Advertisement
ಈ ಎರಡೂ ಜಿಲ್ಲೆಗಳ ಶಿಕ್ಷಣ ಇಲಾಖಾ ಅಧಿಕಾರಿಗಳು ಮತ್ತು ಶಿಕ್ಷಕರು ಉನ್ನತ ಫಲಿತಾಂಶಕ್ಕಾಗಿ ಈಗಾಗಲೇ ವಿವಿಧ ಕಾರ್ಯಯೋಜನೆಗಳನ್ನು ರೂಪಿಸಿದ್ದಾರೆ. ಈ ಬಾರಿ ಎಸೆಸೆಲ್ಸಿ / ಪಿಯುಸಿಯಲ್ಲಿ ಶೇ. 30ರಷ್ಟು ಪಠ್ಯಕ್ರಮ ಕಡಿತಗೊಂಡಿರುವ ಕಾರಣ “ಪ್ರಶ್ನಾ ಬ್ಯಾಂಕ್’ ಅನ್ನು ಈ ಬಾರಿ ಕರಾವಳಿ ಭಾಗದಲ್ಲಿ ಹೆಚ್ಚು ಆದ್ಯತೆ ನೆಲೆಯಲ್ಲಿ ಸಿದ್ಧಪಡಿಸಲಾಗುತ್ತಿದೆ.
Related Articles
Advertisement
ಉಡುಪಿ ಜಿಲ್ಲೆಯಲ್ಲಿ ಸಂಜೆ 5ರಿಂದ 7ರ ವರೆಗೆ “ಫೋನ್ ಇನ್’ ಎಂಬ ಪರಿಕಲ್ಪನೆಯ ಮೂಲಕ ಮಕ್ಕಳ ಪ್ರಶ್ನೆಗಳಿಗೆ ನುರಿತ ಶಿಕ್ಷಕರು ಉತ್ತರ ನೀಡುವ ವಿಶೇಷ ಪ್ರಯತ್ನ ನಡೆಯುತ್ತಿದೆ. ಪ್ರತೀ ದಿನ 150ಕ್ಕೂ ಅಧಿಕ ವಿದ್ಯಾರ್ಥಿಗಳು ಕರೆ ಮಾಡಿ ಉತ್ತರ ಪಡೆಯುತ್ತಿದ್ದಾರೆ. ರಾಜ್ಯದಲ್ಲಿಯೇ ಅಪೂರ್ವ ಪ್ರಯತ್ನ ಇದಾಗಿದೆ. ಜಿಲ್ಲೆಯ ಶಿಕ್ಷಕರಿಗೆ ಪ್ರೇರಣಾ ಶಿಬಿರ ಆಯೋಜಿಸಿ ತರಬೇತಿ ನೀಡಲಾಗಿದೆ. ಇಲಾಖಾ ಅಧಿಕಾರಿಗಳು, ಶಿಕ್ಷಕರು ಪಾಲಕರ ಜತೆಗೆ ಸಭೆ ನಡೆಸಿರುವುದಲ್ಲದೆ ಮನೆಗೆ ಭೇಟಿ ನೀಡಿ ಫಲಿತಾಂಶ ಉತ್ತಮವಾಗಲು ಮಾರ್ಗದರ್ಶನ ನೀಡುವಂತೆ ಕೇಳಿಕೊಳ್ಳುತ್ತಿದ್ದಾರೆ.
ನಿರಂತರ ಮುಂಚೂಣಿಯಲ್ಲಿ :
2020ರ ಎಸೆಸೆಲ್ಸಿ ಪರೀಕ್ಷೆಯಲ್ಲಿ ಒಟ್ಟು ಫಲಿತಾಂಶದಲ್ಲಿ ಉಡುಪಿ ಜಿಲ್ಲೆ “ಎ’ ಗ್ರೇಡ್ ಹಾಗೂ ದ.ಕ. ಜಿಲ್ಲೆ “ಬಿ’ ಗ್ರೇಡ್ ಗಳಿಸಿತ್ತು. ಕೆಲವು ವರ್ಷಗಳಿಂದ ಈ ಜಿಲ್ಲೆಗಳು ರಾಜ್ಯದಲ್ಲಿಯೇ ಉತ್ತಮ ಶ್ರೇಣಿಯ ಸ್ಥಾನ ದಾಖಲಿಸುತ್ತಿವೆ. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ದ.ಕ. ಹಾಗೂ ಉಡುಪಿ ಜಿಲ್ಲೆ ಜಿಲ್ಲಾವಾರು ಫಲಿತಾಂಶದಲ್ಲಿ ಮುಂಚೂಣಿಯಲ್ಲಿವೆ.
ಉತ್ತಮ ಫಲಿತಾಂಶದ ನಿರೀಕ್ಷೆ : ಎಸೆಸೆಲ್ಸಿ ಪರೀಕ್ಷೆಯಲ್ಲಿ ದ.ಕ. ಹಾಗೂ ಉಡುಪಿ ಜಿಲ್ಲೆಗಳು ಈ ಬಾರಿ ಅತ್ಯುತ್ತಮ ಸಾಧನೆ ದಾಖಲಿಸಬೇಕೆಂಬ ಆಶಯದಿಂದ ಜನವರಿಯಿಂದಲೇ ವಿವಿಧ ಹಂತದ ಕಾರ್ಯಚಟುವಟಿಕೆಗಳನ್ನು ಶಾಲಾ ಹಂತದಲ್ಲಿ ನಡೆಸಲಾಗುತ್ತಿದೆ. ಇಲಾಖೆ, ಶಿಕ್ಷಕರು ಹಾಗೂ ಪೋಷಕರು ಈ ನಿಟ್ಟಿನಲ್ಲಿ ಒಮ್ಮತದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಉತ್ತಮ ಫಲಿತಾಂಶದ ವಿಶ್ವಾಸವಿದೆ. – ಎನ್.ಎಚ್. ನಾಗೂರು / ಮಲ್ಲೇಸ್ವಾಮಿ, ಡಿಡಿಪಿಐಗಳು, ಉಡುಪಿ, ದ.ಕ