Advertisement

ಯಕ್ಷಗಾನದಲ್ಲಿನ ಅತಿ ಸ್ವಾತಂತ್ರ್ಯ ಅಪಾಯಕಾರಿ,ಅಮಲು: ಜಿಎಲ್ ಹೆಗಡೆ

06:49 PM Feb 27, 2022 | Team Udayavani |

ಶಿರಸಿ: ಯಕ್ಷಗಾನದಲ್ಲಿ ಬಳಸುವ ಅತಿ ಸ್ವಾತಂತ್ರ್ಯ ಅಪಾಯಕಾರಿ ಹಾಗೂ ಅಮಲು ಎಂದು ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ಜಿ.ಎಲ್.ಹೆಗಡೆ ಆತಂಕಿಸಿದರು.

Advertisement

ಭಾನುವಾರ ನಗರದ ನಯನ ಸಭಾಂಗಣದಲ್ಲಿ ಅವರು ತಾಳಮದ್ದಲೆ ಅರ್ಥಗಾರಿಕೆ ವಿಕಸನ ವಾಟಿಕಾದ ಸೃಷ್ಟಿ ಕಲಾಪ ಹಮ್ಮಿಕೊಂಡ ಪ್ರಥಮ ವಾರ್ಷಿಕೋತ್ಸವದಲ್ಲಿ ಸಮ್ಮಾನ ಸ್ವೀಕರಿಸಿ‌ ಮಾತನಾಡಿದರು.

ಯಕ್ಷಗಾನದ ಆ ಸ್ವಾತಂತ್ರ್ಯ ಮೊದಲು ಭಾಗವತರ ಕೈಲಿತ್ತು.  ಯಕ್ಷಗಾನ ಕಲೆ‌ ಕೂಟದ ಕಲೆ. ಭಾಗವತನಿಗೂ ಮಿತಿ ಇದೆ. ಅವನ‌ ಕೈಲಿ ಸೂತ್ರವೂ ಇದೆ. ಆ ಗೌರವ ಭಾಗವತರೂ ಕಾಪಾಡಿಕೊಳ್ಳಬೇಕಿದೆ. ಭಾಗವತರು ಅಲಂಕಾರವಲ್ಲ, ಅದು ಸ್ಥಾನ ಗೌರವ. ಯಾರಿಗೂ ಅವಕಾಶ ವಂಚಿತ ಮಾಡದೇ, ಎಲ್ಲರಿಗೂ ಅವಕಾಶ ಕೊಟ್ಟು ಬೆಳೆಸಬೇಕು ಎಂದರು.

ಯಕ್ಷಗಾನ ಜಾನಪದ‌ ಕಲೆಯಲ್ಲ. ಒಂದು‌ ಲಕ್ಷಣ ಕೂಟ ಇದೆ. ಇದು ಬಿಟ್ಟರೆ ಇಲ್ಲಿ ಏಕತಾನತೆ ಇಲ್ಲ.  ಸಾರ್ವಕಾಲಿಕ ಪ್ರತ್ಯೇಕ‌ ಭವ್ಯ ಕಲೆ. ಶಾಸ್ತ್ರೀ ಯ‌ ಕಲೆ. ಆರಾಧನಾ ಕಲೆ ಎಂದ ಅವರು, ಕನ್ನಡ ಭಾಷೆವುಳಿಸುವ ಕಲೆ ಸಾವಿರಾರು‌ ಕುಟುಂಬಗಳಿಗೆ ಅನ್ನ ಕೊಡುವ‌ ಕಲೆ. ಮಾತು ಕಲಿಸುವ ಕಲೆ. ಧೈರ್ಯ ಕೊಡುತ್ತದೆ. ಜಗತ್ತಿನಲ್ಲೇ ಇಲ್ಲದ ಅಪರೂಪದ ಕಲೆ. ಇಂಥ‌ ಕಲೆ ಬೇರೆ ಇಲ್ಲ ಎಂದೂ ಹೇಳಿದರು.

ಯಕ್ಷಗಾನ ಕೇವಲ ಗಂಡು‌ ಕಲೆ. ಇದರ ಜೊತೆಗೆ ತಾಯಂದಿರ ಕೊಡುಗೆ. ಕಲಾವಿದರು ಭಾರತೀಯ ಸಂದೇಶ ನೀಡುವ, ವಿಸ್ತಾರಗೊಳಿಸುವ ಕಾರ್ಯ ಮಾಡಬೇಕು ಎಂದರು.

Advertisement

ಭಾಗವತರು‌ ಗಜಮುಖದವಗೆ‌ ಗಣಪಗೆ ಹೇಳಲೇಬೇಕು. ಅದು ಬಿಟ್ಟು ಬೇರೆ ಪದ ಹೇಳುವದೂ ಇದೆ.  ಯಕ್ಷಗಾನದ ಹಾಡು, ಹವ್ಯಕರ ಹೆಂಗಸರ ಹಾಡು ಯಕ್ಷಗಾನದಲ್ಲಿ ಶೇ.೮೦ ಇದೆ. ತಾಯಂದಿರು‌ ಮನಸ್ಸು‌ ಮಾಡಿದರೆ ಏನನ್ನೂ ಉಳಿಸಬಹುದು, ಏನನ್ನೂ ಮಾಡಬಹುದು. ಯಕ್ಷಗಾನದ ಬೆಳವಣಿಗೆಗೆ ಕಾರಣವಾಗುತ್ತದೆ ಕೂಡ ಎಂದರು.

