Advertisement

ನಿರ್ಮಾಪಕನಾದ ರಾಜಮೌಳಿ ಪುತ್ರ: ಎರಡು ಹೊಸ ಸಿನಿಮಾ ಅನೌನ್ಸ್; ಲೀಡ್‌ ರೋಲ್ ನಲ್ಲಿ ಫಾಫಾ

04:09 PM Mar 19, 2024 | Team Udayavani |

ಹೈದರಾಬಾದ್: ಮಾಲಿವುಡ್‌ ಸ್ಟಾರ್‌ ನಟ ಫಾಹದ್‌ ಫಾಸಿಲ್ ಸದ್ಯ ಬಹು ನಿರೀಕ್ಷಿತ ʼ ಆವೇಶಮ್ʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಅದರೊಂದಿಗೆ ಪ್ಯಾನ್‌ ಇಂಡಿಯಾ ʼಪುಷ್ಪ-2ʼ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Advertisement

ಸೌತ್‌ ಸಿನಿರಂಗದ ಬಹುಬೇಡಿಕೆಯ ನಟನಾಗಿರುವ ಫಾಹದ್‌ ಫಾಸಿಲ್‌ ಮತ್ತೊಮ್ಮೆ ತೆಲುಗು ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರು ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಎರಡು ತೆಲುಗು ಸಿನಿಮಾಗಳು ಅನೌನ್ಸ್‌ ಆಗಿದೆ.

ಈ ಚಿತ್ರಗಳನ್ನು ಎಸ್‌ಎಸ್ ರಾಜಮೌಳಿ ಪ್ರಸ್ತುತಪಡಿಸುತ್ತಿದ್ದಾರೆ. ಅವರ ಮಗ ಎಸ್‌ಎಸ್ ಕಾರ್ತಿಕೇಯ ಅವರು ಚಿತ್ರದ ನಿರ್ಮಾಪಕರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಫಾಹದ್ ಅಭಿನಯದ ಎರಡೂ ಚಿತ್ರಗಳ ಫಸ್ಟ್ ಲುಕ್ ನ್ನು ಸ್ವತಃ ನಿರ್ಮಾಪಕರೇ ಹಂಚಿಕೊಂಡಿದ್ದಾರೆ.

ʼಡೋಟ್‌ ಟ್ರಬಲ್‌ ದಿ ಟ್ರಬಲ್‌ʼ ಎನ್ನುವ ಸಿನಿಮಾ ಫ್ಯಾಂಟಸಿ ಹಾಗೂ ಥ್ರಿಲ್ಲರ್‌ ಕಥೆಯನ್ನೊಳಗೊಂಡಿದ್ದು, ಈ ಸಿನಿಮಾವನ್ನು ಶಶಾಂಕ್ ಯೆಲೇಟಿ ಅವರು ನಿರ್ದೇಶನ ಮಾಡಲಿದ್ದಾರೆ. ಅರ್ಕಾ ಮೀಡಿಯಾವರ್ಕ್ಸ್ ಮತ್ತು ಶೋಯಿಂಗ್‌ ಬ್ಯುಸಿನೆಸ್‌ ಬ್ಯಾನರ್‌ ಅಡಿಯಲ್ಲಿ ರಾಜಮೌಳಿ ಅವರ ಪುತ್ರ ಎಸ್‌ಎಸ್ ಕಾರ್ತಿಕೇಯ ಅವರು ನಿರ್ಮಾಣ ಮಾಡಲಿದ್ದಾರೆ.

ಸ್ನೇಹದ ಕಥೆ… ನೈಜ ಘಟನೆಗಳಿಂದ ಪ್ರೇರಿತವಾಗಿದೆ ಎಂದಿರುವ ʼಆಕ್ಸಿಜನ್ʼ ಎನ್ಜುವ ಸಿನಿಮಾವನ್ನು ಸಿದ್ಧಾರ್ಥ ನಾಡೆಲ್ಲಾ ಅವರು ನಿರ್ದೇಶನ ಮಾಡಲಿದ್ದಾರೆ. ಈ ಸಿನಿಮಾವನ್ನು ಕೂಡ  ಅರ್ಕಾ ಮೀಡಿಯಾವರ್ಕ್ಸ್ ಮತ್ತು ಶೋಯಿಂಗ್‌ ಬ್ಯುಸಿನೆಸ್‌ ಬ್ಯಾನರ್‌ ಎಸ್‌ಎಸ್ ಕಾರ್ತಿಕೇಯ ಅವರು ನಿರ್ಮಾಣ ಮಾಡಲಿದ್ದಾರೆ.

Advertisement

ಎಸ್‌ಎಸ್ ಕಾರ್ತಿಕೇಯ ಇತ್ತೀಚೆಗೆ ಮಲಯಾಳಂ ‘ಪ್ರೇಮಲುʼ ಸಿನಿಮಾವನ್ನು ತೆಲುಗಿನಲ್ಲಿ ವಿತರಣೆಯನ್ನು ಮಾಡಿ ಗೆದ್ದಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next