ಮಂಡ್ಯ: ಕೋಟೆ ಕೊತ್ತಲುಗಳ ನಾಡು, ಶ್ರೀರಂಗನ ನೆಲೆ ಬೀಡಾಗಿರುವ ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ಈ ಬಾರಿ ತ್ರಿಕೋನ ಸ್ಫರ್ಧೆ ಏರ್ಪಡುವ ಸಾಧ್ಯತೆ ಹೆಚ್ಚಾಗಿದೆ. ಇದುವರೆಗೂ ಅರೆಕೆರೆ ಕುಟುಂಬಗಳ ನಡುವೆಯೇ ನಡೆಯುತ್ತಿದ್ದ ಜಿದ್ದಾಜಿದ್ದಿನಲ್ಲಿ ಬಿಜೆಪಿಯೂ ಪೈಪೋಟಿಗೆ ಸಜ್ಜಾಗುತ್ತಿದೆ.
ಸಾಂಪ್ರದಾಯಿಕ ಎದುರಾಳಿಗಳಾದ ಜೆಡಿಎಸ್, ಕಾಂಗ್ರೆಸ್ ನಡುವೆಯೇ ಪೈಪೋಟಿ ನಡೆಯುತ್ತದೆ. ಈಗಾಗಲೇ ಜೆಡಿಎಸ್‌ನಿಂದ ಹಾಲಿ ಶಾಸಕ ರವೀಂದ್ರಶ್ರೀಕಂಠಯ್ಯ, ಕಾಂಗ್ರೆಸ್‌ನಿಂದ ಮಾಜಿ ಶಾಸಕ ರಮೇಶ್‌ಬಂಡಿಸಿ ದ್ದೇಗೌಡ ಸ್ಫರ್ಧಿಸುವುದು ಬಹು ತೇಕ ಖಚಿತವಾಗಿದೆ. ಈ ನಡುವೆ ಈ ಬಾರಿ ಬಿಜೆಪಿಯಿಂದ ರೈತ ನಾಯಕ ಕೆ.ಎಸ್. ನಂಜುಂಡೇಗೌಡ ಬದ ಲಾಗಿ ಯುವ ಮುಖಂಡ ಇಂಡುವಾ ಳು ಸಚ್ಚಿದಾನಂದ ಕಣಕ್ಕಿಳಿಯಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿವೆ. ಜತೆಗೆ ಕೊತ್ತತ್ತಿ ವೃತ್ತದ ಪ್ರಭಾವಿ ಜೆಡಿಎಸ್ ಮುಖಂಡ ತಗ್ಗಹಳ್ಳಿ ವೆಂಕಟೇಶ್ ಕೂಡ ನಾನು ರೇಸ್‌ನಲ್ಲಿದ್ದು, ಜೆಡಿಎಸ್ ಟಿಕೆಟ್ ನೀಡುವಂತೆ ಒತ್ತಡ ಹಾಕುತ್ತಿದ್ದಾರೆ.
ತಗ್ಗಹಳ್ಳಿವೆಂಕಟೇಶ್ ನಡೆ ನಿಗೂಢ : ಇನ್ನು ಕೊತ್ತತ್ತಿ ಭಾಗದ ಪ್ರಭಾವಿ ಜೆಡಿಎಸ್ ಮುಖಂಡ, ಜೆಡಿಎಸ್ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್ ನಡೆ ಯಾವ ಕಡೆಗೆ ಎಂಬ ಪ್ರಶ್ನೆ ಎದ್ದಿದೆ. ಜೆಡಿಎಸ್‌ನಿಂದ ದೂರ ಉಳಿದಿರುವ ಇವರು, ತಾನೂ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದು, ಹಾಲಿ ಶಾಸಕ ರವೀಂದ್ರಶ್ರೀಕಂಠಯ್ಯಗೆ ಸಂಸತ್ ಟಿಕೆಟ್ ನೀಡಿ, ನನಗೆ ಶ್ರೀರಂಗಪಟ್ಟಣ ಕ್ಷೇತ್ರದಿಂದ ಸ್ಫರ್ಧಿಸಲು ಅವಕಾಶ ಕೊಡುವಂತೆ ಒತ್ತಾಯಿಸಿದ್ದಾರೆ. ಈಗಾಗಲೇ ಬಿಜೆಪಿ, ಕಾಂಗ್ರೆಸ್ ಹಾಗೂ ರೈತಸಂಘದಿಂದಲೂ ಪಕ್ಷಕ್ಕೆ ಬರುವಂತೆ ಆಹ್ವಾನವಿದ್ದರೂ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಒಂದು