ಶ್ರೀರಂಗಪಟ್ಟಣ: ಲೋಕಸಭಾ ಚುನಾವಣೆ ಕಾವು ಮುಗಿದು ಪಕ್ಷೇತರ ಅಭ್ಯರ್ಥಿ ಮಂಡ್ಯದಲ್ಲಿ ಆಯ್ಕೆ ಬಳಿಕ ಹಾಲಿ-ಮಾಜಿ ಶಾಸಕರಿಗೆ ಶ್ರೀರಂಗಪಟ್ಟಣ ಪುರಸಭೆ ಪ್ರತಿಷ್ಠೆಯ ಕಣವಾಗಿದೆ.
ಪುರಸಭೆ ಅಧಿಕಾರ ಮತ್ತೂಂದು ಸವಾಲು: ಲೋಕಸಭೆಯ ಚುನಾವಣೆ ಬಳಿಕ ಹಾಲಿ ಮಾಜಿ ಶಾಸಕರಿಗೆ ಪುರಸಭೆ ಚುನಾವಣೆ ಮತ್ತೂಂದು ಸವಾಲು ಎದುರಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರಿಗೆ ಪ್ರತಿಷ್ಠೆಯಾಗಿ ಮತ್ತೆ ರಾಜಕೀಯ ಚುಟುವಟಿಕೆಗಳು ಪಟ್ಟಣದಲ್ಲಿ ಬಿರುಸುಗೊಂಡಿದೆ. ರಾಜ್ಯದಲ್ಲಿ ದೋಸ್ತಿ ಸರ್ಕಾರ ನಡೆಸಿ ಲೋಕಲ್ ಚುನಾವಣೆಯಲ್ಲಿ ರಿಯಲ್ ಫೈಟ್ ಮಾಡಲಿದ್ದು ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರಿಗೆ ಬಿಸಿ ತುಪ್ಪ ನುಂಗಲಾರದಂತಿದೆ. ಏನೇ ಆದರೂ ನೇರವಾಗಿ ಜೆಡಿಎಸ್-ಕಾಂಗ್ರೆಸ್ ಎದುರಾಳಿಗಳಾಗಿ ಗೆಲ್ಲಲೇಬೇಕು ಎನ್ನುವ ಹುಮ್ಮಸ್ಸಿನಿಂದ ಕೆಲಸ ಮಾಡುತ್ತಿದ್ದಾರೆ.
ಶ್ರೀರಂಗಪಟ್ಟಣ ಪುರಸಭೆ ಚುನಾವಣೆ ಮೇ 29ರಂದು ಚುನಾವಣೆ ನಡೆಯಲಿದ್ದು ಹಣದ ಹೊಳೆಯನ್ನೇ ಹರಿಸಿ ಈ ಚುನಾವಣೆ ಗೆಲ್ಲಬೇಕೆನ್ನುವ ತಂತ್ರ ರೂಪಿಸಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರ ಅಸ್ತಿತ್ವದಲ್ಲಿದ್ದರೂ ದೋಸ್ತಿ ಪಕ್ಷಗಳ ಮುಖಂಡರ ನಡುವೆ ಪುರಸಭಾ ಚುನಾವಣೆಯಲ್ಲಿ ಫ್ರೆಂಡ್ಲಿ ಪೈಟ್ ಅಲ್ಲದಿದ್ದರೂ ರಿಯಲ್ ಪೈಟ್ ಮಾಡುತ್ತಿದ್ದಾರೆ. ಹಾಲಿ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಹಾಗೂ ಕಾಂಗ್ರೆಸ್‌ನ ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡರಿಗೆ ಈ ಸ್ಥಳೀಯ ಚುನಾವಣೆ ಅಸ್ತಿತ್ವದ ಪ್ರತಿಷ್ಠೆಯಾಗಿದೆ.
ನೇರ ಸೆಣಸಾಟ: ಈ ಭಾರಿಯ ಪುರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ, ಉಪಾಧ್ಯಕ್ಷ ಸ್ಥಾನ ಬಿಸಿಎಂ ‘ಬಿ’ ಗೆ ಮೀಸಲಿರುವುದರಿಂದ ಈ ಬಾರಿಯ ಪುರಸಭೆ ಚುನಾವಣೆ ಕಾಂಗ್ರೆಸ್ ಹಾಗೂ ಜೆಡಿಎಸ್ ನೇರಾನೇರ ಸೆಣಸುತ್ತಿವೆ. ಪುರಸಭೆ ಚುನಾವಣೆಯಲ್ಲಿ 23 ವಾರ್ಡ್‌ಗಳಲ್ಲಿಯೂ ತಮ್ಮ ್ಮ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಬೇಕು. ಶತಾಯ, ಗತಾಯ ಪುರಸಭೆ ಆಡಳಿತ ಚುಕ್ಕಾಣಿ ಹಿಡಿಯಲೇಬೇಕು ಎಂದು ತಮ್ಮ ಅಭ್ಯರ್ಥಿಗಳ ಪರ ಹಾಲಿ-ಮಾಜಿ ಶಾಸಕರು ಪ್ರಚಾಕ್ಕಿಳಿದಿದ್ದಾರೆ.
