Advertisement

ಎಸೆಸೆಲ್ಸಿ ಪರೀಕ್ಷೆ: ಎಸ್‌ಒಪಿ ಬಿಡುಗಡೆ

10:43 PM Jun 23, 2021 | Team Udayavani |

ಬೆಂಗಳೂರು: ಜುಲೈ ಮೂರನೇ ವಾರದಲ್ಲಿ ನಡೆಯ ಲಿರುವ ಎಸೆಸೆಲ್ಸಿ ಪರೀಕ್ಷೆಗಾಗಿ ಬುಧವಾರ ಪ್ರತ್ಯೇಕ ಪ್ರಮಾಣಿತ ಕಾರ್ಯವಿಧಾನ (ಎಸ್‌ಒಪಿ)ಗಳನ್ನು ಬಿಡುಗಡೆ ಮಾಡಿರುವ ಸಾರ್ವಜನಿಕ ಶಿಕ್ಷಣ ಇಲಾಖೆ, ಶಿಕ್ಷಕರು ಸಹಿತ ಇಡೀ ಪ್ರಕ್ರಿಯೆಯಲ್ಲಿ ಮುಂಚೂ ಣಿಯಲ್ಲಿರುವ ಸಿಬಂದಿ ಕನಿಷ್ಠ ಒಂದು ಡೋಸ್‌ ಕೋವಿಡ್‌ ಲಸಿಕೆ ಪಡೆದಿ ರಬೇಕು. ಅಲ್ಲದೆ, ಆಯಾ ಸಂದರ್ಭಕ್ಕೆ ಅನುಗುಣವಾಗಿ ರ್ಯಾಪಿಡ್‌ ಆ್ಯಂಟಿ ಜೆನ್‌ ಟೆಸ್ಟ್‌ ಅಥವಾ ಆರ್‌ಟಿಪಿಸಿಆರ್‌ ಪರೀಕ್ಷೆಗೆ ಒಳಪಡಬೇಕು. ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಎಸ್‌ಒಪಿ ಅನುಷ್ಠಾನದ ಬಗ್ಗೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂ. ಸಿಇಒಗಳು ಖಾತ್ರಿಪಡಿಸಿಕೊಳ್ಳಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ತಿಳಿಸಿದ್ದಾರೆ.

Advertisement

ಒಂದು ಕೊಠಡಿಯಲ್ಲಿ 12 ಮಕ್ಕಳಿಗೆ ಮಾತ್ರ ಅವಕಾಶ ಇರುತ್ತದೆ. ಒಂದು ಡೆಸ್ಕ್ ಗೆ ಒಬ್ಬ ಪರೀಕ್ಷಾರ್ಥಿ ಇರಬೇಕು. ಪ್ರತಿದಿನ ಪರೀಕ್ಷೆ ಆರಂಭಕ್ಕೂ ಮುನ್ನ ಮತ್ತು ಬಳಿಕ ಎಲ್ಲ ಕಡೆ ಸ್ಯಾನಿಟೈಸ್‌ ಮಾಡಬೇಕು.

 2 ಪ್ರತ್ಯೇಕ ಕೊಠಡಿ :

ಕೆಮ್ಮು, ನೆಗಡಿ, ಜ್ವರ ಮತ್ತಿತರ ಸಮಸ್ಯೆಗಳಿರುವ ಅಥವಾ ಈ ಲಕ್ಷಣಗಳಿರುವ ಅಭ್ಯರ್ಥಿಗಳಿಗಾಗಿ ಕನಿಷ್ಠ ಎರಡು ಕೊಠಡಿಗಳನ್ನು ಕಾದಿರಿಸಬೇಕು. ಪರೀಕ್ಷಾಕೇಂದ್ರ ಪ್ರವೇಶಿಸಿದ ಕೂಡಲೇ ನೇರವಾಗಿ ಆರೋಗ್ಯ ತಪಾಸಣ ಕೌಂಟರ್‌ ಪ್ರವೇಶಿಸುವಂತೆ ನಿರ್ದೇಶಿಸಬೇಕು. ಆರೋಗ್ಯ ಕೌಂಟರ್‌ಗಳು ಬೆಳಗ್ಗೆ 8.30ಕ್ಕೆ ಅರಂಭವಾಗಿ ಪರೀಕ್ಷಾ ಪ್ರಕ್ರಿಯೆ ಮುಗಿಯುವ ತನಕ ತೆರದಿರ ಲಿವೆ ಎಂದು  ಸಚಿವರು ತಿಳಿಸಿದ್ದಾರೆ.

