Advertisement
2022-23ನೇ ಸಾಲಿನ ಎಸೆಸೆಲ್ಸಿ ಪರೀಕ್ಷಾ ಪ್ರಶ್ನೆ ಪತ್ರಿಕೆ ಸ್ವರೂಪ ಹಾಗೂ ಕಠಿನತೆಯ ಮಟ್ಟವನ್ನು ಕರ್ನಾಟಕ ಪ್ರೌಢಶಿಕ್ಷಣ ಮಂಡಳಿ ನಿರ್ಧರಿಸಿದ್ದು, 2019-20ನೇ ಸಾಲಿನ ಪ್ರಶ್ನೆಪತ್ರಿಕೆ ಸ್ವರೂಪ ಮುಂದುವರಿಯಲಿದೆ.
Related Articles
Advertisement
ಪ್ರಸಕ್ತ ವರ್ಷ ಮೇ 16ರಿಂದಲೇ ಪೂರ್ಣ ಪ್ರಮಾಣದಲ್ಲಿ ತರಗತಿಗಳು ಪ್ರಾರಂಭವಾಗಿರುವುದರಿಂದ ಕೊರೊನಾ ಪೂರ್ವದಂತೆಯೇ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ಇದರಿಂದಾಗಿ ಈ ವರ್ಷ ಶೇ.30ರಷ್ಟು ಸುಲಭದ ಪ್ರಶ್ನೆಗಳು, ಶೇ.50ರಷ್ಟು ಸಾಧಾರಣ ಪ್ರಶ್ನೆಗಳು ಹಾಗೂ ಶೇ.20ರಷ್ಟು ಕಠಿನ ಪ್ರಶ್ನೆಗಳು ಇರಲಿವೆ.
ಶೇ.75 ಹಾಜರಾತಿ ಕಡ್ಡಾಯ:
2020-21 ಹಾಗೂ 2021-22ರಲ್ಲಿ ಎಸೆಸೆಲ್ಸಿ ಪರೀಕ್ಷೆಗೆ ವಿದ್ಯಾರ್ಥಿಗಳ ಹಾಜರಾತಿ ಕಡ್ಡಾಯಕ್ಕೆ ವಿನಾಯಿತಿ ನೀಡಲಾಗಿತ್ತು. ಈ ವರ್ಷ ಪರೀಕ್ಷೆಗೆ ಶೇ.75ರಷ್ಟು ಹಾಜರಾತಿ ಕಡ್ಡಾಯಗೊಳಿಸಲಾಗಿದೆ.
ಪ್ರಸಕ್ತ ಸಾಲಿನ ಎಸೆಸೆಲ್ಸಿ ಪರೀಕ್ಷೆ ಪೂರ್ಣ ಪ್ರಮಾಣದ ಪಠ್ಯವನ್ನು ಆಧರಿಸಿ ನಡೆಯಲಿದೆ. ಪ್ರಶ್ನೆ ಪತ್ರಿಕೆಯ ಸ್ವರೂಪ, ಕಠಿನತೆಯ ಮಟ್ಟ ವನ್ನು ಕಡಿಮೆ ಮಾಡದೆ 2019-20ನೇ ಸಾಲಿನಂತೆ ನಡೆಸಲು ಪ್ರೌಢ ಶಿಕ್ಷಣ ಮಂಡಳಿ ನಿರ್ಧರಿಸಿದ್ದು, ಈ ಕುರಿತು ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.– ಜಿ.ಆರ್. ತಿಪ್ಪೇಶ್, ಉಪ ನಿರ್ದೇಶಕರು, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ, ದಾವಣಗೆರೆ
-ಎಚ್.ಕೆ. ನಟರಾಜ