ವೇಳೆ ಪಕ್ಷ ಟಿಕೆಟ್ ನೀಡದಿದ್ದರೆ, ಕಾರ್ಯಕರ್ತರು, ಮುಖಂಡರ ಜತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದಿದ್ದಾರೆ. ಒಂದು ವೇಳೆ ಪಕ್ಷದಿಂದ ಕಾಲ್ಕಿತ್ತರೆ, ಜೆಡಿಎಸ್ ಮೇಲೆ ಸಾಕಷ್ಟು ಪರಿಣಾಮ ಬೀರಲಿದೆ ಎಂಬ ಚರ್ಚೆ ನಡೆಯುತ್ತಿವೆ. ಜೆ
ಡಿಎಸ್‌ನಲ್ಲಿ ಸ್ಫರ್ಧಿಗಳಿಗೆ ಬಂಡಾಯದ ಭೀತಿ: ಜೆಡಿಎಸ್ ಅಭ್ಯರ್ಥಿಯಾಗಿ ಹಾಲಿ ಶಾಸಕ ರವೀಂದ್ರಶ್ರೀಕಂಠಯ್ಯ ಸ್ಫರ್ಧಿಸುವುದು ಖಚಿತವಾಗಿದೆ. ಆದರೆ, ಕೊತ್ತತ್ತಿ ಭಾಗದಲ್ಲಿ ತನ್ನದೇ ಆದ ಪ್ರಭಾವ ಬೆಳೆಸಿಕೊಂಡಿರುವ ತಗ್ಗಹಳ್ಳಿ ವೆಂಕಟೇಶ್ ತಮಗೂ ಟಿಕೆಟ್ ನೀಡುವಂತೆ ಒತ್ತಡ ಹಾಕುತ್ತಿ ದ್ದಾರೆ. ಈಗಾಗಲೇ ಮುಖಂಡರು, ನಾಯಕರ ನಿರ್ಲಕ್ಷ್ಯದಿಂದ ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿರುವ ವೆಂಕಟೇಶ್‌ರಿಗೆ ಬಿಜೆಪಿ, ಕಾಂಗ್ರೆಸ್ ಹಾಗೂ ರೈತಸಂಘ ದಿಂದಲೂ ಬುಲಾವ್ ಬಂದಿದೆ. ಒಂದು ವೇಳೆ ಪಕ್ಷೇತರ ಅಥವಾ ಬೇರೆ ಪಕ್ಷ ಸೇರ್ಪಡೆಗೊಂಡರೆ ಕೊತ್ತತ್ತಿ ಭಾಗದಲ್ಲಿ ಜೆಡಿಎಸ್ ಪ್ರಭಾವ ಕುಸಿಯುವ ಭೀತಿ ಎದುರಾಗಿದೆ.
ಇದು ನೇರವಾಗಿ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರ ಸ್ಫರ್ಧೆಯ ಮೇಲೆ ಪರಿಣಾಮ ಬೀರಲಿದೆ ಎಂಬ ಚರ್ಚೆ ನಡೆಯುತ್ತಿವೆ. ಆದರೆ, ಶಾಸಕ ರವೀಂದ್ರಶ್ರೀಕಂಠಯ್ಯ ಪಕ್ಷೇತರ ಅಭ್ಯರ್ಥಿ ಯಾಗಿ ಸ್ಫರ್ಧಿಸಿದ್ದ ಸಂದರ್ಭದಲ್ಲೂ ತನ್ನ ವರ್ಚಸ್ಸು ಪ್ರದರ್ಶನ ಮಾಡಿದ್ದರು. ಕೊರೊನಾ ಸಂದರ್ಭದಲ್ಲಿ ಜನರ ನೆರವಿಗೆ ನಿಂತಿದ್ದಾರೆ. ಆದರೆ, ಪ್ರಸ್ತುತ ಕೆಲವು ಮುಖಂಡರು ತಗ್ಗಹಳ್ಳಿ ವೆಂಕಟೇಶ್ ಪರ ನಿಂತಿದ್ದಾರೆ. ಹಾಲಿ ಶಾಸಕ ರವೀಂದ್ರಶ್ರೀಕಂಠಯ್ಯ ಕ್ಷೇತ್ರದಲ್ಲಿ ಕಾರ್ಯ ಕರ್ತರಿಗೆ ಸ್ಪಂದಿಸುತ್ತಿಲ್ಲ. ಮುಖಂಡರ ಫೋನ್ ತೆಗೆಯುವುದಿಲ್ಲ ಎಂಬ ಆರೋಪ ಕೇಳಿ ಬರುತ್ತಿವೆ. ಆದರೆ, ಚುನಾವಣೆ ಹತ್ತಿರವಾಗುತ್ತಿದ್ದಂತೆ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಮುಂದಾಗಿದ್ದಾರೆ.
