Advertisement

ಎಸ್ಸೆಸ್ಸೆಲ್ಸಿ: ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

08:28 PM Oct 29, 2022 | Team Udayavani |

ಬೆಂಗಳೂರು: ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು 2023ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಿದ್ದು, ಏ.1ರಿಂದ 15ರ ವರೆಗೆ ಪರೀಕ್ಷೆ ನಡೆಸಲು ತೀರ್ಮಾನಿಸಿದೆ.

Advertisement

ಎಲ್ಲ ಪರೀಕ್ಷೆಗಳು ಬೆಳಗ್ಗೆ 10.30ರಿಂದ ಮಧ್ಯಾಹ್ನ 1.45ರ ವರೆಗೆ ನಡೆಯಲಿವೆ. ಹಿಂದೂಸ್ಥಾನಿ ಮತ್ತು ಕರ್ನಾಟಕ ಸಂಗೀತದ ತಾತ್ವಿಕ ಪರೀಕ್ಷೆಗಳು ಮಧ್ಯಾಹ್ನ 2ರಿಂದ 3.45ರ ವರೆಗೆ ಮತ್ತು ಪ್ರಾಯೋಗಿಕ ಪರೀಕ್ಷೆಗಳು ಮಧ್ಯಾಹ್ನ 3.45ರಿಂದ ಸಂಜೆ 5.15ರ ವರೆಗೆ ನಡೆಯಲಿವೆ.

ಈ ವೇಳಾಪಟ್ಟಿಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು/ಪೋಷಕರು ಆಕ್ಷೇಪಣೆ ಸಲ್ಲಿಸಲು ನ.28ರ ವರೆಗೆ ಅವಕಾಶ ನೀಡಿದೆ. ಆಕ್ಷೇಪಣೆಗಳನ್ನು ಇ- ಮೇಲ್‌ dpikseeb@gmail.com ಅಥವಾ sadpi.csec.kseeb@gmail.com ಅಥವಾ ನಿರ್ದೇಶಕರು (ಪರೀಕ್ಷೆಗಳು), ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ, 6ನೇ ಅಡ್ಡ ರಸ್ತೆ, ಮಲ್ಲೇಶ್ವರ, ಬೆಂಗಳೂರು- 560 003 ವಿಳಾಸಕ್ಕೆ ಅಂಚೆ ಮೂಲಕ ಸಲ್ಲಿಸಬಹುದು.

ವೇಳಾಪಟ್ಟಿ: ಏ.1-ಪ್ರಥಮ ಭಾಷೆ ಕನ್ನಡ, ಏ.4- ಗಣಿತ, ಸಮಾಜಶಾಸ್ತ್ರ, ಏ.6-ದ್ವಿತೀಯ ಭಾಷೆ ಇಂಗ್ಲಿಷ್‌, ಏ.8- ಎಲಿಮೆಂಟ್ಸ್‌ ಆಫ್ ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌-4, ಮೆಕಾನಿಕಲ್‌ ಆ್ಯಂಡ್‌ ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌-2, ಮೆಕಾನಿಕಲ್‌ ಎಂಜಿನಿಯರಿಂಗ್‌-4, ಎಂಜಿನಿಯರಿಂಗ್‌ ಗ್ರಾಫಿಕ್ಸ್‌-2, ಕಂಪ್ಯೂಟರ್‌ ಸೈನ್ಸ್‌, ಅರ್ಥಶಾಸ್ತ್ರ, ಏ.10- ವಿಜ್ಞಾನ, ರಾಜ್ಯಶಾಸ್ತ್ರ, ಹಿಂದೂಸ್ಥಾನಿ ಸಂಗೀತ, ಕರ್ನಾಟಕ ಸಂಗೀತ, ಏ.12- ತೃತೀಯ ಭಾಷೆ ಹಿಂದಿ, ಎನ್‌ಎಸ್‌ಕ್ಯುಎಫ್ ವಿಷಯಗಳು, ಏ.15- ಸಮಾಜ ವಿಜ್ಞಾನ.

Advertisement

Udayavani is now on Telegram. Click here to join our channel and stay updated with the latest news.

Next