Advertisement

ಬೆಳೆ ವಿಮೆ ಬಿಡುಗಡೆಗೆ ಒತ್ತಾಯಿಸಿ ಕೃಷಿ ಸಚಿವರಿಗೆ ಶ್ರೀರಾಮುಲು ಪತ್ರ

10:28 AM Jun 22, 2021 | Team Udayavani |

ಚಿತ್ರದುರ್ಗ: ಸತತ ಬರಕ್ಕೆ ಸಿಲುಕುತ್ತಿರುವ ಚಿತ್ರದುರ್ಗ ಜಿಲ್ಲೆಯಲ್ಲಿ ಕಳೆದ ವರ್ಷ ಅತಿವೃಷ್ಟಿಯಾಗಿದ್ದು, ಇದರಿಂದ ರೈತರು ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಆದರೆ ಈವರೆಗೆ ರೈತರಿಗೆ ಬೆಳೆ ವಿಮೆ ಪಾವತಿಯಾಗಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಅವರು ಕೃಷಿ ಸಚಿವ ಬಿ.ಸಿ. ಪಾಟೀಲ್‌ ಅವರಿಗೆ ಪತ್ರ ಬರೆದಿದ್ದಾರೆ.

Advertisement

ಚಿತ್ರದುರ್ಗ ಜಿಲ್ಲೆ ಎಂಟು ವರ್ಷ ಸತತ ಬರಗಾಲಕ್ಕೆ ಸಿಲುಕಿದೆ. 2020-21ನೇ ಸಾಲಿನಲ್ಲಿ ಅತಿವೃಷ್ಟಿ ಎಂದು ಘೋಷಣೆಯಾಗಿದೆ. ಈ ವೇಳೆ ಜಿಲ್ಲೆಯ 85,112 ರೈತರು ವಿಮೆ ಪಾವತಿಸಿದ್ದಾರೆ. ಆದರೆ ಈವರೆಗೆ ವಿಮಾ ಮೊತ್ತ ಪಾವತಿಯಾಗಿಲ್ಲ. 2020ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 188 ಗ್ರಾಮ ಪಂಚಾಯಿತಿಗಳಲ್ಲಿ 36 ಗ್ರಾಮ ಪಂಚಾಯಿತಿಗಳು ಮಾತ್ರ ವಿಮಾ ಪಾವತಿಗೆ ಆಯ್ಕೆಯಾಗಿವೆ. ಅದೂ ಸಹ ಶೇ. 0.5 ಮಾತ್ರ ವಿಮಾ ಮೊತ್ತ ನೀಡಲು ಅನುಮೋದನೆಯಾಗಿದೆ.

ಆದ್ದರಿಂದ ಫಸಲ್‌ ಬಿಮಾ ಯೋಜನೆಯಲ್ಲಿನ ಕೆಲ ಮಾನದಂಡಗಳನ್ನು ಬದಲಾಯಿಸಿ ಚಿತ್ರದುರ್ಗ ಜಿಲ್ಲೆಯ ರೈತರಿಗೆ ಬೆಳೆಯಿಂದ ಆಗಿರುವ ನಷ್ಟದ ವಿಮೆಯನ್ನು ಕಂಪನಿಯವರಿಂದ ಪಾವತಿ ಮಾಡಬೇಕು. ಬೆಳೆ ವಿಮೆ ಪಾವತಿ ಸಂದರ್ಭದಲ್ಲಿ ಏಳು ವರ್ಷಗಳ ಸರಾಸರಿ ಇಳುವರಿ ಬದಲಿಗೆ ಆಯಾ ವರ್ಷದ ಇಳುವರಿಯನ್ನು ಮಾತ್ರ ಪರಿಗಣಿಸಬೇಕು. ಗ್ರಾಮ ಪಂಚಾಯಿತಿ ಹಂತದಲ್ಲಿ ವಿಮಾ ಘಟಕ ನಿರ್ಧರಿಸಲು 50 ಹೆಕ್ಟೇರ್‌ ಬದಲಿಗೆ ಹೋಬಳಿ ವ್ಯಾಪ್ತಿಯಾಗಿ ಪರಿಗಣಿಸಬೇಕು. ಪ್ರತಿ ಹೋಬಳಿ ಮಟ್ಟದಲ್ಲಿ ವಿಮಾ ಕಂಪನಿಯವರು ಕಡ್ಡಾಯವಾಗಿ ಕಚೇರಿ ಸ್ಥಾಪಿಸಿ ರೈತರಿಗೆ ಅನುಕೂಲ ಕಲ್ಪಿಸುವಂತೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next