ್ರಶ್ನೆಗಳಿಗೆ ಮೊದಲು ಉತ್ತರಿಸಿ. ಆ ಬಳಿಕ ಒಂದಿಷ್ಟು ಗೊಂದಲದ ಪ್ರಶ್ನೆಗಳಿಗೆ ಉತ್ತರಗಳನ್ನು ಬರೆಯಿರಿ. ಇನ್ನು ನಿಮಗೆ ಕಷ್ಟದಾಯಕ ಎಂದು ಅನಿಸಿದ ಪ್ರಶ್ನೆಗಳಿಗೆ ನಿಮಗೆ ತಿಳಿದಿರುವುದಷ್ಟನ್ನು ಬರೆಯಿರಿ. ಹೀಗೆ ನಿಗದಿತ ಸಮಯದಲ್ಲಿ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ.
-ಡಾ| ಕಿಶೋರ್ ಕುಮಾರ್ ಶೆಟ್ಟಿ