Advertisement
10.30 ಕ್ಕೆ ನಿಮಿಷಾಂಬ ದೇವಾಲಯದಿಂದ ಹೊರಟ ಸಂಕೀರ್ತನಾ ಯಾತ್ರೆ ಜಾಮಿಯಾ ಮಸೀದಿ ವೃತ್ತದ ಮೂಲಕ ಕೋಟೆ ಆಂಜನೇಯ ಸ್ವಾಮಿ ದೇವಾಲಯಕ್ಕೆ ತಲುಪಬೇಕಾಗಿದ್ದ ವೇಳೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಸಾವಿರಾರು ಸಂಖ್ಯೆಯಲ್ಲಿದ್ದ ಹನುಮ ಮಾಲಾಧಾರಿಗಳಿಂದ ಮಸೀದಿ ಬಳಿ ಜೈ ಶ್ರೀರಾಮ್ ಘೋಷವಾಕ್ಯಗಳು ಮೊಳಗಿದ್ದು,ಮಸೀದಿ ಸುತ್ತ ಹಾಕಲಾಗಿದ್ದ ಬ್ಯಾರಿಕೇಡ್ ಮುರಿದು ಒಳಹೋಗಲು ಯತ್ನಿಸಲಾಗಿದೆ.
ಸಂಕೀರ್ತನಾ ಯಾತ್ರೆ ಜಾಮಿಯಾ ಮಸೀದಿ ಎದುರು ಬರುತ್ತಿದ್ದಂತೆ ‘ಅಲ್ಲಿ ರಾಮ ಮಂದಿರ, ಇಲ್ಲಿ ಹನುಮ ಮಂದಿರ’ ಎಂಬ ಘೋಷಣೆಗಳು ಮೊಳಗಿದವು. ಹನುಮನ ಪಾದದ ಮೇಲಾಣೆ ಮಂದಿರವಿಲ್ಲೆ ಕಟ್ಟುವೇವು ಎಂದು ಹನುಮ ಮಾಲಾಧಾರಿಗಳು ಕೂಗಿದರು. ಸ್ಥಳದಲ್ಲಿದ್ದ ಭಾರಿ ಸಂಖ್ಯೆಯ ಪೊಲೀಸರು ಹಿಂದೂ ಕಾರ್ಯಕರ್ತರನ್ನ ಒಳ ನುಗ್ಗದಂತೆ ತಡೆದರು. ಹನುಮ ಮಾಲಾಧಾರಿಗಳು ಹಾಗೂ ಪೊಲೀಸರ ನಡುವೆ ತಳ್ಳಾಟ ನೂಕಾಟ ನಡೆದಿದೆ. ಬ್ಯಾರಿಕೇಡ್ ಗಳ ಬಳಿಯೇ ಕುಳಿತ ಮಾಲಾಧಾರಿಗಳು ಮಂದಿರವಿಲ್ಲೇ ಕಟ್ಟುವೆವು ಎಂದು ಘೋಷಣೆಗಳನ್ನು ಮೊಳಗಿಸಿದರು.
Related Articles
Advertisement
ವಿವಾದಿತ ಪ್ರದೇಶಕ್ಕೆ ಮಂಡ್ಯ ಎಸ್ ಪಿ ಎನ್. ಯತೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.