ತಾಲೂಕಿಗೊಂದು ತುರ್ತು ಚಿಕಿತ್ಸಾ ವಾಹನ ಮೀಸಲಿಡಬೇಕು.  ಗಡಿ ಭಾಗದ  ಪರೀಕ್ಷಾರ್ಥಿಗಳಿಗೆ  ಜಿಲ್ಲಾಡಳಿತ ಅಗತ್ಯ ವ್ಯವಸ್ಥೆ ಮಾಡಬೇಕು ಎಂದು ಸಚಿವರು ತಿಳಿಸಿದ್ದಾರೆ.

Advertisement

ಕೋವಿಡ್‌ ಕೇರ್‌ ಸೆಂಟರ್‌:

ತಾಲೂಕಿಗೊಂದು ಕೋವಿಡ್‌ ಕೇರ್‌ ಕೇಂದ್ರಗಳನ್ನು ಸ್ಥಾಪಿಸಿ,  ಕೋವಿಡ್‌  ಸೋಂಕಿತರಿಗೆ ಅಲ್ಲಿಯೇ  ಪರೀಕ್ಷೆ ಬರೆಯುವ ವ್ಯವಸ್ಥೆ ಮಾಡಲಾಗುವುದು. ಗ್ರಾಮೀಣ ಭಾಗದ ಅಭ್ಯರ್ಥಿಗಳು ಸಾಧ್ಯವಾದಷ್ಟು ತಾಲೂಕು ಕೇಂದ್ರಗಳಿಗೆ ಹೋಗದಂತೆ ಪರೀಕ್ಷಾ ಕೇಂದ್ರಗಳನ್ನು ತೆರೆಯಬೇಕು ಎಂದು ಸಚಿವರು ಹೇಳಿದ್ದಾರೆ.

28ಕ್ಕೆ  ವೀಡಿಯೋ ಕಾನ್ಫರೆನ್ಸ್‌  :ಪರೀಕ್ಷೆಗೆ ಸಂಬಂಧಿಸಿ ಜೂ. 28ರಂದು ಜಿಲ್ಲಾಧಿಕಾರಿಗಳು, ಜಿಪಂ ಸಿಇಒ, ಎಸ್‌ಪಿಗಳು, ಜಿಲ್ಲಾ ಆರೋಗ್ಯಾಧಿಕಾರಿ, ಖಜಾನೆ ಅಧಿಕಾರಿಗಳು ಸಹಿತ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ನಡೆಸಲಾಗುವುದು. ಸಭೆಯಲ್ಲಿ ಆರೋಗ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಮತ್ತು ಆಯುಕ್ತರು ಭಾಗಿಯಾಗುವರು ಎಂದು ಸಚಿವರು ತಿಳಿಸಿದ್ದಾರೆ.

  • ಮನೆಯಿಂದ ನೀರು ಮತ್ತು ಊಟ ತರಬಹುದು.
  • ಪಾಸಿಟಿವ್‌ ಬಂದು, ಪರೀಕ್ಷೆಗೆ ಗೈರಾದರೆ, ಅಂತಹವರಿಗೆ ಪೂರಕ ಪರೀಕ್ಷೆ ಬರೆಯಲು ಅವಕಾಶವಿದ್ದು, ಅದನ್ನು “ಪ್ರಥಮ ಪರೀಕ್ಷೆ’ ಎಂದು ಪರಿಗಣಿಸಲಾಗುವುದು
  • ಗಡಿ ಭಾಗದ ಅಥವಾ ರಾಜ್ಯದಿಂದ ಹೊರಗೆ ವಲಸೆ ಹೋಗಿ ಪರೀಕ್ಷೆ ಬರೆಯಲಾಗದಿದ್ದರೆ, ಅಂಥವರಿಗೆ ಪೂರಕ ಪರೀಕ್ಷೆಯಲ್ಲಿ ಅವಕಾಶ ನೀಡಲಾಗುವುದು
  • ಸೋಂಕಿತರಿದ್ದರೆ ಪರೀಕ್ಷಾ ಪ್ರಾಧಿಕಾರಕ್ಕೆ ಅಥವಾ ಅಧಿಕಾರಿಗಳಿಗೆ ಮೊದಲೇ ತಿಳಿಸಬೇಕು. ಅಂಥವರು  ಪರೀಕ್ಷೆ ಬರೆಯಲು ತನ್ನ ಆರೋಗ್ಯ ಸುಸ್ಥಿತಿಯಲ್ಲಿರುವ ಬಗ್ಗೆ  ವೈದ್ಯಕೀಯ ಪ್ರಮಾಣಪತ್ರ ಸಲ್ಲಿಸಬೇಕು.
Advertisement

Udayavani is now on Telegram. Click here to join our channel and stay updated with the latest news.

Next