Advertisement
ಜಿಲ್ಲೆಯ ಸಾಮಾನ್ಯ ಮತ್ತು ಖಾಸಗಿ ಪರೀಕ್ಷಾ ಕೇಂದ್ರಗಳು ಸೇರಿದಂತೆ ನೋಂದಣಿ ಮಾಡಿಸಿಕೊಂಡಿದ್ದ ಒಟ್ಟು 29,542 ವಿದ್ಯಾರ್ಥಿಗಳ ಪೈಕಿ 29,192 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.
Related Articles
Advertisement
ಡಿಸಿ ಡಾ| ರಾಜೇಂದ್ರ ಕೆ.ವಿ., ಜಿ.ಪಂ. ಸಿಇಒ ಡಾ| ಕುಮಾರ್, ಡಿಡಿ ಪಿಐ ಸುಧಾಕರ್ ಕೆ. ಅವರು ವಿವಿಧ ಶಾಲೆಗಳಿಗೆ ಭೇಟಿ ನೀಡಿದರು.
ಕೊಡಗು: 6,447 ಹಾಜರು, 233 ಗೈರುಮಡಿಕೇರಿ: ಕೊಡಗು ಜಿಲ್ಲೆಯ 37 ಪರೀûಾ ಕೇಂದ್ರಗಳಲ್ಲಿ ಸೋಮವಾರ ಎಸೆಸೆಲ್ಸಿ ಮುಖ್ಯ ಪರೀಕ್ಷೆ ಸುಗಮವಾಗಿ ನಡೆಯಿತು. ಜಿಲ್ಲೆಯ ಒಟ್ಟು 6,680 ವಿದ್ಯಾರ್ಥಿಗಳಲ್ಲಿ 6,447 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 233 ಮಂದಿ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು. 6 ವಿದ್ಯಾರ್ಥಿಗಳು ವಿಶೇಷ ಕೊಠಡಿಯಲ್ಲಿ ಪರೀಕ್ಷೆ ಬರೆದರು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ವೇದಮೂರ್ತಿ ಮಾಹಿತಿ ನೀಡಿದ್ದಾರೆ. ಜಿಲ್ಲಾಧಿಕಾರಿ ಡಾ| ಬಿ.ಸಿ. ಸತೀಶ ನಗರದ ಜೂನಿಯರ್ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ತಹಶೀಲ್ದಾರ್ ಮಹೇಶ್ ಜತೆಗಿದ್ದರು. ದ.ಕ. ಜಿಲ್ಲೆಯಾದ್ಯಂತ ವಿದ್ಯಾರ್ಥಿಗಳು ನಿರಾಳರಾಗಿ, ಯಾವುದೇ ಆತಂಕಕ್ಕೆ ಒಳಗಾಗದೆ ಪರೀಕ್ಷೆ ಬರೆದಿದ್ದಾರೆ. ಮುಂದಿನ ಪರೀಕ್ಷೆಯನ್ನು ಕೂಡ ಇದೇ ರೀತಿ ಯಾವುದೇ ಅಳುಕಿಲ್ಲದೆ ಬರೆಯಲಿದ್ದಾರೆ. ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಸೇರಿದಂತೆ ಹಲವರು ಶ್ಲಾಘನೀಯ ಸ್ಪಂದನೆ ನೀಡಿದ್ದರಿಂದ ಮೊದಲನೇ ದಿನದ ಪರೀಕ್ಷೆ ಯಶಸ್ವಿಯಾಗಿ ಸಾಂಗವಾಗಿ ನೆರವೇರಿದೆ.
