Advertisement
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ “ಪಾಸಿಂಗ್ ಪ್ಯಾಕೇಜ್’ ಜಾರಿ ಯಾಗಲಿದ್ದು, ಉಡುಪಿಯಲ್ಲಿ ಪ್ರತೀ ದಿನ ತರಗತಿ ಆರಂಭಕ್ಕೆ ಮುನ್ನ ಕಡ್ಡಾಯವಾಗಿ ಒಂದು ತಾಸು ವಿಶೇಷ ತರಗತಿ ನಡೆಯಲಿದೆ. ಎರಡೂ ಜಿಲ್ಲೆಗಳ ಪ್ರತಿಯೊಂದು ಶಾಲೆಯೂ ಅತ್ಯುತ್ತಮ ಫಲಿತಾಂಶ ಪಡೆಯುವಂತೆ ಮಾಡಲು ಇನ್ನೂ ಏನೇನು ಕ್ರಮ ಕೈಗೊಳ್ಳಬಹುದು ಎಂಬ ಬಗ್ಗೆ ಆಯಾಯ ಶಾಲೆಯಿಂದಲೇ ಕ್ರಿಯಾ ಯೋಜನೆಯನ್ನೂ ಸಿದ್ಧಪಡಿಸಲಾಗುತ್ತಿದೆ.
ಎಸೆಸೆಲ್ಸಿಯಲ್ಲಿ ಉತ್ತೀರ್ಣರಾಗುವುದು ಕಷ್ಟ ಎಂಬ ಸ್ಥಿತಿಯಲ್ಲಿರುವ ವಿದ್ಯಾರ್ಥಿಗಳನ್ನು ಗಮನಿಸಿ ಅವರಿಗಾಗಿ ಪ್ರತ್ಯೇಕ “ಪಾಸಿಂಗ್ ಪ್ಯಾಕೇಜ್’ ಅನ್ನು ಡಿಸೆಂಬರ್ ವೇಳೆ ಜಾರಿಗೊಳಿಸಲಾಗುತ್ತದೆ. ಅಂತಿಮ ಪರೀಕ್ಷೆಯಲ್ಲಿ 40ರಿಂದ 50 ಅಂಕ ಗಳಿಸಿಕೊಡಬಹುದಾದಷ್ಟು ವಿಷಯಗಳನ್ನು ಆರಿಸಿ ಕೊಂಡು ಅದನ್ನು ಚೆನ್ನಾಗಿ ಅಧ್ಯಯನ ಮಾಡಿ ಉತ್ತೀರ್ಣ ರಾಗುವಂತೆ ಮಾಡುವ ಕ್ರಮ ಇದು.
Related Articles
Advertisement
ಉಡುಪಿ: ತಾಯಂದಿರಿಗೂ ಸಭೆ!ಉಡುಪಿ ಜಿಲ್ಲೆಯಲ್ಲಿ ಈಗಾಗಲೇ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ತರಗತಿ ಆರಂಭಕ್ಕೆ ಒಂದು ಗಂಟೆ ಮುಂಚಿತವಾಗಿ ವಿಶೇಷ ತರಗತಿಯನ್ನು ನಡೆಸಲಾಗುತ್ತಿದೆ. ಪಠ್ಯಕ್ಕೆ ಪೂರಕವಾಗಿ ರಸಪ್ರಶ್ನೆ, ಗುಂಪು ಚರ್ಚೆ ಮೊದಲಾದ ಪ್ರಯೋಗಗಳ ಮೂಲಕ ಮಕ್ಕಳ ಕಲಿಕೆಯನ್ನು ಗಟ್ಟಿಗೊಳಿಸುವ ಕಾರ್ಯ ನಡೆಸಲಾಗುತ್ತಿದೆ. ಇದರ ಆಧಾರದಲ್ಲಿಯೇ ಪ್ರತ್ಯೇಕ ಪರೀಕ್ಷೆ ಮಾಡಲಾಗುತ್ತದೆ. ಶೇ. 60ಕ್ಕಿಂತ ಕಡಿಮೆ ಫಲಿತಾಂಶ ಪಡೆದಿರುವ ಶಾಲೆಗಳನ್ನು ಈಗಾಗಲೇ ಶಿಕ್ಷಣ ಇಲಾಖಾ ಅಧಿಕಾರಿಗಳು ದತ್ತು ಪಡೆದಿದ್ದಾರೆ. ಅಲ್ಲಿಗೆ ನಿರಂತರ ಭೇಟಿ ನೀಡಿ ಮಕ್ಕಳ ಕಲಿಕಾ ಸಾಮರ್ಥ್ಯ ಹೆಚ್ಚಿಸುವ ಕಾರ್ಯತಂತ್ರ ಅಳವಡಿಸಿಕೊಳ್ಳಲಾಗಿದೆ. ಪೋಷಕರ ಸಭೆಯ ಜತೆಗೆ ಪ್ರತ್ಯೇಕವಾಗಿ “ತಾಯಂದಿರ ಸಭೆ’ ನಡೆಸಲು ಉದ್ದೇಶಿಸಲಾಗಿದೆ. ತರಗತಿ ಯಲ್ಲಿ ವಿದ್ಯಾರ್ಥಿ ಓದು-ಬರಹದ ಪ್ರಯತ್ನ ನಡೆಸುತ್ತಿದ್ದರೂ ಮನೆಯಲ್ಲಿ ಏಕಾಗ್ರತೆಗೆ ಭಂಗ ಬಂದರೆ ಫಲಿತಾಂಶ ಉತ್ತಮವಾಗಲು ಸಾಧ್ಯವಿಲ್ಲ. ಹೀಗಾಗಿ ಮಕ್ಕಳು ಓದುವ ಸಮಯದಲ್ಲಿ ಪೂರಕ ಸನ್ನಿವೇಶ ಒದಗಿಸಿಕೊಡುವ ನಿಟ್ಟಿನಲ್ಲಿ ತಾಯಂದಿರಿಗೆ ಸಲಹೆ-ಸೂಚನೆ ನೀಡಲಾಗುತ್ತದೆ. ಕರಾವಳಿ ಫಲಿತಾಂಶ ಇಳಿಕೆ ಆಗಿಲ್ಲ!