ಕಮಲ ಅರಳಿಸಲು ಸಚ್ಚಿದಾನಂದ ಸಿದ್ಧ: ಸಮಾಜ ಸೇವಕರಾಗಿ ಗುರುತಿಸಿಕೊಂಡಿರುವ ಇಂಡುವಾಳು ಸಚ್ಚಿದಾನಂದ ಅವರು, ಸಂಸದೆ ಸುಮಲತಾಅಂಬರೀಷ್‌ರ ಆಪ್ತರಾಗಿದ್ದು, ಈ ಬಾರಿ ಬಿಜೆಪಿಯಿಂದ ಸ್ಫರ್ಧಿಸಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿವೆ. ಸೋಮವಾರ ಕಾಂಗ್ರೆಸ್ ಬಿಟ್ಟು ಕಮಲ ಮುಡಿಯಲಿರುವ ಸಚ್ಚಿದಾನಂದ ಬಿಜೆಪಿಯಲ್ಲಿ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡ ನಂತರ ಬಿಜೆಪಿಯಲ್ಲಿ ಸಕ್ರಿಯರಾಗಿ ದ್ದಾರೆ. ಅಲ್ಲದೆ, ಕೊರೊನಾ ಸಂದರ್ಭ ಹಾಗೂ ಮಳೆಯಿಂದ ಅತಿವೃಷ್ಟಿ ಉಂಟಾದಾಗ ಸಂಕಷ್ಟದಲ್ಲಿದ್ದ ಕ್ಷೇತ್ರದ ಜನರಿಗೆ ನೆರವಾಗಿದ್ದಾರೆ. ಶಂಕರೇಗೌಡ ಚಾರಿಟಬಲ್ ಟ್ರಸ್ಟ್ ಮೂಲಕ ಕ್ಷೇತ್ರದ ಜನತೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಕೊತ್ತತ್ತಿ ಭಾಗದಲ್ಲಿ ತನ್ನ ಪ್ರಭಾವ ಬೆಳೆಸಿಕೊಂಡಿರುವ ಅವರು, ಚುನಾವಣೆ ಯಲ್ಲಿ ಸ್ಫರ್ಧಿಸಿದರೆ, ಕಾಂಗ್ರೆಸ್ ಹಾಗೂ ಜೆಡಿಎಸ್ ಮತ ಸೆಳೆಯುವ ಸಾಮರ್ಥ್ಯ ಹೊಂದಿದ್ದಾರೆ.
ಕಾಂಗ್ರೆಸ್‌ನಿಂದ ರಮೇಶ್ ಸ್ಫರ್ಧೆ: ಕಾಂಗ್ರೆಸ್‌ನ ಟಿಕೆಟ್‌ಗಾಗಿ ಮೂವರು ಅರ್ಜಿ ಸಲ್ಲಿಸಿದ್ದಾರೆ. ಆದರೆ, ರಮೇಶ್ ಬಂಡಿಸಿದ್ದೇಗೌಡರು ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಇನ್ನುಳಿದಂತೆ ವಕೀಲ ಪುಟ್ಟೇಗೌಡ, ಹಿರಿಯ ಕಾಂಗ್ರೆಸ್ ಮುಖಂಡ ಪಾಲಹಳ್ಳಿ ಚಂದ್ರಶೇಖರ್ ಟಿಕೆಟ್‌ಗಾಗಿ ಪೈಪೋಟಿ ನಡೆಸುತ್ತಿದ್ದಾರೆ. ಆದರೆ, ರಮೇಶ್ ಬಂಡಿಸಿದ್ದೇಗೌಡರು ಕಳೆದ ಬಾರಿ ಸೋತಿರುವ ಅನುಕಂಪವೂ ಇದೆ. ಜತೆಗೆ ಸರಳ ವ್ಯಕ್ತಿತ್ವ, ಜನರಿಗೆ ಸುಲಭವಾಗಿ ಸಿಗುತ್ತಾರೆ ಎಂಬ ಅಭಿಪ್ರಾಯ ಒಂದೆಡೆಯಾದರೆ ಅವರ ಅವಧಿ ಯಲ್ಲಿ ಕ್ಷೇತ್ರ ಅಭಿವೃದ್ಧಿಯಾಗಿಲ್ಲ ಎಂಬ ಆರೋಪವೂ ಇದೆ.