ಪ್ರಸಿದ್ದ ಹಾಸ್ಯ ಲೇಖಕಿ ಭುವನೇಶ್ವರಿ ಹೆಗಡೆ, ಯಕ್ಷಗಾನ ಕಲೆ ಹೃದಯ ಶ್ರೀಮಂತಿಕೆ ಕೊಟ್ಟಿದೆ. ಭಾಷೆಯ ಶುದ್ದತೆ ನೀಡಿದೆ. ಯಕ್ಷಗಾನ ಅನೇಕ ಪತ್ರಕರ್ತರನ್ನು ನೀಡಿದೆ. ಇದಕ್ಕೆ ಭಾಷೆ ಕಲಿಸಿದೆ. ಆದರೆ, ಇಂದು ಯಕ್ಷಗಾನ‌ಕ್ಕೆ ಯಾವುದೆಲ್ಲ ಬರಬಾರದೋ ಅದೆಲ್ಲ ಬಂದಿದೆ ಎಂದರು.

ಕರಾವಳಿ ಶರಾವತಿಯ, ಅಘನಾಶಿನಿ, ಗಂಗಾವಳಿ ದಡದ ಯಕ್ಷಗಾನ ವೈವಿಧ್ಯ ನೋಡಿದರೆ ಅಲ್ಲಿ‌ನ ಮಣ್ಣಿನ‌ ಪರೀಕ್ಷೆ ಆಗಬೇಕು. ಅಲ್ಲಿ ಅಷ್ಟು ಯಕ್ಷಗಾನ ಕಲಾವಿದರು  ಎಂದರು.

ಯಕ್ಷಗಾನ ಕಲೆಗೆ ಅಪಾರ ಶಕ್ತಿ ಇದೆ. ಯಕ್ಷಗಾನದ ಮೂಲ ಉಳಿಸಿಕೊಂಡು ಬೆಳೆಸಬೇಕು. ನನ್ನ ಹಾಸ್ಯ ಬರಹಕ್ಕೆ ಯಕ್ಷಗಾನ ಕೂಡ ಸರಕು‌ ನೀಡಿದೆ ಎಂದರು.

ಸೃಷ್ಟಿ ಕಲಾಪದ ಅಧ್ಯಕ್ಷೆ ವಿಜಯನಳಿನಿ ರಮೇಶ ಅಧ್ಯಕ್ಷತೆವಹಿಸಿ, ಯಕ್ಷಗಾನವನ್ನು ಯಕ್ಷಗಾನವಾಗಿ‌ ನೋಡಬೇಕು. ಶುದ್ದ ಯಕ್ಷಗಾನ‌ ಪಸರಿಸಬೇಕು ಎಂದರು.

ಗುರು ವಂದನೆಯನ್ನು ಸುಬ್ರಾಯ ಹೆಗಡೆ ಕೆರೆಕೊಪ್ಪ ಸ್ವೀಕರಿಸಿದರು. ಸುಮಾ ಗಡಿಗೆಹೊಳೆ ಪ್ರಾರ್ಥಿಸಿದರು. ಮಾನಸಾ ಹೆಗಡೆ ಸ್ವಾಗತಿಸಿದರು. ಶೈಲಜಾ ಗೋರ್ನಮನೆ ಪ್ರಾಸ್ತಾವಿಕ ಮಾತನಾಡಿದರು.

ನಯನಾ ಹೆಗಡೆ, ಸಾವಿತ್ರಿ ಶಾಸ್ತ್ರಿ, ಭವಾನಿ ಭಟ್ಟ, ಗಾಯತ್ರಿ ಹೆಗಡೆ ಸನ್ಮಾನ ಪತ್ರ ವಾಚಿಸಿದರು. ರೋಹಿಣಿ ಹೆಗಡೆ ನಿರ್ವಹಿಸಿದರು. ದಾಕ್ಷಾಯಿಣಿ ಪಿಸಿ ವಂದಿಸಿದರು.

ಸೃಷ್ಟಿ‌ ಕಲಾಪದ ವಾರ್ಷಿಕೊತ್ಸವದಲ್ಲಿ ಹಳೆ ಬೇರು ಹೊಸ ಚಿಗುರು ಎಂಬಂತೆ ಯಕ್ಷಗಾನ ಅಕಾಡೆಮಿ ಅಧ್ಯಕ್ಷ  ಡಾ. ಜಿ.ಎಲ್.ಹೆಗಡೆ, ಹಾಸ್ಯ ‌ಲೇಖಕಿ ಭುವನೇಶ್ವರಿ ಹೆಗಡೆ, ಸೃಷ್ಟಿ‌ ಕಲಾಪದ ಗುರು ಸುಬ್ರಾಯ‌ ಹೆಗಡೆ‌ ಕೆರೆಕೊಪ್ಪ, ಬಾಲ ಯಕ್ಷಗಾನ ಕಲಾವಿದೆ ತುಳಸಿ ಹೆಗಡ ಅವರನ್ನು ಸಮ್ಮಾನಿಸಲಾಯಿತು.

ಮಹಿಳೆಯರು ಕೊರಗದೇ ತಮ್ಮ ಸಂತೋಷ ತಾವೇ ಹುಡುಕಿಕೊಳ್ಳಬೇಕು. ಏಕಾಂತ ಕೂಡ ಅನುಭವಿಸಬೇಕು. ಅದರಿಂದ ನೆಮ್ಮದಿ ಸಾಧ್ಯ.– ಭುವನೇಶ್ವರಿ ಹೆಗಡೆ, ಹಾಸ್ಯ‌ ಲೇಖಕಿ

Advertisement

Udayavani is now on Telegram. Click here to join our channel and stay updated with the latest news.

Next