Advertisement
ಕೂಡ್ಲಿಗಿ ತಾಲೂಕು ಕೊಟ್ಟೂರಿನ ಗುರುದೇವ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಸಿ.ಎಸ್. ಕವನ, ಎಸ್.ಪಿ. ವಿದ್ಯಾಶ್ರೀ, ಹಡಗಲಿಯ ಮರಿಸ್ವಾಮಿ ಮಠದ ಪಾಟೀಲ್ ಆಂಗ್ಲಮಾಧ್ಯಮ ಪ್ರೌಢಶಾಲೆಯ ಬಿ.ಅಮೃತ 625ಕ್ಕೆ ಶೇ.100ರಷ್ಟು ಅಂಕಗಳನ್ನು ಪಡೆದು, ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನಗಳಿಸಿದ ವಿದ್ಯಾರ್ಥಿಗಳ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದಾರೆ. ಅದೇ ರೀತಿ ಹೊಸಪೇಟೆ ತಾಲೂಕು ತಿಮ್ಮಲಾಪುರದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ತರುಣ್ ಕುಮಾರ್, ಹಡಗಲಿ ತಾಲೂಕು ವರಕನಹಳ್ಳಿ ಕಿತ್ತೂರುರಾಣಿ ಚೆನ್ನಮ್ಮ ವಸತಿ ಶಾಲೆಯ ಕೌಟಿ ಅಮೃತ 625ಕ್ಕೆ ಶೇ.9984, ಸಂಡೂರು ತಾಲೂಕು ವಡ್ಡಿನಕಟ್ಟಿ ಕಿತ್ತೂರು ರಾಣಿ ವಸತಿ ಶಾಲೆಯ ಜಿ.ಪಿ.ದೀಪಿಕಾ, ಹಡಗಲಿ ತಾಲೂಕು ಮಿರಾಕೊರನಹಳ್ಳಿ ಮೊರಾರ್ಜಿ ವಸತಿ ಶಾಲೆಯ ಎಲ್.ಆರ್.ಆಕಾಶ್ 625ಕ್ಕೆ ಶೇ.9.68 ಅಂಕಗಳನ್ನು ಪಡೆಯುವ ಮೂಲಕ ನಾಲ್ವರು ವಿದ್ಯಾರ್ಥಿಗಳು ಕ್ರಮವಾಗಿ ರಾಜ್ಯಮಟ್ಟದಲ್ಲಿ ದ್ವಿತೀಯ, ತೃತೀಯ ಸ್ಥಾನಗಳಲ್ಲಿ ಗುರುತಿಸಿಕೊಂಡು ಅವಳಿ ಜಿಲ್ಲೆಗಳ ಕೀರ್ತಿಪತಾಕೆಯನ್ನು ಹಾರಿಸಿದ್ದಾರೆ.
Related Articles
Advertisement
ಅವಳಿ ಜಿಲ್ಲೆಗಳಲ್ಲಿ ಪರೀಕ್ಷೆ ಬರೆದ 13536 ಗ್ರಾಮೀಣ ಭಾಗದ ಬಾಲಕರಲ್ಲಿ 11053 ತೇರ್ಗಡೆಯಾಗಿದ್ದು, ಶೇ. 81.66 ರಷ್ಟು ಫಲಿತಾಂಶ ಪಡೆದಿದ್ದಾರೆ. ಅದೇ ರೀತಿ 12049 ರಲ್ಲಿ 10496 ವಿದ್ಯಾರ್ಥಿನಿಯರು ಶೇ.87.11 ರಷ್ಟು ತೇರ್ಗಡೆಯಾಗಿದ್ದಾರೆ. ಇನ್ನು ನಗರ ಪ್ರದೇಶದಲ್ಲಿ ಪರೀಕ್ಷೆ ಬರೆದ 8715ರಲ್ಲಿ 6905 ವಿದ್ಯಾರ್ಥಿಗಳು ಶೇ.79.23, 8952ರಲ್ಲಿ 7789 ವಿದ್ಯಾರ್ಥಿನಿಯರು ಶೇ.87.01 ರಷ್ಟು ತೇರ್ಗಡೆಯಾಗಿದ್ದು, ಒಟ್ಟಾರೆ ಶೇ.83.17 ರಷ್ಟು ನಗರ, ಶೇ.84.23 ರಷ್ಟು ಗ್ರಾಮೀಣ ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಮೇಲುಗೈ ಸಾಧಿಸಿದ್ದಾರೆ.
