ದೋಟಿಹಾಳ: ರಾಜ್ಯದಾದ್ಯಂತ ಎಸ್ ಎಸ್ ಎಲ್ ಸಿ ಪರೀಕ್ಷೆ ಸೋಮವಾರ ಆರಂಭವಾಗಿದ್ದು, ಕೊಪ್ಪಳ ಜಿಲ್ಲೆಯ ಹೆಸರೂರು ಗ್ರಾಮದ ವಿಶೇಷಚೇತನರೊಬ್ಬರು ಮೂರು ಕಿ.ಮೀ ದೂರದಿಂದ ವೀಲ್ ಚೇರ್ ನಲ್ಲಿ ಬಂದು ಪರೀಕ್ಷೆ ಬರೆದಿದ್ದಾರೆ.
ಹೆಸರೂರು ಗ್ರಾಮದ ಮಲೇಗೌಡ ಪರೀಕ್ಷೆ ಬರೆದ ವಿಶೇಷಚೇತನ ವಿದ್ಯಾರ್ಥಿ.
ಪರೀಕ್ಷೆ ಬೆರೆಯಲು ತಮ್ಮ ಮನೆಯಿಂದಲೇ ಸುಮಾರು ಮೂರು ಕಿ.ಮೀ ದೂರದ, ದೋಟಿಹಾಳ ಸರಕಾರಿ ಪದವಿ ಪೂರ್ವ ಕಾಲೇಜಿಗೆ ವೀಲ್ ಚೇರ್ ನಲ್ಲಿ ಬಂದು ಪರೀಕ್ಷೆ ಬರೆದಿದ್ದಾರೆ
ಇದನ್ನೂ ಓದಿ:ಎಸ್‍ಎಸ್‍ಎಲ್‍ಸಿ ಪರೀಕ್ಷೆ: 12 ಮಂದಿ ನಕಲಿ ಅಭ್ಯರ್ಥಿಗಳು ಪೊಲೀಸ್ ವಶಕ್ಕೆ
ವಿದ್ಯಾರ್ಥಿಯ ಪಾಲಕ ತಂದೆ ಚಂದ್ರಪ್ಪ ಮಾತನಾಡಿ, ನಮ್ಮ ಊರಿನಿಂದ ಪರೀಕ್ಷಾ ಕೇಂದ್ರಕ್ಕೆ ಮೂರು ಕಿ.ಮೀ ದೂರವಿದೆ. ಬೆಳಿಗ್ಗೆ 8 ಗಂಟೆಗೆ ಮನೆಯಿಂದ ಮಗನನ್ನು ವೀಲ್ ಚೇರ್ ನಲ್ಲಿ ಕರೆದುಕೊಂಡು ಬಂದಿದ್ದೇನೆ. ಪರೀಕ್ಷೆ ಮುಗಿಯುವವರೆಗೆ ಹೊರಗೆ ಕುಳಿತ್ತಿದ್ದೆ. ಈಗ ಪರೀಕ್ಷೆ ಮುಗಿದಿದೆ ಮತ್ತೆ ಬಿಸಿಲಿನಲ್ಲಿ ಮಗನನ್ನು ಕರೆದುಕೊಂಡು ಹೋಗಬೇಕಾಗಿದೆ. ನನ್ನ ಮಗನ ಪರೀಕ್ಷೆಗೆ ಅಧಿಕಾರಿಗಳು ಸಾರಿಗೆ ವ್ಯವಸ್ಥೆ ಮಾಡಿಕೊಟ್ಟರೆ ನನಗೂ ಮತ್ತು ನನ್ನ ಮಗನಿಗೂ ತುಂಬಾ ಅನುಕೂಲವಾಗುತ್ತದೆ ಎಂದು ಹೇಳಿದ್ದಾರೆ.