Advertisement

ಹುಣಸೂರು: ಇಂದಿನಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆ

10:33 AM Mar 31, 2023 | Team Udayavani |

ಹುಣಸೂರು: ಇಂದಿನಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆ ಆರಂಭವಾಗಿದ್ದು, ತಾಲೂಕಿನಿಂದ 26 ವಿಕಲಚೇತನ ವಿದ್ಯಾರ್ಥಿಗಳು ಸೇರಿ 3852 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆಯುತ್ತಿದ್ದಾರೆ.

Advertisement

ನಗರ ಸೇರಿದಂತೆ ಪರೀಕ್ಷಾ ಸಿದ್ದತೆ ಕುರಿತು ಮಾಹಿತಿ ನೀಡಿದ ಬಿಇಓ ರೇವಣ್ಣ ತಾಲೂಕಿನ 15 ಪರೀಕ್ಷಾ ಕೇಂದ್ರಗಳಲ್ಲಿ, 1857 ಗಂಡು, 1995 ಬಾಲಕಿಯರು ಸೇರಿ ಒಟ್ಟು 3852 ವಿದ್ಯಾರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆ ಎದುರಿಸುತ್ತಿದ್ದಾರೆ.

ಎಲ್ಲಾ 15 ಕೇಂದ್ರಗಳಲ್ಲೂ ಮೊಬೈಲ್ ಸ್ವಾಧಿನಾಧಿಕಾರಿಗಳು ಇರಲಿದ್ದಾರೆ.

6 ರೂಟ್ ಗಳಲ್ಲಿ ಮಾರ್ಗಾಧಿಕಾರಿಗಳು ಪರೀಕ್ಷಾ ಕೇಂದ್ರಗಳಿಗೆ ನಿಗದಿತ ವೇಳೆಯಲ್ಲಿ ಪರೀಕ್ಷಾಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆ ತಲುಪಿಸಲಿದ್ದಾರೆ.

198 ಮಂದಿ ಕೊಠಡಿ ಮೇಲ್ವಿಚಾರಕರು, 15 ಸಿಟ್ಟಿಂಗ್ ಸ್ವಾಡ್ (ಸ್ಥಾನಿಕ ಜಾಗೃತ ದಳ) ನಿಯೋಜಿಸಲಾಗಿದೆ. ಎಲ್ಲಾ ಕೇಂದ್ರಗಳ ಕಾರಿಡಾರ್ ಗಳಲ್ಲಿ ಸಿ.ಸಿ.ಕ್ಯಾಮರಾ ಅಳವಡಿಸಿದ್ದು. ಇದರಿಂದ ಚಲನವಲನ ಗಮನಿಸಲು ನೆರವಾಗಲಿದೆ.

Advertisement

ಎಲ್ಲಾ ಪರೀಕ್ಷಾ ಕೇಂದ್ರಗಳ ಸುತ್ತ 500 ಮೀಟರ್ ಅಂತರದಲ್ಲಿರುವ ಜೆರಾಕ್ಸ್ ಸೆಂಟರ್ ಗಳನ್ನು ಮುಚ್ಚಲು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಹೀಗಾಗಿ ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನಲ್ಲಿರುವ ಜೆರಾಕ್ಸ್ ಅಂಗಡಿಗಳನ್ನು ಏ.15ರ ವರೆಗೆ ಮುಚ್ಚಲು ಅಂಗಡಿ ಮಾಲಿಕರಿಗೆ ಸೂಚನೆ ನೀಡಲಾಗಿದೆ.

ಅಲ್ಲದೆ ಈ ಬಾರಿ ಗುರುಪುರದಿಂದ ಹನಗೋಡಿನ ಪರೀಕ್ಷಾ ಕೆಂದ್ರಕ್ಕೆ ತೆರಳಬೇಕಾಗಿತ್ತು. ನಿಗದಿತ ಸಮಯದಲ್ಲಿ ತಲುಪಲು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದ್ದುದ್ದನ್ನು ಮನಗಂಡು ನಲ್ಲೂರು ಪಾಲ ಮತ್ತು ಗುರುಪುರ ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ ಗುರುಪುರ ಪ್ರೌಢ ಶಾಲೆಯಲ್ಲಿ ಹೊಸ ಕೇಂದ್ರ ತೆರೆಯಲಾಗಿದೆ.

ನಿಗದಿತ ವೇಳೆಯಲ್ಲಿ ಪರೀಕ್ಷೆಗೆ ಹಾಜರಾಗಲು ನೆರವಾಗುವ ಸಲುವಾಗಿ ಕೆ.ಎಸ್.ಆರ್.ಟಿ.ಸಿ.ವತಿಯಿಂದ ಐದು ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು  ಉದಯವಾಣಿಗೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next