Advertisement

‌Bollywood: ಶಾರುಖ್‌ ʼಡಂಕಿʼಗೆ ʼಯುಎʼ ಸರ್ಟಿಫಿಕೇಟ್; ರನ್‌ ಟೈಮ್‌ ರಿವೀಲ್

06:14 PM Dec 16, 2023 | Team Udayavani |

ಮುಂಬಯಿ: ಕಿಂಗ್‌ ಖಾನ್‌ ಶಾರುಖ್‌ ಅವರ ಬಹು ನಿರೀಕ್ಷಿತ ʼ ಡಂಕಿʼ ಇದೇ ಡಿ.21 ರಂದು ವರ್ಲ್ಡ್‌ ವೈಡ್‌ ಗ್ರ್ಯಾಂಡ್‌ ಆಗಿ ರಿಲೀಸ್‌ ಆಗಲಿದೆ. ಈಗಾಗಲೇ ಸಿನಿಮಾದ ಟ್ರೇಲರ್‌ ಗೆ ಭರ್ಜರಿ ರೆಸ್ಪಾನ್ಸ್‌ ವ್ಯಕ್ತವಾಗಿದೆ.

Advertisement

ʼಪಠಾಣ್‌ʼ, ʼಜವಾನ್‌ʼ ಬಳಿಕ ಶಾರುಖ್‌ ʼಡಂಕಿʼ ಮೂಲಕ ಹ್ಯಾಟ್ರಿಕ್‌ ಹಿಟ್ ಕೊಡುವ ನಿರೀಕ್ಷೆಯಲ್ಲಿದ್ದಾರೆ. ಸೂಪರ್‌ ಹಿಟ್‌ ನಿರ್ದೇಶಕ ರಾಜ್‌ ಕುಮಾರ್‌ ಹಿರಾನಿ ಅವರು ಸಿನಿಮಾಕ್ಕೆ ಆ್ಯಕ್ಷನ್ ಕಟ್‌ ಹೇಳಿದ್ದು ಈ ಕಾರಣದಿಂದ ನಿರೀಕ್ಷೆ ದುಪ್ಪಾಟ್ಟಾಗಿದೆ.

ʼಡಂಕಿʼ ಸಿನಿಮಾದ ಸೆನ್ಸಾರ್‌ ಪಾಸ್‌ ಆಗಿದೆ. ಸಿನಿಮಾಕ್ಕೆ ʼಯುಎʼ ಸರ್ಟಿಫಿಕೇಟ್‌ ನ್ನು ನೀಡಲಾಗಿದೆ. 2 ಗಂಟೆ 41 ನಿಮಿಷ‌ ಸಿನಿಮಾ ಇರಲಿದೆ. ಸಿನಿಮಾವನ್ನು ನೋಡಿದ ಸೆನ್ಸಾರ್‌ ಬೋರ್ಡ್‌, ಸೀಮಿತ ಕಟ್‌ಗಳನ್ನು ಮಾಡುವಂತೆ ಚಿತ್ರತಂಡಕ್ಕೆ ಹೇಳಿದೆ.

ಚಲನಚಿತ್ರದ ಪ್ರಾರಂಭದಲ್ಲಿ ಧೂಮಪಾನ-ವಿರೋಧಿ ಎಚ್ಚರಿಕೆಗಳನ್ನು ಸೇರಿಸುವುದರ ಬಗ್ಗೆ ಸೂಚನೆ ನೀಡಿದೆ. ‘ವಲಸಿಗರು’ ಎಂಬ ಪದವನ್ನು ಮಾರ್ಪಡಿಸಲು ಸೇರಿದಂತೆ ಇತರೆ ಕೆಲ ಸೂಚನೆ ನೀಡಿದೆ ಎಂದು ವರದಿಯಾಗಿದೆ.

ʼಡಂಕಿʼ ಯಲ್ಲಿ ಶಾರುಖ್ ಖಾನ್ ಜೊತೆ ತಾಪ್ಸಿ ಪನ್ನು, ವಿಕ್ಕಿ ಕೌಶಲ್ ಸೇರಿದಂತೆ ಇತರ ಪ್ರಮುಖರು ನಟಿಸಿದ್ದಾರೆ.

Advertisement

ʼಡಂಕಿʼಯಲ್ಲಿ ವಲಸೆ ಸಮಸ್ಯೆಗಳು ಮತ್ತು ಜನರು ಅಕ್ರಮವಾಗಿ ಗಡಿ ದಾಟುವ ಕಥೆಯನ್ನು ಹೇಳಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next