Advertisement
ರಾಜ್ಯಾದ್ಯಂತ ಮಾ. 27ರಿಂದ ಎ. 9ರ ವರೆಗೆ ನಡೆಯ ಬೇಕಿದ್ದ ಪ್ರಸಕ್ತ ಸಾಲಿನ ಎಸೆಸೆಲ್ಸಿ ಪರೀಕ್ಷೆಗಳನ್ನು ಕೋವಿಡ್ 19 ಲಾಕ್ ಡೌನ್‌ನಿಂದಾಗಿ ಮುಂದೂಡಲಾಗಿತ್ತು. ಮಾ. 10ರಿಂದಲೇ ವಿದ್ಯಾರ್ಥಿಗಳಿಗೆ ಸಿದ್ಧತಾ ರಜೆ ನೀಡಲಾಗಿತ್ತು. ಏತನ್ಮಧ್ಯೆ ಮಾ. 23ರಿಂದ ಲಾಕ್‌ಡೌನ್ ರಜೆಯಿಂದಾಗಿ ಸುಮಾರು ಮೂರು ತಿಂಗಳ ಕಾಲ ಪರೀಕ್ಷೆ ಸಿದ್ಧತೆಗೆ ಅವ ಕಾಶ ದೊರತಿದೆ. ಈ ಅವಧಿಯಲ್ಲಿ ಯಾವುದೇ ಒತ್ತಡ ಇಲ್ಲದೆ, ಸಾವಕಾಶವಾಗಿ ಅಭ್ಯಾಸ ನಡೆಸಲು ಸಮಯ ಸಿಕ್ಕಂತಾಗಿದೆ.
ಜಿಲ್ಲೆಯಲ್ಲಿ ಒಟ್ಟು 30,605 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಈ ಪೈಕಿ 16,140 ಮಂದಿ ಬಾಲಕರು, 14,465 ಬಾಲಕಿಯರು. 91 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಪರೀಕ್ಷಾ ಸಿದ್ಧತೆಗಳು ನಡೆಯುತ್ತಿವೆ. ಕೋವಿಡ್ 19 ಭೀತಿ ಇರುವುದರಿಂದ ರಾಜ್ಯ ಇಲಾಖೆಯ ಸೂಚನೆಯಂತೆ ಹೆಚ್ಚು ವರಿ ಕೊಠಡಿಗಳ ಬಳಕೆ ಮಾಡಲಾ ಗುವುದು ಎಂದು ದ.ಕ. ಡಿಡಿಪಿಐ ಮಲ್ಲೇಸ್ವಾಮಿ ತಿಳಿಸಿದ್ದಾರೆ. ನಿರಾತಂಕವಾಗಿ ಓದಬಹುದು
ಈವರೆಗೆ ಲಾಕ್‌ಡೌನ್ ಮುಗಿದ ತತ್‌ಕ್ಷಣ ಏಕಾಏಕಿ ಪರೀಕ್ಷೆ ನಡೆಸುತ್ತಾರೆಯೋ ಎಂಬ ಬಗ್ಗೆ ಗೊಂದಲ ಮತ್ತು ಆತಂಕವಿತ್ತು. ಆದರೆ ಪ್ರಸ್ತುತ ಇನ್ನೂ ಒಂದು ತಿಂಗಳ ಕಾಲ ಹೆಚ್ಚುವರಿಯಾಗಿ ಓದಲು ಅವಕಾಶ ಸಿಕ್ಕಿದೆ. ಪರೀಕ್ಷೆ ದಿನಾಂಕವೂ ಘೋಷಣೆಯಾಗಿರುವುದರಿಂದ ನಿರಾತಂಕವಾಗಿ ಓದಬಹುದು.
-ಚಿತ್ತರಂಜನ್ ಎನ್.ಪಿ.,
ವಿದ್ಯಾರ್ಥಿ
Related Articles
ಪರೀಕ್ಷೆಯ ದಿನಾಂಕವನ್ನು ಘೋಷಣೆ ಮಾಡಿರುವುದರಿಂದ ಭಯ ಹೋಗಿದೆ. ಲಾಕ್‌ಡೌನ್ ಸಮಯದಲ್ಲಿ ಓದಿದ್ದು ಸ್ವಲ್ಪ ಕಡಿಮೆ. ಈಗ ಇನ್ನೂ ಒಂದು ತಿಂಗಳು ಓದಲು ಸಮಯವಿರುವುದರಿಂದ ಈ ಅವಧಿಯಲ್ಲಿ ಅಭ್ಯಾಸಕ್ಕೆ ಒತ್ತು ಕೊಡುತ್ತೇನೆ.
-ಗಗನ್, ವಿದ್ಯಾರ್ಥಿ
Advertisement