ಬೆಂಗಳೂರು: ಎಸೆಸೆಲ್ಸಿ ಹಾಗೂ ಪಿಯು ಮಂಡಳಿ ವಿಲೀನವಾಗಿದ್ದು, ಮಲ್ಲೇಶ್ವರದಲ್ಲಿರುವ ಎಸೆಸೆಲ್ಸಿ ಮಂಡಳಿ ಕಚೇರಿಯಲ್ಲೇ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಆರಂಭವಾಗಿದೆ.
Advertisement
ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ಈ ಕಚೇರಿಗೆ ಪತ್ರ ವ್ಯವಹಾರ ನಡೆಸುವಾಗ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ, 6ನೇ ಅಡ್ಡರಸ್ತೆ, ಮಲ್ಲೇಶ್ವರ, ಬೆಂಗಳೂರು 560003 ಈ ವಿಳಾಸ ಬಳಕೆ ಮಾಡುವಂತೆ ಮಂಡಳಿ ತಿಳಿಸಿದೆ.