Advertisement

Malpe; ವಡಭಾಂಡ ಬಲರಾಮ ದೇವಸ್ಥಾನ ;ಬ್ರಹ್ಮಕಲಶದಿಂದ ಪರಿಸರವೂ ಪರಿಶುದ್ಧ: ಕೃಷ್ಣಾಪುರ ಶ್ರೀ

12:08 AM Mar 25, 2024 | Team Udayavani |

ಮಲ್ಪೆ: ದೇವಸ್ಥಾನದ ಜೀರ್ಣೋದ್ಧಾರದಿಂದ ಅಲ್ಲಿನ ಶಕ್ತಿ ವೃದ್ಧಿಯಾಗುತ್ತದೆ, ಭಕ್ತರ ಅಭೀಷ್ಟಗಳು ಸಿದ್ಧಿಸುತ್ತವೆ. ಕಾಲ ಕಾಲಕ್ಕೆ ಬ್ರಹ್ಮಕಲಶ ಸೇರಿದಂತೆ ಪೂಜೆ ಪುನಸ್ಕಾರಗಳನ್ನು ನಡೆಸಿ ಶುದ್ಧವಾಗಿರಿಸಿದರೆ ನಮ್ಮ ಪರಿಸರ, ಮನಸ್ಸು ಪರಿಶುದ್ಧವಾಗಿರುತ್ತದೆ. ಆ ಮೂಲಕ ನಾವು ದೇವರ ಅನುಗ್ರಹಕ್ಕೆ ಪಾತ್ರರಾಗುತ್ತೇವೆ ಎಂದು ಉಡುಪಿ ಶ್ರೀ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ನುಡಿದರು.

Advertisement

ಅವರು ರವಿವಾರ ವಡಭಾಂಡೇಶ್ವರ ಶ್ರೀ ವಡಭಾಂಡ ಬಲರಾಮ ದೇವಸ್ಥಾನದ ಪುನಃ ಪ್ರತಿಷ್ಠೆ, ಅಷ್ಟಬಂಧ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.

ಕೃಷ್ಣ -ಬಲರಾಮರು ಅಭಿಮುಖ
ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರತೀರ್ಥ ಶ್ರೀಪಾದರು ಆಶೀರ್ವಚನ ನೀಡಿ, ವಡಭಾಂಡೇಶ್ವರ ದೇವಸ್ಥಾನ ದೊಡ್ಡ ತಪಸ್ವಿಗಳಿಂದ ನಿರ್ಮಿತವಾದ ಕ್ಷೇತ್ರ.

ಉಡುಪಿಯಲ್ಲಿ ಕೃಷ್ಣ ಪಶ್ಚಿಮಾಭಿಮುಖವಾಗಿದ್ದರೆ, ಮಲ್ಪೆಯಲ್ಲಿ ಬಲರಾಮ ಪೂರ್ವಾಭಿಮುಖವಾಗಿದ್ದಾನೆ. ಅಣ್ಣ ತಮ್ಮಂದಿರು ಅಭಿಮುಖವಾಗಿ ಇರುವ ಕ್ಷೇತ್ರದಲ್ಲಿ ಯಾವುದೇ ಜೀರ್ಣೋದ್ಧಾರ ಕಾರ್ಯದಲ್ಲಿ ನಾವು ತೊಡಗಿದಾಗ ಇಲ್ಲಿ ದೇವರ ವಿಶೇಷ ಅನುಗ್ರಹಕ್ಕೆ ಪಾತ್ರರಾಗುತ್ತೇವೆ ಎಂದರು.

ಧಾರ್ಮಿಕ ಚಿಂತಕ ಡಾ| ಮಧುಸೂದನ ಭಟ್‌ ವಡಭಾಂಡೇಶ್ವರ ಉಪನ್ಯಾಸ ನೀಡಿದರು. ಬ್ರಹ್ಮಕಲ ಶೋತ್ಸವ ಸಮಿತಿಯ ಅಧ್ಯಕ್ಷ ಸಾಧು ಸಾಲ್ಯಾನ್‌ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಪ್ರೋ| ಎಂ.ಎಲ್‌. ಸಾಮಗ, ಸಮಾಜ ಸೇವಕ ಪಾಂಡುರಂಗ ಮಲ್ಪೆ, ಮತ್ಸ್ಯೋದ್ಯಮಿ ರತ್ನಾಕರ ಸಾಲ್ಯಾನ್‌, ಸಮಾಜ ಸೇವಕ ಟಿ. ರಾಘವೇಂದ್ರ ರಾವ್‌, ನಗರಸಭಾ ಸದಸ್ಯ ಕೆ. ವಿಜಯ ಕೊಡ ವೂರು, ತಾ.ಪಂ. ಮಾಜಿ ಉಪಾಧ್ಯಕ್ಷ ಶರತ್‌ ಬೈಲಕರೆ, ತೆಂಕನಿಡಿಯೂರು ಗ್ರಾ.ಪಂ. ಅಧ್ಯಕ್ಷೆ ಶೋಭಾ ಡಿ. ನಾಯ್ಕ, ದೇಗುಲದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ನಾಗರಾಜ ಮೂಲಿಗಾರ್‌, ಗೌರವಾಧ್ಯಕ್ಷ ಶ್ರೀಶ ಭಟ್‌ ಕಡೆಕಾರು ಉಪಸ್ಥಿತರಿದ್ದರು. ವಿಕ್ರಮ್‌ ಟಿ. ಶ್ರೀಯಾನ್‌ ಸ್ವಾಗತಿಸಿ, ಸತೀಶ್‌ ಕೊಡವೂರು ನಿರೂಪಿಸಿ ವಂದಿಸಿದರು. ಕೊಡವೂರು ನವಸುಮ ರಂಗಮಂಚ ಕಲಾವಿದರಿಂದ ತುಳು ನಾಟಕ ಪ್ರದರ್ಶನ ಜರಗಿತು.

Advertisement

ಇಂದು ಬ್ರಹ್ಮಕುಂಭಾಭಿಷೇಕ, ಮಹಾ ಅನ್ನಸಂತರ್ಪಣೆ
ಮಾ. 25ರಂದು ಬೆಳಗ್ಗೆ 6.45ರ ಮೀನ ಲಗ್ನ ಸುಮುಹೂರ್ತದಲ್ಲಿ ದೇವರಿಗೆ ಅಷ್ಟಬಂಧ ಬ್ರಹ್ಮಕುಂಭಾಭಿಷೇಕ ನಡೆಯಲಿದೆ. ಬಳಿಕ ನ್ಯಾಸಪೂಜೆ ಪ್ರಸನ್ನಪೂಜೆ ಅವಸೃತಬಲಿ, ಮಹಾ ಮಂತ್ರಕ್ಷತೆ, ಪ್ರಸಾದ ವಿತರಣೆ, ಪಲ್ಲಪೂಜೆಯಾಗಿ ಮಧ್ಯಾಹ್ನ ಮಹಾಅನ್ನಸಂತರ್ಪಣೆ ನಡೆಯಲಿದೆ. ಇದೇ ಸಂದರ್ಭದಲ್ಲಿ ಪ್ರಸಿದ್ಧ ತಂಡದಿಂದ ಭಜನೆ ಜರಗಲಿದ್ದು, ಸಂಜೆ ನಿತ್ಯಬಲಿ, ರಂಗಪೂಜೆಯ ಬಲಿ, ರಂಗಪೂಜೆ ಸೇವೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next