Advertisement

Malpe: ವಡಭಾಂಡೇಶ್ವರ ಬಲರಾಮ ದೇಗುಲ: ಅಷ್ಟಬಂಧ ಬ್ರಹ್ಮಕಲಶೋತ್ಸವ

11:14 AM Mar 26, 2024 | Team Udayavani |

ಮಲ್ಪೆ: ನೂರಾರು ವರ್ಷಗಳ ಇತಿಹಾಸವನ್ನು ಹೊಂದಿರುವ ವಡಭಾಂಡೇಶ್ವರ ಸಮುದ್ರ ತಟದಲ್ಲಿ ವಿರಾಜಮಾನರಾಗಿರುವ ಶ್ರೀ ವಡಭಾಂಡ ಬಲರಾಮ ದೇವಸ್ಥಾನದ ವೈಭವನದ ಬ್ರಹ್ಮಕಲಶೋತ್ಸವವು ವಡಭಾಂಡೇಶ್ವರಕ್ಕೆ ಸಾಕ್ಷಿಯಾಗಿದೆ.

Advertisement

ಬೆಳಗ್ಗೆ 5 ಗಂಟೆಯಿಂದ ವಿವಿಧ ಧಾರ್ಮಿಕ ಕಾರ್ಯಗಳು ಆರಂಭಗೊಂಡು ಬೆಳಗ್ಗೆ ಸ್ಕಂದ ಬಲರಾಮರಿಗೆ ಬಹ್ಮಕಲಶಾಭಿಷೇಕ
ನೆರವೇರಿತು. ಈ ದೃಶ್ಯವನ್ನು ಸಾವಿರಾರು ಭಕ್ತರು ಕಣ್ತುಂಬಿಕೊಂಡರು. ಬಳಿಕ ನ್ಯಾಸಪೂಜೆ, ಅವಸೃತಬಲಿ ಮಹಾಪೂಜೆ,
ಪಲ್ಲಪೂಜೆ ಹೀಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಭಕ್ತರು ಸರದಿ ಸಾಲಿನಲ್ಲಿ ಬಂದು ದೇವರ ದರ್ಶನ ಮಾಡಲು ಅವಕಾಶ ಕಲ್ಪಿಸಲಾಗಿತ್ತು, ಬ್ರಹ್ಮಕಲಶೋತ್ಸವಕ್ಕೆ ಆಗಮಿಸುವ ಭಕ್ತರಿಗಾಗಿ ವಿಶೇಷ ಉಪಹಾರ ಹಾಗೂ ಊಟದ ವ್ಯವಸ್ಥೆ ಮಾಡಲಾಗಿದ್ದು, ಸುಮಾರು 15 ಸಾವಿರ ಭಕ್ತರು ದೇವರ ಪ್ರಸಾದ ಸ್ವೀಕರಿಸಿದ್ದರು. ಪಂಕ್ತಿ ಹಾಗೂ ಸ್ವಸಹಾಯ ಪದ್ಧತಿಯಲ್ಲಿ ಭೋಜನ ಸ್ವೀಕರಿಸುವ ವ್ಯವಸ್ಥೆಯನ್ನು ಮಾಡಲಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸ್ವಯಂ ಸೇವಕರಾಗಿ ಸ್ವಸಹಾಯ ಪದ್ದತಿಯ ಭೋಜನದಲ್ಲಿ ಸೇವೆ ಸಲ್ಲಿಸುತ್ತಿದ್ದರು.

