Advertisement

ಬಾಹುಬಲಿ ನಿರ್ದೇಶಕ ರಾಜಮೌಳಿ ಮತ್ತು ಕುಟುಂಬಸ್ಥರಿಗೆ ಕೋವಿಡ್ ಸೊಂಕು ದೃಢ

01:48 PM Jul 30, 2020 | Mithun PG |

ಮುಂಬೈ: ಖ್ಯಾತ ಚಿತ್ರನಿರ್ದೇಶಕ ಎಸ್.ಎಸ್ ರಾಜಮೌಳಿ ಮತ್ತು ಅವರ ಕುಟುಂಬ ಸದಸ್ಯರಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಜುಲೈ 29ರ ಬುಧವಾರದಂದು ಈ ಕುರಿತು ಸ್ವತಃ  ಟ್ವೀಟ್ ಮಾಡಿ ತಿಳಿಸಿದ ಬಾಹುಬಲಿ ನಿರ್ದೇಶಕ, ತನಗೂ ಮತ್ತು ಕುಟುಂಬಸ್ಥರಿಗೂ ಕಳೆದ 5 ದಿನಗಳಿಂದ ಸಣ್ಣ ಮಟ್ಟಿಗಿನ ಜ್ವರ ಕಾಣಿಸಿಕೊಂಡಿದೆ ಎಂದಿದ್ದಾರೆ.

Advertisement

ನಂತರದಲ್ಲಿ ಜ್ವರ ಕಡಿಮೆಯಾಗಿದ್ದರೂ ಕೋವಿಡ್ ಪರೀಕ್ಷೆಗೆ ಒಳಪಟ್ಟಿದ್ದೆವು. ಈ ವೇಳೆ ಪಾಸಿಟಿವ್ ವರದಿ ಬಂದಿದ್ದು ವೈದ್ಯರ ಸಲಹೆಯ ಮೇರೆಗೆ ಮನೆಯಲ್ಲಿಯೇ ಕ್ವಾರಂಟೈನ್ ಆಗಿ ಚಿಕಿತ್ಸೆ ಪಡೆಯುತ್ತಿದ್ದೇವೆ. ಸದ್ಯ ಕುಟುಂಬದ ಸದ್ಯರಿಗಾರಿಗೂ ರೋಗ ಲಕ್ಷಣ ಇಲ್ಲವಾಗಿದ್ದು ಸರ್ಕಾರ ಸೂಚಿಸಿದ ಎಲ್ಲಾ ಮುನ್ನೆಚ್ಚರಿಕೆಗಳನ್ನು ಪಾಲಿಸುತ್ತಿರುವುದಾಗಿ  ತಿಳಿಸಿದರು.

ಮಾತ್ರವಲ್ಲದೆ ಕುಟುಂಬ ಸದಸ್ಯರು ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಕಾಯುತ್ತಿದ್ದು, ಮಾರಣಾಂತಿಕ ವೈರಸ್ ಸೋಂಕಿಗೆ ಒಳಗಾದ ಇತರ ಜನರಿಗೆ ಸಹಾಯ ಮಾಡಲು ಪ್ಲಾಸ್ಮಾ ದಾನ ಮಾಡುವ ಆಲೋಚನೆ ಇದೆ ಎಂದು ರಾಜಮೌಳಿ ತಿಳಿಸಿದ್ದಾರೆ.

Advertisement

ರಾಜಮೌಳಿ ಸದ್ಯ ತಮ್ಮ ಬಹುಬಜೆಟ್  ಆರ್.ಆರ್.ಆರ್ ಚಿತ್ರದ ಚಿತ್ರೀಕರಣವನ್ನು ಪುನರಾರಂಭಿಸಲು ಕಾಯುತ್ತಿದ್ದಾರೆ. ಆದರೆ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳದಿಂದಾಗಿ ಚಿತ್ರಿಕರಣ ಮುಂದೂಡಲಾಗಿದೆ.  450 ಕೋಟಿ ರೂ.ಗಳ ಬಜೆಟ್‌ನಲ್ಲಿ ನಿರ್ಮಿಸಲಾಗಿರುವ ಈ ಚಿತ್ರವು 2021 ರ ಜನವರಿ 8 ರಂದು ಬಿಡುಗಡೆಯಾಗಲಿದೆ ಎಮದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next