ಶ್ರೀರಂಗಪಟ್ಟಣ: ಈ ಬಾರಿಯ ಶ್ರೀರಂಗಪಟ್ಟಣ ದಸರಾ ಕಾರ್ಯಕ್ರಮ ಉದ್ಘಾಟನೆಗೆ ಇಸ್ರೋದ ನಿರ್ದೇಶಕರಾಗಿದ್ದ ಕನ್ನಡಿಗ ವಿಜ್ಞಾನಿ ಸಿ.ಎನ್.ಆರ್.ರಾವ್ ಇಲ್ಲವೆ ಸಿ.ಎಫ್ ಟಿ.ಆರ್.ಐ.ವಿಜ್ಞಾನಿಯನ್ನು ಕರೆಸಲು ಚಿಂತನೆ ನಡೆದಿದೆ ಎಂದು ಶ್ರೀರಂಗಪಟ್ಟಣದ ಶಾಸಕ ರವೀಂದ್ರ ಶ್ರೀಕಂಠಯ್ಯ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ರವೀಂದ್ರ ಶ್ರೀಕಂಠಯ್ಯ, ಇಂದು ಶ್ರೀರಂಗಪಟ್ಟಣ ದಸರಾ ಆಚರಣೆ ಸಂಬಂಧ ತಾಲೂಕಿನ ಎಲ್ಲಾ ಜನ ಪ್ರತಿನಿಧಿಗಳು,ಸಂಘ ಸಂಸ್ಥೆ,ಸೇರಿದಂತೆ ಅಧಿಕಾರಿಗಳ ಜೊತೆ ಸಭೆ ನಡೆಸಿ ಸಲಹೆ ಪಡೆದು ಒಮ್ಮತದ ತೀರ್ಮಾನ ಕೈಗೊಳ್ಳುತ್ತೇವೆ.
ಸಚಿವ ನಾರಾಯಣ ಗೌಡ ಅವರು ತಮ್ಮನ್ನು ಬಿಟ್ಟು ದಸರೆ ಸಂಬಂಧ ಪೂರ್ವ ಭಾವಿ ಸಭೆ ನಡೆಸಿದ್ದಕ್ಕೆ ರವೀಂದ್ರ ಶ್ರೀಕಂಠಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಅ.9ರಿಂದ 11ರವರೆಗೆ ಶ್ರೀರಂಗಪಟ್ಟಣ ದಸರಾ ಮಹೋತ್ಸವ ನಡೆಯಲಿದ್ದು, ಕಳೆದ ಬಾರಿ ಕೊರೊನ ಹಿನ್ನಲೆಯಲ್ಲಿ ಒಂದೇ ದಿನ ಯಾಚನೆ ಮಾಡಲಾಗಿತ್ತು.
ಮೈಸೂರು ದಸರಾದ ಮೂಲ ಶ್ರೀರಂಗ ಪಟ್ಟಣವಾಗಿದ್ದು ಅ.9ರಿಂದ 11ರವರೆಗೆ ದಸರಾ ಆಚರಿಸಲಾಗುತ್ತಿದ್ದು,ಮೆರವಣಿಗೆ ನಡೆಸಿ ನಾಡ ದೇವತೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಅಕ್ಟೋಬರ್ 9 ರಂದು ಆನೆಗಳ ಮೂಲಕ ಜಂಬೂ ಸವಾರಿಯೂ ನಡೆಸಲು ತೀರ್ಮಾನಿಸಲಾಗಿದೆ.