ದೇವಸ್ಥಾನದ ಪ್ರಧಾನ ತಂತ್ರಿ ಬ್ರಹ್ಮಶ್ರೀ ಸುಬ್ರಹ್ಮಣ್ಯ ತಂತ್ರಿ, ಅಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷ ಶ್ರೀಶ ಭಟ್‌ ಕಡೆಕಾರ್‌, ಅಧ್ಯಕ್ಷ ನಾಗರಾಜ್‌ ಮೂಲಿಗಾರ್‌, ಪ್ರಧಾನ ಕಾರ್ಯದರ್ಶಿ ಶಶಿಧರ ಎಂ. ಅಮೀನ್‌, ಆನುವಂಶಿಕ ಮೊಕ್ತೇಸರ ಟಿ. ಶ್ರೀನಿವಾಸ ಭಟ್‌, ಪವಿತ್ರಪಾಣಿ ಶಂಕರನಾರಾಯಣ ಐತಾಳ್‌, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಸಾಧು ಸಾಲ್ಯಾನ್‌, ಗೌರವಾಧ್ಯಕ್ಷರಾದ
ಆನಂದ ಪಿ. ಸುವರ್ಣ, ಹರಿಯಪ್ಪ ಕೋಟ್ಯಾನ್‌, ಉಪಾಧ್ಯಕ್ಷ ರಮೇಶ್‌ ಕೋಟ್ಯಾನ್‌, ಪ್ರಧಾನ ಕಾರ್ಯದರ್ಶಿ ಪ್ರಕಾಶ್‌ ಜಿ. ಕೊಡವೂರು, ಕಾರ್ಯದರ್ಶಿ ಜನಾರ್ದನ ಕೊಡವೂರು, ಪ್ರಮುಖರಾದ ಭುವನೇಂದ್ರ ಕಿದಿಯೂರು, ಗೋಪಾಲ ಸಿ. ಬಂಗೇರ, ನಾಗರಾಜ್‌ ಸುವರ್ಣ, ಕಿಶೋರ್‌ ಡಿ. ಸುವರ್ಣ, ಸುಭಾಸ್‌ ಮೆಂಡನ್‌, ರಾಮಚಂದ್ರ ಕುಂದರ್‌, ಸುಧಾಕರ ಮೆಂಡನ್‌, ವಿನೋದ್‌ ಸುವರ್ಣ, ಶಶಿಕಾಂತ್‌ ಬಂಗೇರ, ಈಶ್ವರ್‌ ಜಿ. ಸಾಲ್ಯಾನ್‌, ಬಿ. ಬಿ. ಪೂಜಾರಿ, ಶಶಿಧರ್‌ ಕುಂದರ್‌, ಶರತ್‌ ಕುಮಾರ್‌, ಶೇಖರ್‌ ಜಿ. ಕೋಟ್ಯಾನ್‌, ಡಾ| ವಿಜಯೇಂದ್ರ ರಾವ್‌, ದಯಾನಂದ ಕೆ. ಸುವರ್ಣ, ಮೀನಾಕ್ಷಿ ಮಾಧವ, ದಯಕರ್‌ ವಿ. ಸುವರ್ಣ, ಜ್ಞಾನೇಶ್ವರ್‌
ಕೋಟ್ಯಾನ್‌, ಭಾಸ್ಕರ ಬಾಚನಬೈಲ್‌ , ವಿಜಯ್‌ ಕುಂದರ್‌, ಪಾಂಡುರಂಗ ಮಲ್ಪೆ, ಬಾಲಕೃಷ್ಣ ಮೆಂಡನ್‌, ವಿಕ್ರಮ ಟಿ. ಶ್ರೀಯಾನ್‌, ಧನಂಜಯ್‌ ಕಾಂಚನ್‌, ರತ್ನಾಕರ್‌ ಸಾಲ್ಯಾನ್‌, ಸತೀಶ್‌ ಕುಂದರ್‌, ಮಾದವ ಕುಂದರ್‌, ಶಿವಪ್ಪ ಕಾಂಚನ್‌, ಪ್ರಶಾಂತ್‌ ಅಮೀನ್‌, ಅಶೋಕ್‌ ಕೋಟ್ಯಾನ್‌, ಶಿವಾನಂದ್‌ ಬಿ. ಕುಂದರ್‌, ಅಭಿವೃದ್ಧಿ ಸಮಿತಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಸದಸ್ಯರು, ಭಕ್ತವೃಂದ, ಗುರಿಕಾರು, ಗ್ರಾಮಸ್ಥರು ಪಾಲ್ಗೊಂಡಿದ್ದರು.