ಖಾಸಗಿ ಶಾಲೆಗಳು ಮೇಲುಗೈ
ಬಳ್ಳಾರಿ/ವಿಜಯನಗರ ಅವಳಿ ಜಿಲ್ಲೆಗಳಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಶೇ.91.27 ರಷ್ಟು ಪಡೆದ ಖಾಸಗಿ ಶಾಲೆಗಳೇ ಮೇಲುಗೈ ಸಾಧಿಸಿವೆ. ಈ ಪೈಕಿ ಸರ್ಕಾರಿ ಶಾಲೆಗಳಿಂದ ಪರೀಕ್ಷೆ ಬರೆದ 23563ರಲ್ಲಿ 18825 ವಿದ್ಯಾರ್ಥಿಗಳು ಶೇ.79.89, ಅನುದಾನಿತ ಶಾಲೆಗಳಿಂದ 8092ರಲ್ಲಿ 6833 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಶೇ.84.44 ರಷ್ಟು, ಖಾಸಗಿ ಶಾಲೆಗಳಿಂದ 11597ರಲ್ಲಿ 10585 ವಿದ್ಯಾರ್ಥಿಗಳು ತೇರ್ಗಡೆಯಾಗಿ ಶೇ.91.27 ರಷ್ಟು ಫಲಿತಾಂಶ ಪಡೆಯುವಲ್ಲಿ ಯಶಸ್ವಿಯಾಗಿದ್ದು, ಮೇಲುಗೈ ಸಾಧಿಸಿವೆ. ಒಟ್ಟಾರೆಯಾಗಿ ಅವಳಿ ಜಿಲ್ಲೆಗಳು ಶೇ.83.79 ರಷ್ಟು ಫಲಿತಾಂಶ ಗಳಿಸಿವೆ ಎಂದು ಶಿಕ್ಷಣ ಇಲಾಖೆಯ ಅಂಕಿ ಅಂಶಗಳು ತಿಳಿಸುತ್ತವೆ.
ಕೂಡ್ಲಿಗಿ ಪ್ರಥಮ
ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಶೇ.91.38 ರಷ್ಟು ಫಲಿತಾಂಶ ಪಡೆದಿರುವ ಕೂಡ್ಲಿಗಿ ತಾಲೂಕು ಜಿಲ್ಲೆಯಲ್ಲೇ ಪ್ರಥಮ ಸ್ಥಾನಗಳಿಸಿದ್ದು, ಕೇವಲ ಶೇ.74.75 ರಷ್ಟು ಫಲಿತಾಂಶ ಗಳಿಸಿದ ಸಿರುಗುಪ್ಪ ತಾಲೂಕು ಕೊನೆ ಸ್ಥಾನಗಳಿಸಿದೆ. ಇನ್ನು ಬಳ್ಳಾರಿ ಪಶ್ಚಿಮ ವಲಯ ಶೇ.88.23 ರಷ್ಟು ಫಲಿತಾಂಶ ಪಡೆದು ದ್ವಿತೀಯ ಸ್ಥಾನಗಳಿಸಿದರೆ, ಹರಪನಹಳ್ಳಿ ಶೇ.87.16, ಸಂಡೂರು ಶೇ.85.73, ಹೂವಿನಹಡಗಲಿ ಶೇ.85.44, ಹಗರಿಬೊಮ್ಮನಹಳ್ಳಿ ಶೇ.85.33, ಬಳ್ಳಾರಿ ಪೂರ್ವ ಶೇ.82.76, ಹೊಸಪೇಟೆ ಶೇ.76.88 ರಷ್ಟು ಫಲಿತಾಂಶ ಪಡೆದ ತಾಲೂಕುಗಳು ಕ್ರಮವಾಗಿ ನಂತರದ ಸ್ಥಾನಗಳಲ್ಲಿವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಂಕಿ ಅಂಶಗಳು ಸ್ಪಷ್ಟಪಡಿಸಿವೆ.
-ವೆಂಕೋಬಿ ಸಂಗನಕಲ್ಲು