ವಾಷಿಂಗ್ಟನ್: ಎಸ್.ಎಸ್. ರಾಜಾಮೌಳಿ ಅವರ ʼಆರ್ ಆರ್ ಆರ್ʼ ಸಿನಿಮಾ ಅಂತಾರಾಷ್ಟ್ರೀಯ 80ನೇ ಗೋಲ್ಡನ್ ಗ್ಲೋಬ್ ಅವಾರ್ಡ್ಸ್ ನಲ್ಲಿ ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಬಳಿಕ ರೆಡ್ ಕಾರ್ಪೆಟ್ ನಲ್ಲಿ ಆರ್ ಆರ್ ಆರ್ ಸಿನಿಮಾದ ಎರಡನೇ ಭಾಗದ ಬಗ್ಗೆ ಮಹತ್ವದ ವಿಚಾರವನ್ನು ಬಿಚ್ಚಿಟ್ಟಿದ್ದಾರೆ.
ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಪ್ರಶಸ್ತಿಯಲ್ಲಿ ಅತ್ಯುತ್ತಮ ವಿದೇಶಿ ( ನಾನ್ ಇಂಗ್ಲೀಷ್) ಸಿನಿಮಾ ಹಾಗೂ ಬೆಸ್ಟ್ ಒರಿಜಿನಲ್ ಸಾಂಗ್ ( ನಾಟು ನಾಟು) ವಿಭಾಗದಲ್ಲಿ ನಾಮಿನೇಟ್ ಆಗಿತ್ತು. ಇದರಲ್ಲಿ ಬೆಸ್ಟ್ ಒರಿಜಿನಲ್ ಸಾಂಗ್ ಗಾಗಿʼ ನಾಟು ನಾಟುʼ ಅವಾರ್ಡ್ ಪಡೆದುಕೊಂಡಿದೆ.
ಅವಾರ್ಡ್ ಸ್ವೀಕರಿಸಿದ ಬಳಿಕ ರೆಡ್ ಕಾರ್ಪೆಟ್ ನಲ್ಲಿ ಮಾತಾನಾಡಿದ ಅವರು, ʼಆರ್ ಆರ್ ಆರ್ʼ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವಾಗ ಸಿನಿಮಾದ ಎರಡನೇ ಭಾಗದ ಬಗ್ಗೆ ಯೋಚನೆ ಮಾಡಿದ್ದೆವು. ಆಗಲೇ ನಮ್ಮ ಬಳಿ ಕೆಲ ಯೋಜನೆಗಳಿದ್ದವು. ಆದರೆ ಯಾವುದನ್ನು ಪೂರ್ಣಗೊಳಿಸಲು ಆಗಿಲ್ಲ. ಇದಾದ ಬಳಿಕ ಕೆಲ ವಾರಗಳ ನಂತರ ನಾನು ತಂದೆ ಹಾಗೂ ನನ್ನ ಸಹೋದರ ಸಂಬಂಧಿಯೊಬ್ಬರ ಜೊತೆ ಮತ್ತೆ ಸಿನಿಮಾದ ಎರಡನೇ ಭಾಗದ ಬಗ್ಗೆ ಚರ್ಚಿಸಿದಾಗ, ಆಗ ಅದ್ಭುತ ಐಡಿಯಾವೊಂದು ನಮ್ಮ ತಲೆಯಲ್ಲಿ ಬಂತು. ಕೂಡಲೇ ಅದನ್ನು ಬರೆಯಲು ಆರಂಭ ಮಾಡಿದ್ದೇವೆ. ಅದು ಸದ್ಯ ನಡೆಯುತ್ತಿದೆ. ಸ್ಕ್ರಿಪ್ಟ್ ನಡೆಯುತ್ತಿದೆ ಆದಾದ ಬಳಿಕವೇ ಮುಂದಿನದು ಯೋಚನೆ ಎಂದರು.
ಇದನ್ನೂ ಓದಿ: ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಗೆದ್ದ ʼಆರ್ ಆರ್ ಆರ್ʼ ʼನಾಟು ನಾಟುʼ ಹಾಡಿಗೆ ಅಂತಾರಾಷ್ಟ್ರೀಯ ಅವಾರ್ಡ್
ಆರ್ ಆರ್ ಆರ್ ಚಿತ್ರದ ಸಾಹಸ ದೃಶ್ಯಗಳು ತುಂಬಾ ಸುಂದರವಾಗಿ ಮೂಡಿಬಂದಿದೆ. ಚಿತ್ರೀಕರಣದ ಸಂದರ್ಭದಲ್ಲಿ ಯಾರಿಗೆ ಹೆಚ್ಚು ನೋವಾಯಿತು ಎಂದಾಗ, ನಾನು ಯಾರಿಗೂ ನೋವು ಮಾಡಿಲ್ಲ. ನಾನು ಅವರನ್ನು ಮಕ್ಕಳಂತೆ ನೋಡಿಕೊಂಡಿದ್ದೇನೆ ಎಂದು ರಾಮ್ ಚರಣ್ ನತ್ತ ನೋಡಿ ಹೇಳಿದರು ರಾಜಾಮೌಳಿ.
ಬೆಸ್ಟ್ ಪಿಕ್ಚರ್ ವಿಭಾಗದಲ್ಲಿ ಆರ್ ಆರ್ ಆರ್ ಸೋತಿದೆ. ಬೆಸ್ಟ್ ನಾನ್ ಇಂಗ್ಲಿಷ್ ಸಿನಿಮಾ ಅವಾರ್ಡ್ ʼಅರ್ಜೆಂಟೀನಾ 1985ʼ ಕ್ಕೆ ಸಿಕ್ಕಿದೆ.