Advertisement

ಆಶೀರ್ವಚನ: ಮಾ. 26ರಂದು ನಡೆಯುವ ಧಾರ್ಮಿಕ ಸಭೆಯಲ್ಲಿ ಶೀರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ ಪ್ರತೀಕ್ಷಾ ಮಡಿ ಬೆಂಗಳೂರು ತಂಡದಿಂದ
ಭರತನಾಟ್ಯ, ಬಳಿಕ ಅಂಬಲಪಾಡಿ ಲಕ್ಷ್ಮೀ ಜನಾರ್ದನ ಮಹಿಳಾ ಯಕ್ಷಗಾನ ಮಂಡಳಿ ಅವರಿಂದ ಮಾಯಾಪುರಿ ಮಹಾತ್ಮೆ ಯಕ್ಷಗಾನ ನಡೆಯಲಿರುವುದು.

ಧ್ವಜಾರೋಹಣ
ವಡಭಾಂಡೇಶ್ವರ ಬಲರಾಮ ದೇವಸ್ಥಾನದಲ್ಲಿ ಮಾ. 27ರಂದು ನಡೆಯಲಿರುವ ಮಹಾ ರಥೋತ್ಸವದ ಪೂರ್ವಭಾವಿಯಾಗಿ ಸೋಮವಾರ ದೇಗುಲದಲ್ಲಿ ದೇವಸ್ಥಾನದ ಪ್ರಧಾನ ತಂತ್ರಿ ಬ್ರಹ್ಮಶ್ರೀ ಸುಬ್ರಹ್ಮಣ್ಯ ತಂತ್ರಿಯವರ ನೇತೃತ್ವದಲ್ಲಿ ಧ್ವಜಾರೋಹಣ ನಡೆಯಿತು. ದೇವಸ್ಥಾನದ ಆನುವಂಶಿಕ ಮೊಕ್ತೇಸರ ಟಿ. ಶ್ರೀನಿವಾಸ್‌ ಭಟ್‌ ಅವರು ವಿವಿಧ ಧಾರ್ಮಿಕ ಪ್ರಕ್ರಿಯೆಗಳನ್ನು ನೆರವೇರಿಸಿದರು. ಅಭಿವೃದ್ಧಿ ಸಮಿತಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಸದಸ್ಯರು, ಭಕ್ತವೃಂದ, ಗುರಿಕಾರು, ಗ್ರಾಮಸ್ಥರು ಪಾಲ್ಗೊಂಡಿದ್ದರು.

ನಾಳೆ ರಥೋತ್ಸವ,ಅನ್ನಸಂತರ್ಪಣೆ
ಮಾ. 26ರಂದು ನಿತ್ಯಬಲಿ, ಮಂಟಪದಲ್ಲಿಯ ಪೂಜೆ ಮತ್ತು ತೆಂಕನಿಡಿಯೂರು ಗ್ರಾಮದಲ್ಲಿರುವ ಕಟ್ಟೆಪೂಜೆ ನಡೆಯಲಿರುವುದು.
ಮಾ. 27ರಂದು ಉತ್ಸವ ಬಲಿ, ಬೆಳಗ್ಗೆ 10.15ಕ್ಕೆ ರಥಾರೋಹಣ, ಮಧ್ಯಾಹ್ನ ಬ್ರಾಹ್ಮಣ ಸುವಾಸಿನಿ ಸಮಾರಾಧನೆ, ಅನ್ನಸಂತರ್ಪಣೆ, ರಾತ್ರಿ 7ಕ್ಕೆ ರಥೋತ್ಸವ ಆರಂಭಗೊಂಡು, ತೆಪ್ಪೋತ್ಸವ, ಪಲ್ಲಕಿ ಉತ್ಸವ ಮತ್ತು  ಓಲಗ ಮಂಟಪ ಪೂಜೆ, ರಾತ್ರಿ ಭೂತ ಬಲಿ ನಡೆಯಲಿರುವುದು.

Advertisement

Udayavani is now on Telegram. Click here to join our channel and stay updated with the latest news.

Next