– ಸುಧಾಕರ್ ಕೆ., ದ.ಕ. ಡಿಡಿಪಿಐ ಉಡುಪಿ: 13,770 ಹಾಜರು, 210 ಗೈರು
ಉಡುಪಿ: ಸೋಮವಾರ ನಡೆದ ಪರೀಕ್ಷೆಗೆ ಜಿಲ್ಲೆಯಲ್ಲಿ 13,770 ವಿದ್ಯಾರ್ಥಿಗಳು ಹಾಜರಾಗಿದ್ದು 210 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು. ಪ್ರಥಮ ಭಾಷೆ (ಕನ್ನಡ, ಇಂಗ್ಲಿಷ್, ಹಿಂದಿ, ಸಂಸ್ಕೃತ, ಅರೆಬಿಕ್, ಮರಾಠಿ, ಫ್ರಂಚ್ ಇತ್ಯಾದಿ) ವಿಷಯಕ್ಕೆ 13,980 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಜ್ವರ, ಶೀತ ಸಹಿತ ದಿಢೀರ್ ಅಸ್ವಸ್ಥತೆ ಕಾಣಿಸಿಕೊಂಡಿರುವ 12 ವಿದ್ಯಾರ್ಥಿಗಳು ವಿಶೇಷ ಕೊಠಡಿ ಯಲ್ಲಿ ಪರೀಕ್ಷೆ ಬರೆದಿದ್ದಾರೆ. 58 ಪರೀಕ್ಷಾ ಕೇಂದ್ರಗಳಲ್ಲೂ ವಿದ್ಯಾರ್ಥಿಗಳ ಸುರಕ್ಷೆಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು. 17 ಕೇಂದ್ರಗಳಲ್ಲಿ ಶೇ. 100ರಷ್ಟು ಹಾಜರಾತಿ ದಾಖಲಾಗಿದೆ. ಎಲ್ಲೆಡೆ ಬಿಗಿ ಪೊಲೀಸ್ ಭದ್ರತೆಗೆ ಹೆಚ್ಚುವರಿ ಸಿಬಂದಿ ನೇಮಿಸಲಾಗಿತ್ತು. ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ., ಜಿ.ಪಂ. ಸಿಇಒ ಡಾ| ವೈ. ನವೀನ್ ಭಟ್ ಅವರು ಉಡುಪಿ ನಗರದ ಪ್ರೌಢಶಾಲೆಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಬೈಂದೂರು 2,202, ಕುಂದಾಪುರ 2,583, ಕಾರ್ಕಳದ 2,592, ಉಡುಪಿ (ದಕ್ಷಿಣ ಮತ್ತು ಉತ್ತರ) 4,181 ಹೊಸ ವಿದ್ಯಾರ್ಥಿಗಳು ಈ ಐದು ಶೈಕ್ಷಣಿಕ ವಲಯದಿಂದ ಹಾಜರಾಗಿದ್ದರು. ಕುಂದಾಪುರದ 88, ಉಡುಪಿಯ 124 ಖಾಸಗಿ ವಿದ್ಯಾರ್ಥಿಗಳು ಹಾಜರಾಗಿದ್ದಾರೆ. 117 ಹೊಸ ಹಾಗೂ 93 ಖಾಸಗಿ ವಿದ್ಯಾರ್ಥಿಗಳು ಸೇರಿ 210 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಬಹುತೇಕ ವಿದ್ಯಾ ರ್ಥಿಗಳು ಸಮವಸ್ತ್ರದೊಂದಿಗೆ ಮಾಸ್ಕ್ ಧರಿಸಿದ್ದರು. ಶಿಕ್ಷಣ ಅತೀ ಮುಖ್ಯ. ಯಾರೂ ಕೂಡ ಪರೀಕ್ಷೆಯಿಂದ ದೂರ ಉಳಿಯಬಾರದು. ಮುಸ್ಲಿಂ ಮುಖಂಡರು ಪರೀಕ್ಷಾ ಕೇಂದ್ರಕ್ಕೆ ಬಂದು ತಮ್ಮ ಮಕ್ಕಳನ್ನು ಬಿಟ್ಟು ಹೋಗುತ್ತಿರುವುದು ಅಭಿನಂದನೀಯ. ಸಮವಸ್ತ್ರಕ್ಕೆ ಸಂಬಂಧಿಸಿದಂತೆ ಸರಕಾರದ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಜಿಲ್ಲೆಯ 58 ಪರೀಕ್ಷಾ ಕೇಂದ್ರದಲ್ಲೂ ಯಾವುದೇ ಗೊಂದಲ ಇಲ್ಲದೇ ಪರೀಕ್ಷೆ ನಡೆದಿದೆ.
-ಕೂರ್ಮಾ ರಾವ್, ಜಿಲ್ಲಾಧಿಕಾರಿ