Advertisement

Kannada Cinema: ‘ಸಾರಾಂಶ’ ಹೇಳುತ್ತಾ ಬಂದ ಶೃತಿ ಹರಿಹರನ್‌

06:18 PM Jan 15, 2024 | Team Udayavani |

“ಸಾರಾಂಶ’- ಹೀಗೊಂದು ಚಿತ್ರ ಸದ್ದಿಲ್ಲದೇ ಚಿತ್ರೀಕರಣ ಮುಗಿಸಿ ಬಿಡುಗಡೆಯ ಹಂತಕ್ಕೆ ಬಂದಿದೆ. ಈ ಚಿತ್ರವನ್ನು ಸೂರ್ಯ ವಸಿಷ್ಠ ನಿರ್ದೇಶನ ಮಾಡಿದ್ದಾರೆ. ಶೃತಿ ಹರಿಹರನ್‌ ಈ ಸಿನಿಮಾ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಓರ್ವ ಕಥೆಗಾರ ತಾನು ಸೃಷ್ಟಿಸಿದ ಪಾತ್ರವನ್ನೇ ಎದುರುಗೊಳ್ಳುವ ಕಥಾಎಳೆಯೊಂದಿಗೆ ಈ ಸಿನಿಮಾ ಸಾಗಲಿದೆ. ಮ್ಯಾಜಿಕಲ್‌ ರಿಯಲಿಸಂ ಎಂಬ ಅಪರೂಪದ ‌ ಜಾನರಿಗೆ ಈ ಸಿನಿಮಾ ಒಳಪಡಲಿದೆಯಂತೆ.

Advertisement

ಚಿತ್ರದಲ್ಲಿ ದೀಪಕ್‌ ಸುಬ್ರಹ್ಮಣ್ಯ, ಸೂರ್ಯ ವಸಿಷ್ಠ, ಶೃತಿ ಹರಿಹರನ್‌, ಶ್ವೇತಾ ಗುಪ್ತ ಜೀವ, ಆಸಿಫ್ ಕ್ಷತ್ರಿಯಾ, ರವಿ ಭಟ್‌, ರಾಮ್‌ ಮಂಜುನಾಥ್‌, ಸತೀಶ್‌ ಕುಮಾರ್‌, ಪೃಥ್ವಿ ಬನವಾಸಿ ನಟಿಸಿದ್ದಾರೆ. ಸೂರ್ಯ ವಸಿಷ್ಠ ಮತ್ತು ಗಂಟುಮೂಟೆ ಖ್ಯಾತಿಯ ರೂಪಾ ರಾವ್‌ ಸಂಭಾಷಣೆ ಬರೆದಿದ್ದಾರೆ.

ಸಾರಾಂಶ ಚಿತ್ರದಲ್ಲಿ ಒಟ್ಟು ಮೂರು ಹಾಡುಗಳಿದ್ದಾವೆ. ಅವೆಲ್ಲವಕ್ಕೆ ಉದಿತ್‌ ಹರಿತಾಸ್‌ (ಅಜ್ಞಾತ) ಸಂಗೀತ ಸಂಯೋಜನೆ ಮಾಡಿದ್ದಾರೆ. ಪ್ರಮೋದ್‌ ಮರವಂತೆ ಮತ್ತು ಸೂರ್ಯ ವಸಿಷ್ಠ ಸಾಹಿತ್ಯವಿರೋ ಹಾಡುಗಳಿಗೆ ಮಾಧುರಿ ಶೇಷಾದ್ರಿ ಮತ್ತು ಪಂಚಮ್‌ ಜೀವಾ ಧ್ವನಿಯಾಗಿದ್ದಾರೆ. ಅಪರಾಜಿತ್‌ ಹಿನ್ನೆಲೆ ಸಂಗೀತ, ಪ್ರದೀಪ್‌ ನಾಯಕ್‌ ಸಂಕಲನ ಈ ಚಿತ್ರಕ್ಕಿದೆ. ರವಿ ಕಶ್ಯಪ್‌ ಮತ್ತು ಆರ್‌ ಕೆ ನಲ್ಲಮ್‌ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next