Advertisement

ಶ್ರೀರಂಗಪಟ್ಟಣ: ಬೃಹತ್ ಆರೋಗ್ಯ ಮೇಳ, ಬೈಕ್ ರ್‍ಯಾಲಿ

08:10 PM Apr 22, 2022 | Team Udayavani |

ಶ್ರೀರಂಗಪಟ್ಟಣ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಿಂದ ಏಪ್ರಿಲ್ 25 ರ ಸೋಮವಾರ ಗಂಜಾಂ ರಸ್ತೆಯ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ನಡೆಯುವ ತಾಲ್ಲೂಕು ಮಟ್ಟದ ಆರೋಗ್ಯ ಮೇಳದ ಜಾಗೃತಿಗಾಗಿ ಬೈಕ್ ರ್‍ಯಾಲಿ ನಡೆಯಿತು.

Advertisement

ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಎನ್. ಕೆ. ವೆಂಕಟೇಶ್ ರವರು ಬೈಕ್‌ರ್ಯಾಲಿಗೆ ಚಾಲನೆ ನೀಡಿ ಮಾತನಾಡಿ, ಆರೋಗ್ಯ ಮೇಳದಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಿವಿಧ ತಜ್ಞ ವೈದ್ಯರು ಉಚಿತ ತಪಾಸಣೆ ಉಚಿತ ಚಿಕಿತ್ಸೆ ನೀಡುವರು, ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ಆಯುಷ್ಮಾನ್ ಆರೋಗ್ಯ ಕರ್ನಾಟಕ ಯೋಜನೆ ಮೂಲಕ ಮೇಲ್ಮಟ್ಟದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುವುದು. ರಾಷ್ಟೀಯ ಆರೋಗ್ಯ ಕಾರ್ಯಕ್ರಮಗಳ ವಸ್ತು ಪ್ರದರ್ಶನ ಹಾಗೂ ಜಾಗೃತಿ ಕೂಡ ನಡೆಯಲಿದೆ ಎಂದು ಅವರು ತಿಳಿಸಿದರು.

ಬೈಕ್ ರ್‍ಯಾಲಿಯು ವಿವಿ‘ ಜಾಗೃತಿ ಸಂದೇಶಗಳ ಫಲಕ ಪ್ರದರ್ಶನ ಮತ್ತು ಮೈಕಿಂಗ್ ಮೂಲಕ ಸಾರ್ವಜನಿಕ ಆಸ್ಪತ್ರೆ ಮುಖ್ಯ ರಸ್ತೆ ಪುರಸಭೆ ವೃತ್ತ ಮಿನಿವಿಧಾನಸೌಧ ವೃತ್ತ ಹಾಗೂ ಶ್ರೀ ರಂಗನಾಥಸ್ವಾಮಿ ದೇವಸ್ಥಾನವರೆಗೆ ರ್‍ಯಾಲಿ ನಡೆಯಿತು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್ .ಡಿ ಬೆನ್ನೂರ ,ತಾಲ್ಲೂಕು ಮೇಲ್ವಿಚಾರಕ ರಾದ ಜಿ. ಮೋಹನ್ ,ಮಂಗಳ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಕೆಂಪೇಗೌಡ, ಸಲೀಂ ಪಾಷಾ ,ರಾಜು ,ಜಿ.ಬಿ.ಹೇಮಣ್ಣ, ಕೃಷ್ಣೇಗೌಡ, ಚಂದನ್,ಆರೋಗ್ಯ ಇಲಾಖೆ ಸಿಬ್ಬಂದಿಗಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next