Advertisement

Gangavathi; ಆನೆಗುಂದಿ ರಾಜವಂಶಸ್ಥ, ಮಾಜಿ ಸಚಿವ ಶ್ರೀರಂಗದೇವರಾಯಲು ನಿಧನ

06:12 PM Aug 22, 2023 | Team Udayavani |

ಗಂಗಾವತಿ: ಆನೆಗುಂದಿ ರಾಜವಂಶಸ್ಥರು ಮತ್ತು ಮಾಜಿ ಸಚಿವ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಶ್ರೀರಂಗದೇವರಾಯಲು (87)ವಯೋ ಸಹಜವಾಗಿ ಮಂಗಳವಾರ  ನಿಧನರಾಗಿದ್ದಾರೆ.

Advertisement

ಮೃತರು ಪತ್ನಿ ಶ್ರೀಮತಿ ಲಲಿತಾರಾಣಿ ಶ್ರೀರಂಗದೇವರಾಯಲು ಇಬ್ಬರು ಪುತ್ರರು ಓರ್ವ ಪುತ್ರಿಯನ್ನು ಮತ್ತು ಅಪಾರ ಅಭಿಮಾನಿಗಳನ್ನು ಆಗಲಿದ್ದಾರೆ .ಮೃತರ ಅಂತ್ಯಕ್ರಿಯೆ ಆನೆಗೊಂದಿಯಲ್ಲಿ ಆ.23 ರಂದು ಬುಧವಾರ ಮಧ್ಯಾಹ್ನ ಸಂಪ್ರದಾಯದಂತೆ ನೆರವೇರಲಿದೆ ಎಂದು ಕುಟುಂಬ ವರ್ಗದವರು ತಿಳಿಸಿದ್ದಾರೆ.

ಶ್ರೀರಂಗದೇವರಾಯಲು ಎರಡು ಬಾರಿ ಕನಕಗಿರಿ ಕ್ಷೇತ್ರದಿಂದ ಮತ್ತು ಗಂಗಾವತಿ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು ವೀರಪ್ಪ ಮೊಯ್ಲಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಕಾಡ ಮತ್ತು ಅಚ್ಚುಕಟ್ಟು ಪ್ರದೇಶದ ಸಚಿವರಾಗಿ ಮತ್ತು ಅಖಂಡ ರಾಯಚೂರು ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ರಾಜ್ಯ ಖಾದಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಹಲವಾರು ಕಾರ್ಯ ಯೋಜನೆಗಳನ್ನು ಅನುಷ್ಠಾನ ಮಾಡಿದ್ದರು.

ಸಂತಾಪ: ಮಾಜಿ ಸಚಿವ ಶ್ರೀರಂಗದೇವರಾಯಲು ಅವರ ನಿಧನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ, ಸಂಸದರಾದ ಕರಡಿ ಸಂಗಣ್ಣ ,ಶಾಸಕರಾದ ಗಾಲಿ ಜನಾರ್ಧನ್ ರೆಡ್ಡಿ, ಕೆ.ರಾಘವೇಂದ್ರ ಹಿಟ್ನಾಳ, ಮಾಜಿ ಸಚಿವರಾದ ಇಕ್ಬಾಲ್ ಅನ್ಸಾರಿ ,ಎಂ .ಮಲ್ಲಿಕಾರ್ಜುನ್ ನಾಗಪ್ಪ, ಸಾಲೋಣಿ ನಾಗಪ್ಪ, ಮಾಜಿ ಶಾಸಕ ಪರಣ್ಣ ಮನುವಳ್ಳಿ , ಎಚ್.ಎಸ್.ಮುರಳೀಧರ,ಮಾಜಿ ಎಂಎಲ್ಸಿ ಎಚ್ .ಆರ್. ಶ್ರೀನಾಥ್ ಹಾಗೂ ಕಾಂಗ್ರೆಸ್ ಮುಖಂಡರು, ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next