Advertisement
ಶ್ರೀರಂಗಪಟ್ಟಣ ಪುರಸಭೆ ವ್ಯಾಪ್ತಿಯಲ್ಲಿ 23 ವಾರ್ಡ್‌ಗಳಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್ 23 ವಾರ್ಡ್‌ಗಳಲ್ಲಿ ಅಭ್ಯರ್ಥಿಗಳನ್ನು ಸ್ಪರ್ಧೆಗಿಳಿಸಿದ್ದಾರೆ. ಬಿಜೆಪಿ ಮಾತ್ರ 13 ವಾರ್ಡ್‌ಗಳಲ್ಲಿ ಅಭ್ಯರ್ಥಿಗಳನ್ನು ಹಾಕಿದ್ದರೂ ಈ ಬಾರಿ ಪುರಸಭೆ ಚುನಾವಣೆಯಲ್ಲಿ ಯಾವುದೇ ಪರಣಾಮಗಳು ಬೀರುವಂತಹ ಲಕ್ಷಣಗಳು ಬಿಜೆಪಿಯಿಂದ ಕಂಡು ಬಂದಿಲ್ಲ. 13 ವಾರ್ಡ್‌ಗಳಲ್ಲಿರುವ ಅಭ್ಯರ್ಥಿಗಳ ಪೈಕಿ ಎರಡರಲ್ಲಿ ಮಾತ್ರ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಅದರಲ್ಲಿ 2 ವಾರ್ಡ್‌ಗಳಲ್ಲಿ ಮಾತ್ರ ಬಿಜೆಪಿಗೆ ಗೆಲ್ಲುವ ಅವಕಾಶವಿದೆ. ಪಕ್ಷೇತರರು ಅಷ್ಟೇ ಹುಮ್ಮಸ್ಸಿನಿಂದ ಪ್ರಚಾರ ನಡೆಸುತ್ತಿದ್ದಾರೆ. 2-3 ವಾರ್ಡ್‌ಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಗೆಲ್ಲಲು ಅವಕಾಶವಿದೆ.
Related Articles
Advertisement
ಶ್ರೀರಂಗಪಟ್ಟಣ ಪುರಸಭೆ ಚುನಾವಣೆಯಲ್ಲಿ ಒಟ್ಟು 23 ಸ್ಥಾನಗಳಲ್ಲಿ ಕಾಂಗ್ರೆಸ್ 7, ಜೆಡಿಎಸ್ 6, ಬಿಜೆಪಿ 3, ಪಕ್ಷೇತರ 6 ಹಾಗೂ ಬಿಎಸ್‌ಆರ್ ಕಾಂಗ್ರೆಸ್ 1 ಸ್ಥಾನ ಪಡೆದುಕೊಂಡಿತ್ತು. ಇದೀಗ ಮೇ 29ಕ್ಕೆ ಚುನಾವಣೆ ನಡೆದು ಮೇ 31ಕ್ಕೆ ಚುನಾವಣೆ ಫಲಿತಾಂಶ ಹೊರಬೀಳಲಿದೆ. ಶ್ರೀರಂಗಪಟ್ಟಣ ಪುರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಗಾದಿಗೆ ಯಾವ ಪಕ್ಷ ಅಧಿಕಾರಿ ಹಿಡಿಯಲಿದೆ ಎಂದು ಕಾದು ನೋಡಬೇಕಿದೆ.
ಪದ್ಮಮ್ಮ 5ನೇ ಬಾರಿ ಸ್ಪರ್ಧೆ:
ಕಳೆದ 20 ವರ್ಷದಿಂದಲೂ ಪಕ್ಷೇತರ ಅಭ್ಯರ್ಥಿಯಾಗಿ 4 ಬಾರಿ ಪದ್ಮಮ್ಮ ವಿಜೇತರಾಗಿ, 2019ರ ಚುನಾವಣೆಯಲ್ಲಿ 5ನೇ ಬಾರಿ 19ನೇ ವಾರ್ಡ್‌ನಿಂದ ಪಕ್ಷೇತರವಾಗಿ ಸ್ಪರ್ಧೆ ಮಾಡಿದ್ದಾರೆ. ಇದೇ ವಾರ್ಡ್‌ನಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳು ಪೈಪೋಟಿಗಿಳಿದಿದ್ದಾರೆ.
ಶಾಸಕರ ಬೆಂಬಲಿಗರ ಪೈಪೋಟಿ
14ನೇ ವಾರ್ಡ್‌ನಲ್ಲಿ ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡರ ಬಲಗೈ ಬಂಟ ಎಂ.ಎಲ್.ದಿನೇಶ್ ಮೂರನೇ ಬಾರಿ ಸಾಮಾನ್ಯ ವರ್ಗದಲ್ಲಿ ಸ್ಪರ್ಧಿಸಿದ್ದು ಇವರ ವಿರುದ್ದ ಜೆಡಿಎಸ್ ನಿಂದ ನಳಿನಮ್ಮ ಎರಡನೇ ಬಾರಿ ಸಾಮಾನ್ಯ ವರ್ಗಕ್ಕೆ ಪೈಪೋಟಿಗೆ ನೀಡಿದ್ದಾರೆ. ಈ ಬಾರಿ ಜೆಡಿಎಸ್ ಹಾಗೂ ಕಾಂಗ್ರೆಸ್ ನೇರ ಹಣಾಹಣಿಗೆ ಸಿದ್ದವಾಗಿವೆ.