ಅಧ್ಯಾಪಕರೊಬ್ಬರು “ಉದಯ ವಾಣಿ’ ಜತೆಗೆ ಮಾತನಾಡಿ, “15 ವರ್ಷಗಳಿಂದ ಎಸೆಸೆಲ್ಸಿ ಫಲಿತಾಂಶದಲ್ಲಿ ಕರಾವಳಿ ಜಿಲ್ಲೆಗಳು ಶೇ. 84ರಿಂದ 89ರ ಆಸುಪಾಸಿನಲ್ಲೇ ಇದೆ. ಆದರೆ ಶೇ. 70 ಫಲಿತಾಂಶ ಪಡೆಯುತ್ತಿದ್ದ ಕೆಲವು ಜಿಲ್ಲೆಗಳು ಮಾತ್ರ ಒಮ್ಮಿಂದೊಮ್ಮೆಲೆ ಶೇ. 90ರ ಗಡಿ ದಾಟಿವೆ.ಹೀಗಾಗಿ ಕರಾವಳಿ ಜಿಲ್ಲೆಗಳ ಸ್ಥಾನ ಕುಸಿದಿದೆಯಷ್ಟೆ. ಇದು ಯಾವ ಕಾರಣದಿಂದ ಎಂಬುದು ಕರಾವಳಿ ಭಾಗದ ಶಿಕ್ಷಕರಿಗೆ ಗೊತ್ತಾಗುತ್ತಿಲ್ಲ. ಇದರ ಅಧ್ಯಯನ ನಡೆಸಬೇಕು ಎಂದಿದ್ದಾರೆ. ಡಿಸೆಂಬರ್‌ನೊಳಗೆ ಎಲ್ಲ ಪಠ್ಯ ಬೋಧನೆಯನ್ನು ಪೂರ್ಣಗೊಳಿಸಿ, ಜನವರಿ ಬಳಿಕ ಪುನರಾವರ್ತನೆ ನಡೆಸಬೇಕು ಎಂದು ಶಾಲೆಗಳಿಗೆ ಸೂಚನೆ ನೀಡಲಾಗಿದೆ. ಸರಣಿ ಪರೀಕ್ಷೆಗಳನ್ನು ನಡೆಸಿ, ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಕಷ್ಟ ಪಡುವ ಮಕ್ಕಳಿಗೆ ವಿಶೇಷ ಕೋಚಿಂಗ್ ವ್ಯವಸ್ಥೆ ಮಾಡಲಾಗುತ್ತದೆ.
-ದಯಾನಂದ ನಾಯಕ್, ಡಿಡಿಪಿಐ, ದ.ಕ. ಎಸೆಸೆಲ್ಸಿ ಫಲಿತಾಂಶದಲ್ಲಿ ಈ ಬಾರಿ ಏರಿಕೆ ದಾಖಲಿಸುವ ನಿಟ್ಟಿನಲ್ಲಿವಿವಿಧ ಪ್ರಯತ್ನಗಳನ್ನು ಜಾರಿಗೊಳಿಸಲಾಗುತ್ತಿದೆ. ಎಸೆಸೆಲ್ಸಿ ಮಕ್ಕಳ ಮನೆ ಭೇಟಿ ಮೂಲಕ ಕಲಿಕೆಗೆ ಒತ್ತು ನೀಡಲು ಪ್ರೋತ್ಸಾಹಿಸಲಾಗುವುದು.
-ಕೆ. ಗಣಪತಿ, ಡಿಡಿಪಿಐ, ಉಡುಪಿ