ಗದಗ: ಕೋವಿಡ್ ನಿರ್ಬಂಧಗಳ ಮಧ್ಯೆಯೂ ಅವಳಿ ನಗದಲ್ಲಿ ವಿವಿಧ ದೇವಸ್ಥಾನಗಳಲ್ಲಿ ಬುಧವಾರ ಶ್ರೀ ರಾಮನವಮಿಯನ್ನು ಸರಳ ಹಾಗೂ ಶ್ರದ್ಧೆಯಿಂದ ಆಚರಿಸಲಾಯಿತು.
ಬೆಟಗೇರಿ ಟರ್ನಲ್ ಪೇಟೆಯಲ್ಲಿರುವ ಶ್ರೀರಾಮ ಮಂದಿರ, ಕುಷ್ಟಗಿ ಚಾಳದ ರಾಮದೇವರ ಗುಡಿ, ಹಾತಲಗೇರಿ ನಾಕಾ ಸಮೀಪದ ಶ್ರೀ ಶಿರಡಿ ಸಾಯಿ ಮಂದಿರ ಸೇರಿದಂತೆ ಅವಳಿ ನಗರದ ವಿವಿಧೆಡೆಯಿರುವ ಶ್ರೀರಾಮ ಮಂದಿರಗಳಲ್ಲಿ ಶ್ರೀರಾಮನವಮಿ ನಿಮಿತ್ತ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಬೆಳಗ್ಗೆ ಕಾಕಡಾರತಿ, ಮಂಗಲ ಸ್ನಾನ, ರುದ್ರಾಭಿಷೇಕ, ಪಂಚಾಮೃತ ಅಭಿಷೇಕ ಸಲ್ಲಿಸಲಾಯಿತು. ಪಂಚಾರತಿ ನಂತರ ಪ್ರಸಾದ ವಿತರಿಸಲಾಯಿತು. ಸಂಜೆ ಧೂಪಾರತಿ, ಸಂಜೆ ಭಜನೆ ಹಾಗೂ ಸಂಗೀತ ಸೇವೆ, ರಾತ್ರಿ ಪಾಲಕಿ ಸೇವೆ ಸಲ್ಲಿಸಲಾಯಿತು. ಬೆಟಗೇರಿ ಕುಷ್ಟಗಿ ಚಾಳದಲ್ಲಿರುವ ಶ್ರೀ ರಾಮ ಮಂದಿರದಲ್ಲಿ ಧಾರ್ಮಿಕ ವಿ ವಿಧಾನಗಳೊಂದಿಗೆ ಪೂಜೆ ಸಲ್ಲಿಸಲಾಯಿತು.
ಶ್ರೀರಾಮ, ಲಕ್ಷ್ಮಣ ಹಾಗೂ ಸೀತಾ ದೇವಿಯ ಉತ್ಸವ ಮೂರ್ತಿಗಳನ್ನು ತರಹೇವಾರಿ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಟರ್ನಲ್‌ಪೇಟೆಯಲ್ಲಿರುವ ಶ್ರೀರಾಮ ಮಂದಿರದಲ್ಲಿ ಸುಮಂಗಲೆಯರು ಆರತಿ ಬೆಳಗಿ ಪೂಜೆ ಸಲ್ಲಿಸಿದರು.
ಶ್ರೀರಾಮ ಮಂದಿರದಲ್ಲಿ ಶ್ರೀರಾಮನ ಬೆಳ್ಳಿ ತೊಟ್ಟಿಲು ತೂಗಿ, ಭಕ್ತಿ ಸಮರ್ಪಿಸಿದರು. ಪತಂಜಲಿ ಯೋಗ ಸಮಿತಿ: ನಗರದ ಮುನ್ಸಿಪಲ್ ಮೈದಾನದಲ್ಲಿ ಬುಧವಾರ ರಾಮನವಮಿ ಹಾಗೂ ಹರಿದ್ವಾರ ಯೋಗ ಪೀಠದ ಬಾಬಾ ರಾಮದೇವ ಗುರೂಜಿಯವರ ಸನ್ಯಾಸ ಸ್ವೀಕಾರ ದಿನದ ಅಂಗವಾಗಿ ಅಗ್ನಿಹೋತ್ರ ಮಾಡುವುದರೊಂದಿಗೆ ಶ್ರೀ ರಾಮನವಮಿ ಆಚರಿಸಲಾಯಿತು. ಹಿರಿಯ ಯೋಗ ಸಾಧಕ ಕೆ.ಎಸ್.ಗುಗ್ಗರಿ ಅವರು ಶ್ರೀರಾಮನವಮಿ ಮಹತ್ವ ವಿವರಿಸಿದರು.
ಪತಂಜಲಿ ಯೋಗ ಸಮಿತಿ ಜಿಲ್ಲಾ ಪ್ರಭಾರಿ ಆಂಜನೇಶ ಮಾನೆ ಹಾಗೂ ಮಹಿಳಾ ಸಮಿತಿ ಜಲ್ಲಾ ಪ್ರಭಾರಿ ಶೋಭಾ ಗುಗ್ಗರಿ ಮಾತನಾಡಿ, ಅಗ್ನಿಹೋತ್ರದಿಂದ ಸುತ್ತಮುತ್ತಲಿನ 500 ಮೀ. ಪ್ರದೇಶ ಪರಿಶುದ್ಧವಾಗುವುದು. ನಕಾರಾತ್ಮಕ ಶಕ್ತಿಗಳು ದೂರವಾಗುವುದು. ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ ಎಂದರು. ಪತಂಜಲಿ ಕಾರ್ಯದರ್ಶಿ ನಾಗರತ್ನಾ ಬಡಿಗಣ್ಣವರ, ಶಶಿಕಲಾ ಹಡಗಲಿಮಠ, ಲಕ್ಷಿ¾à ಗುರಿಕಾರ, ರತ್ನಕ್ಕ ಕಲ್ಲೂರ, ಹಿರಿಯ ಯೋಗ ಸಾಧಕ ಅಪ್ಪಣ್ಣ ಮಠದ, ಸದಾನಂದ ಕಾಮತ, ಕೆ.ಎಸ್.ಗುಗ್ಗರಿ, ಎಸ್.ವೈ.ಬಾವಿಕಟ್ಟಿ ಮತ್ತಿತರರು ಪಾಲ್ಗೊಂಡಿದ್ದರು.