Advertisement
ಈ ಹಿಂದೆ ಫಲಿತಾಂಶ ಪ್ರಕಟವಾದಾಗ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ತಲಾ ಅಂಕ ಕಡಿಮೆ ಬಂದಿದ್ದು ಅದರಂತೆ ರಾಜ್ಯ ಮಟ್ಟದಲ್ಲಿ 2ನೇ ಸ್ಥಾನ ಗಳಿಸಿದ್ದ ಸುಜ್ಞಾನ್ “ಕಳೆದು ಹೋದ ಅಂಕಗಳ’ ಬಗ್ಗೆ ಸಕಾರಣವಾಗಿ ಸಂಶಯ ವ್ಯಕ್ತಪಡಿಸಿದರು. ಉತ್ತರ ಪತ್ರಿಕೆಗಳ ಯಥಾಪ್ರತಿ ತರಿಸಿ ಪರಿಶೀಲಿಸಿದಾಗ ಅನ್ಯಾಯವಾಗಿರುವುದು ಖಚಿತವಾಯಿತು. ಮರುಮೌಲ್ಯಮಾಪನ ಮಾಡಿಸಿದಾಗ ಈ ಪತ್ರಿಕೆಗಳಲ್ಲಿ ಶತಾಂಶ ಫಲಿತಾಂಶ ಬಂದಿರುವ ಜತೆಗೆ ಈಗ ಎಲ್ಲ ವಿಷಯಗಳಲ್ಲಿ 625ರಲ್ಲಿ 625 ಅಂಕಗಳಿಸುವ ಮೂಲಕ ಸುಜ್ಞಾನ್ ಎಸ್‌ಎಸ್‌ಎಲ್‌ಸಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ ಎಂದು ಅವರು ತಿಳಿಸಿದರು.
ಆಳ್ವಾಸ್ ಪಿಯು ಕಾಲೇಜಿನ ಪ್ರಾಂಶುಪಾಲ ಪ್ರೊ| ರಮೇಶ್ ಶೆಟ್ಟಿ-ಆರತಿ ಶೆಟ್ಟಿ ದಂಪತಿಯ ಪುತ್ರ ಸುಜ್ಞಾನ್, ಆಳ್ವಾಸ್ ಪಿಯು ಕಾಲೇಜಿನಲ್ಲಿ ವಿಜ್ಞಾನ ವಿಭಾಗ ಆಯ್ಕೆ ಮಾಡಿಕೊಂಡಿದ್ದು ಮುಂದೆ ವೈದ್ಯಕೀಯ ಕ್ಷೇತ್ರದಲ್ಲಿ ಸಂಶೋಧನೆ ಮಾಡುವ ಗುರಿ ಹೊಂದಿದ್ದಾರೆ. 2 ಅಂಕ ಕಡಿಮೆ ಬರಲು ಸಾಧ್ಯವೇ ಇರಲಿಲ್ಲ, ಈಗ 625 ಅಂಕಗಳನ್ನು ಪಡೆದಿರುವುದು ಖುಷಿಯಾಗಿದೆ. ಡಾ| ಎಂ. ಮೋಹನ ಆಳ್ವರ ಪ್ರೋತ್ಸಾಹ, ತಂದೆ, ತಾಯಿ, ಮುಖ್ಯಶಿಕ್ಷಕಿ, ಶಿಕ್ಷಕರ ಮಾರ್ಗದರ್ಶನ ಈ ಸಾಧನೆಗೆ ಸಹಕಾರಿಯಾಗಿದೆ. ತರಗತಿ ಅವಧಿಯಲ್ಲಿ ಏಕಾಗ್ರತೆಯಿಂದ ಪಾಠ ಕೇಳಿದ್ದು ನನಗೆ ವರದಾನವಾಗಿದೆ ಎಂದು ಸುಜ್ಞಾನ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮುಖ್ಯ ಶಿಕ್ಷಕಿ ಸಹನಾ ಹೆಗ್ಡೆ, ಸುಜ್ಞಾನ್ ಹೆತ್ತವರು, ಆಳ್ವಾಸ್ ಪಿಆರ್‌ಒ ಡಾ| ಪದ್ಮನಾಭ ಶೆಣೈ ಉಪಸ್ಥಿತರಿದ್ದರು.
Related Articles
ಸುಜ್ಞಾನ್ ಅವರನ್ನು ಅಭಿನಂದಿಸಿದ ಡಾ| ಮೋಹನ ಆಳ್ವರು ಅವರಿಗೆ 2 ಲಕ್ಷ ರೂ. ಪುರಸ್ಕಾರ ಘೋಷಿಸಿದರು. ಇದೇ ರೀತಿ ದ್ವಿತೀಯ ಪಿಯು ವಾಣಿಜ್ಯ ವಿಭಾಗದಲ್ಲಿ 596 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ರ್‍ಯಾಂಕ್ ಗಳಿಸಿದ್ದ ಆಳ್ವಾಸ್‌ನ ಒಲ್ವಿಟಾ ಆ್ಯನ್ಸಿಲ್ಲಾ ಡಿ’ಸೋಜಾ ಅವರಿಗೂ 2 ಲಕ್ಷ ರೂ. ನಗದು ಪುರಸ್ಕಾರ ಘೋಷಿಸಿರುವುದಾಗಿ ಡಾ| ಅಳ್ವ ತಿಳಿಸಿದರು.
Advertisement