Advertisement

ಎಸೆಸೆಲ್ಸಿ ಪರೀಕ್ಷೆ ಮಾದರಿ; ಶೇ.98.06ರಷ್ಟು ವಿದ್ಯಾರ್ಥಿಗಳು ಹಾಜರು

01:55 AM Jul 04, 2020 | Sriram |

ಬೆಂಗಳೂರು: ಕೋವಿಡ್ ಆತಂಕದ ನಡುವೆ ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಮತ್ತು ಇದಕ್ಕೆ ಸುರಕ್ಷಿತವಾದ ವ್ಯವಸ್ಥೆ ನಿರ್ಮಿಸಿರುವ ರಾಜ್ಯ ಸರಕಾರ ದೇಶಕ್ಕೆ ಮಾದರಿಯಾಗಿದೆ.

Advertisement

ಪರೀಕ್ಷೆ ಶುಕ್ರವಾರ ಕೊನೆಯಾಗಿದ್ದು, ಸರಾಸರಿ ಶೇ.98.06ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಎಲ್ಲ ಸುರಕ್ಷಾ ಕ್ರಮಗಳನ್ನು ಅಚ್ಚು ಕಟ್ಟಾಗಿ ಪಾಲಿಸಿ ಪ್ರೇರಣೆ ಮತ್ತು ಸ್ಫೂರ್ತಿಯಾಗಿದ್ದಾರೆ.ಪರೀಕ್ಷಾ ಕೇಂದ್ರಗಳನ್ನು ಸುರಕ್ಷಾ ಕೇಂದ್ರವಾಗಿ ಬದಲಾಯಿಸಿ, ಸ್ವಲ್ಪವೂ ಲೋಪವಿಲ್ಲದಂತೆ ವ್ಯವಸ್ಥೆ ಮಾಡಿದ ಸರಕಾರ ಸಂಪೂರ್ಣ ಯಶಸ್ಸು ಸಾಧಿಸಿದೆ.

ಎಲ್ಲ ಇಲಾಖೆಗಳ ಸಮನ್ವಯದಿಂದ ಇದು ಸಾಕಾರವಾಗಿದೆ. ಪರೀಕ್ಷಾ ಕೇಂದ್ರ ದಲ್ಲಿ ವಿದ್ಯಾರ್ಥಿಗಳಿಗೆ ಕೊರೊನಾ ಪತ್ತೆ ಯಾದರೂ ಪರೀಕ್ಷಾ ಕೇಂದ್ರದಿಂದ ಯಾರಿಗೂ ಸೋಂಕು ಹರಡಿಲ್ಲ. ನಿತ್ಯ ಸರಾಸರಿ 7.50 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.

ಪರೀಕ್ಷೆಯ ಯಶಸ್ಸಿಗೆ ಸಹಕರಿಸಿ ಸಲಹೆ, ಸೂಚನೆ ನೀಡಿ ಸಕಾರಾತ್ಮಕವಾಗಿ ಸ್ಪಂದಿಸಿದ ಸಿಎಂ ಯಡಿಯೂರಪ್ಪ, ಸಂಪುಟ ಸಹೋದ್ಯೋಗಿಗಳು, ಶಿಕ್ಷಣತಜ್ಞರು,ಜನ ಪ್ರತಿನಿಧಿಗಳು, ಅಧಿಕಾರಿಗಳು, ಪೊಲೀಸರು ಹಾಗೂ ಪೋಷಕರಿಗೆ ಸಚಿವ ಸುರೇಶ್‌ ಕುಮಾರ್‌ ಕೃತಜ್ಞತೆ ಸಲ್ಲಿಸಿದ್ದಾರೆ.

ಆಗಸ್ಟ್‌ನಲ್ಲಿ ಫ‌ಲಿತಾಂಶ
ಕೋವಿಡ್ ಸಂದಿಗ್ಧದ ನಡುವೆ ಎಲ್ಲ ಇಲಾಖೆಗಳ ಸಮನ್ವಯದೊಂದಿಗೆ ಎಸೆಸೆಲ್ಸಿ ಪರೀಕ್ಷೆ ಯಶಸ್ವಿಯಾಗಿ ನಡೆ ದಿದ್ದು, ಆಗಸ್ಟ್‌ ಮೊದಲ ವಾರದಲ್ಲಿ ಫ‌ಲಿತಾಂಶ ನೀಡಲಿದ್ದೇವೆ ಎಂದು ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಅವರು ಹೇಳಿದರು.

Advertisement

ಕೋವಿಡ್‌ ಸಂದರ್ಭ ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿರುವ ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯವನ್ನು ಹಾರೈಸು ತ್ತೇನೆ.ಯಶಸ್ವಿಯಾಗಿ ನಡೆಸಿದ ಸಂಪುಟ ಸಹೋದ್ಯೋಗಿ ಸುರೇಶ್‌ ಕುಮಾರ್‌ ಮತ್ತು ಶಿಕ್ಷಣ, ಆರೋಗ್ಯ, ಪೊಲೀಸ್‌ ಇಲಾಖೆ ಸೇರಿ ದಂತೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು.
– ಬಿ.ಎಸ್‌. ಯಡಿಯೂರಪ್ಪ 
ಮುಖ್ಯಮಂತ್ರಿ

 

Advertisement

Udayavani is now on Telegram. Click here to join our channel and stay updated with the latest news.

Next