Advertisement

ನೆರೆ ಪರಿಹಾರದ ವಿಚಾರದಲ್ಲಿ ನಮ್ಮಿಂದ ತಡವಾಗಿದೆ: ಕ್ಷಮೆ ಯಾಚಿಸಿದ ಶ್ರೀರಾಮುಲು

12:37 PM Oct 04, 2019 | Team Udayavani |

ಬೆಂಗಳೂರು: ರಾಜ್ಯದಲ್ಲಿ ಪ್ರವಾಹ ಪರಿಹಾರ ನೀಡುವ ವಿಚಾರದಲ್ಲಿ ನಮ್ಮಿಂದ ಸಾಕಷ್ಟು ತಡವಾಗಿದೆ. ಇದನ್ನು ನಾವು ಒಪ್ಪಲೇಬೆಕು ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದರು.

Advertisement

ಎಲ್ಲೆಲ್ಲಿ ನಷ್ಟ ಆಗಿದೆ ಪರಿಶೀಲನೆ ಮಾಡಬೇಕು. ನಾವು 39 ಸಾವಿರ ಕೋಟಿ ಹತ್ತಿರ ಹತ್ತಿರ ಪರಿಹಾರ ಕೇಳಿದ್ದೇವೆ. ಕೇಂದ್ರದಿಂದ ಈಗಾಗಲೇ ಪರಿಹಾರ ಬರಬೇಕಾಗಿತ್ತು. ಆದರೆ ತಡವಾಗಿರುವುದಕ್ಕೆ ಕ್ಷಮೆ ಯಾಚಿಸುತ್ತೇವೆ ಎಂದು ಶ್ರಿರಾಮುಲು ಹೇಳಿದರು.

ನಮ್ಮೆಲ್ಲರಿಗೂ ಕೂಡ ಬಡವರು ಮುಖ್ಯ, ನೆರೆ ಸಂತ್ರಸ್ತರ ಕಷ್ಟ ಮುಖ್ಯ. ನೆರೆ ಸಂಸತ್ರಸ್ತರ ವಿಚಾರದಲ್ಲಿ ಯಾರೂ ರಾಜಕೀಯ ಮಾಡೋದು ಬೇಕಾಗಿಲ್ಲ.  ಮೊದಲು ಕೇಂದ್ರದಿಂದ ಪರಿಹಾರ ಬರಬೇಕು. ಆಮೆಲೆ ಯಾರು ಏನು ಬೇಕಾದರೂ ಮಾತಾಡಿಕೊಳ್ಳಲಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next