Advertisement

ಚಿತ್ರ ವಿಮರ್ಶೆ: ‘ಶ್ರೀರಂಗ’ನ ಮದುವೆ ಪ್ರಸಂಗ

12:23 PM Jul 23, 2022 | Team Udayavani |

ಕಾಲಕ್ಕೆ ತಕ್ಕಂತೆ ಬದಲಾಗಬೇಕೆಂಬುದು ನಾಯಕನ ತಾಯಿಯ ಪಾಲಿಸಿ. ಆದರೆ ನಾಯಕ ಶ್ರೀರಂಗ ಸಾಫ್ಟ್ವೇರ್‌ ಉದ್ಯೋಗಿ. ಆದರೆ ಆತನಿಗೆ ಬೇಸಿಕ್‌ ಸೆಟ್‌ ಮೊಬೈಲ್‌ ಬಳಸುವುದೇ ಹಿತ. ಹೀಗಾಗಿ ಸಾಮಾಜಿಕ ಜಾಲತಾಣಗಳಿಂದ ದೂರ ಬಲು ದೂರ! ಬಿಡುವಿದ್ದಾಗ ಓದಲು ಪುಸ್ತಕ, ಪರಿಚಯ ಆದವರಿಗೆ ಮುಟ್ಟಿದ್ರೆ ಮುನಿ ಗಿಡ ಉಡುಗೊರೆ ಯಾಗಿ ನೀಡುವುದು ನಾಯಕನ ಹವ್ಯಾಸ. ಇಂತಹ ವ್ಯಕ್ತಿತ್ವದ ನಾಯಕನಿಗೆ ವಧುವಿನ ಹುಡುಕಾಟ ಶುರುವಾಗುತ್ತದೆ. ಈಗಿನ ಕಾಲ ಹುಡುಗಿಯರಿಗೆ ಹ್ಯಾಂಡ್‌ಸಮ್‌ ಹುಡುಗ, ಅಪ್‌ಡೇಟೆಡ್‌ ವರನನ್ನೇ ಕನಸು- ಮನಸಿ ನಲ್ಲೂ ತುಂಬಿಕೊಂಡಿರುತ್ತಾರೆ. ಆದರೆ ಶ್ರೀರಂಗ ಮಾತ್ರ ತಾನು ಹಾಕಿಕೊಂಡಿರುವ ಗೆರೆ ದಾಟಿ ಒಂದು ಹೆಜ್ಜೆಯನ್ನೂ ಇಡಲಾರದೇ ತನ್ನದೇ ಲೋಕದಲ್ಲಿ ಜೀವಿಸುತ್ತಿರುತ್ತಾನೆ. ಹಾಗಾದರೆ ಮದುವೆ ಕಥೆಯೇನು ಎಂಬ ಕುತೂಹಲವಿದ್ದರೆ ನೀವು ಚಿತ್ರ ನೋಡಬಹುದು.

Advertisement

ಸಿನಿಮಾದ ಬಹುತೇಕ ಭಾಗ ವಧುವಿನ ಹುಡುಕಾಟದಲ್ಲೇ ಸಾಗುತ್ತದೆ. ಕಥೆಯ ಓಟ ಹಾಗೂ ನಿರೂಪಣೆ ಕೆಲವೆಡೆ ಹೊಸ ರೀತಿಯಲ್ಲಿ ಕೂಡಿದ್ದು, ಅಲ್ಲಲ್ಲಿ ನಗೆಗುಳಿಗೆಯ ಮೂಲಕ ಮನಸ್ಸನ್ನು ಹಗುರಗೊಳಿಸುವಂತೆ ಮಾಡುವಲ್ಲಿ ನಿರ್ದೇಶಕರ ಪ್ರಯತ್ನ ಸಫ‌ಲವಾಗಿದೆ.

ಇದನ್ನೂ ಓದಿ:ಗಣಪನ ಜತೆ ಬರಲಿದ್ದಾನೆ ಅಪ್ಪು: ಮೂರ್ತಿ ತಯಾರಿಕೆಗೆ ಭಾರಿ ಬೇಡಿಕೆ

ಅಮ್ಮ-ಮಗ, ತಂದೆ-ಮಗಳ ಸಂಬಂಧ, ಜೀವನದ ಪಾಠವನ್ನು ಬೇರೆ ರೂಪದಲ್ಲಿ ಕಟ್ಟಿಕೊಡುವ ಅಜ್ಜ, ಇವೆಲ್ಲದರ ಜತೆಗೆ ಗೆಳೆತನ… ಹೀಗೆ ಎಲ್ಲಾ ಅಂಶಗಳ ಮೇಲೆ ಬೆಳಕು ಚೆಲ್ಲುತ್ತಾ ಔಟ್‌ ಡೇಟೆಡ್‌ ಹಾಗೂ ಅಪ್‌ಡೇಟೆಡ್‌ ಜನರೇಷನ್‌ಗಳ ಬಂಧ-ಅನುಬಂಧವನ್ನು ಬಿಚ್ಚಿಡುತ್ತಾ ಹೋಗುತ್ತಾರೆ ನಿರ್ದೇಶಕ ವೆಂಕಟ್‌.

ನಾಯಕ ಶಿನವ್‌ ಸಹಜಾಭಿನಯ ಸಿನಿಮಾದ ಪ್ಲಸ್‌ ಪಾಯಿಂಟ್‌. ಗುರುರಾಜ್‌ ಹೊಸಕೋಟೆ, ಯಮುನಾ ಶ್ರೀನಿಧಿ, ರಚನಾ ರಾಯ್‌, ರೂಪಾ ರಾಯಪ್ಪ, ವಂದನಾ ಶೆಟ್ಟಿ ಮೊದಲಾದವರದ್ದು ಪಾತ್ರಕ್ಕೆ ತಕ್ಕ ಅಭಿನಯ.

Advertisement

ನಿರ್ದೇಶಕ ವೆಂಕಟ್‌ ಕಥೆಯನ್ನು ನಿರೂಪಣೆ ಮಾಡುತ್ತಾ ಥರೇವಾರಿ ಗೆಟಪ್‌ಗ್ಳಲ್ಲಿ ಕಾಣಿಸಿಕೊಂಡಿದ್ದಾರೆ. ಮಿಥುನ್‌ ಕ್ಯಾಮೆರಾ ಕೆಲಸ, ಸಮೀರ್‌ ಕುಲಕರ್ಣಿ ಸಂಗೀತ ಸಂಯೋಜನೆ ಸಿನಿಮಾಕ್ಕೆ ಪೂರಕವಾಗಿದೆ.

ಜಿಎಸ್ ಕೆ

Advertisement

Udayavani is now on Telegram. Click here to join our channel and stay updated with the latest news.

Next