Advertisement

Earthquake: ಜಪಾನ್ ಭೂಕಂಪದಿಂದ ಪಾರಾದ ನಿರ್ದೇಶಕ ರಾಜಮೌಳಿ, ಪುತ್ರ ಕಾರ್ತಿಕೇಯ

01:53 PM Mar 21, 2024 | Team Udayavani |

ಹೈದರಾಬಾದ್: ತೆಲುಗಿನ ಲೆಜೆಂಡರಿ ನಿರ್ದೇಶಕ ಎಸ್‌ಎಸ್ ರಾಜಮೌಳಿ ಅವರ ನಿರ್ದೇಶನದ ಆರ್‌ಆರ್‌ಆರ್ ಚಿತ್ರ ದೇಶದಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ಉತ್ತಮ ಯಶಸ್ಸನ್ನು ಕಂಡುಕೊಂಡಿದೆ. ಅಷ್ಟು ಮಾತ್ರವಲ್ಲದೆ ಆರ್‌ಆರ್‌ಆರ್ ಚಿತ್ರದ ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ ಕೂಡ ಲಭಿಸಿತ್ತು.

Advertisement

ರಾಮ್ ಚರಣ್ ಮತ್ತು ಎನ್‌ಟಿಆರ್ ಅಭಿನಯದ ಆರ್‌ಆರ್‌ಆರ್ ಚಿತ್ರ ಜಪಾನ್‌ನಲ್ಲಿ ಬಿಡುಗಡೆಯಾದಾಗಿನಿಂದ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ, ಇದೀಗ ಆರ್‌ಆರ್‌ಆರ್ ಚಿತ್ರದ ವಿಶೇಷ ಪ್ರದರ್ಶನವನ್ನು ಏರ್ಪಡಿಸಿದ್ದರು ಅದಕ್ಕಾಗಿ ರಾಜಮೌಳಿ, ಕಾರ್ತಿಕೇಯ ಮತ್ತು ಶೋಬು ಜಪಾನ್ ಗೆ ತೆರಳಿದ್ದರು. ಆದರೆ ಜಪಾನ್ ಗೆ ಬಂದ ರಾಜಮೌಳಿ ಕುಟುಂಬ ದೊಡ್ಡ ಅವಘಡದಿಂದ ಪಾರಾಗಿದೆ.

ಹೌದು ಜಪಾನ್ ನಲ್ಲಿ ಆರ್‌ಆರ್‌ಆರ್ ಚಿತ್ರದ ವಿಶೇಷ ಪ್ರದರ್ಶನ ನಿಗದಿಪಡಿಸಿದ ನಿಟ್ಟಿನಲ್ಲಿ ನಿರ್ದೇಶಕ ರಾಜಮೌಳಿ, ಪುತ್ರ ಕಾರ್ತಿಕೇಯ ಮತ್ತು ನಿರ್ಮಾಪಕ ಶೋಬು ಕೆಲ ದಿನಗಳ ಹಿಂದೆ ಜಪಾನ್ ಗೆ ತೆರಳಿದ್ದರು ಅಲ್ಲಿ ಹೋಟೆಲ್ ಒಂದರಲ್ಲಿ 28ನೇ ಮಹಡಿಯಲ್ಲಿ ಉಳಿದುಕೊಂಡಿದ್ದರು. ಈ ವೇಳೆ ಜಪಾನ್ ನಲ್ಲಿ ಭೂಕಂಪ ಸಂಭವಿಸಿದೆ ಅದೃಷ್ಟವಶಾತ್ ರಾಜಮೌಳಿ ಕುಟುಂಬ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.

ಈ ಕುರಿತು ಪುತ್ರ ಕಾರ್ತಿಕೇಯನ್ ಟ್ವೀಟ್ ಮಾಡಿದ್ದು ಇಂದು (ಗುರುವಾರ) ನಾವು ಭೂಕಂಪನವನ್ನು ಅನುಭವಿಸಿದ್ದಾಗಿ ಬರೆದುಕೊಂಡಿದ್ದಾನೆ ಅಲ್ಲದೆ ತಾವಿದ್ದ ಕಟ್ಟಡದಲ್ಲೂ ಕಂಪನದ ಅನುಭವವಾಗಿದೆ ಎಂದು ಹೇಳಿಕೊಂಡಿದ್ದಾರೆ. ಅದೃಷ್ಟವಶಾತ್ ಯಾವುದೇ ತೊಂದರೆ ಆಗಿಲ್ಲ, ನಾವು ಹೋಟೆಲ್ ನ 28ನೇ ಮಹಡಿಯಲ್ಲಿದ್ದೆವು ಈ ವೇಳೆ ನಮ್ಮ ಮೊಬೈಲ್ ಗೆ ಭೂಕಂಪನದ ಮುನ್ಸೂಚನೆ ಬಂದಿದ್ದಾಗಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Election 2024: ಚುನಾವಣಾ ಆಯುಕ್ತರ ನೇಮಕಕ್ಕೆ ತಡೆ ನೀಡಲು ಸುಪ್ರೀಂಕೋರ್ಟ್‌ ನಕಾರ

Advertisement
Advertisement

Udayavani is now on Telegram. Click here to join our channel and stay updated with the latest news.

Next