Advertisement
ರಾಮನನ್ನು ಮಹಾಯೋಗಿ ಎಂದು ಒಪ್ಪಿಕೊಂಡರೂ, ಆತ ಸಾವಿರಾರು ವರ್ಷಗಳ ಕಾಲ ಬದುಕಿದ್ದ ಎಂದು ಒಪ್ಪಿಕೊಳ್ಳುವುದು ಕಷ್ಟ. ಸಾಮಾನ್ಯವಾಗಿ ಉನ್ನತಯೋಗಿಗಳು ಲೌಕಿಕ ಪ್ರಪಂಚಕ್ಕೆ ಅಂಟಿಕೊಳ್ಳುವುದಿಲ್ಲ, ಶರೀರವನ್ನು ಎಷ್ಟೇ ದೀರ್ಘಕಾಲ ಉಳಿಸಿಕೊಳ್ಳಬಲ್ಲವಾದರೂ ಜನರನೋಟದಿಂದ ಬೇಗನೆ ಮುಕ್ತರಾಗುತ್ತಾರೆ. ಹೇಗೆ ನೋಡಿದರೂ ಆತ ಸಾವಿರಾರು ವರ್ಷಗಳ ಬದುಕಿದ್ದ ಎಂಬುದರ ಅರ್ಥ ಬೇರೇನೋ ಇದೆ ಎನ್ನುವುದು ಖಚಿತ. ಹೌದು ಅರ್ಥ ಬೇರೆಯೇ ಇದೆ. ಭಾರತದಲ್ಲಿ ಗೋತ್ರ ಪರಂಪರೆ, ಗುರುಪರಂಪರೆ, ಪಿತೃಪರಂಪರೆಯಿದೆ. ಉದಾಹರಣೆಗೆ ರಾಮಾಯಣದಲ್ಲಿನ ಪರಶುರಾಮನ ಹೆಸರು ಮಹಾಭಾರತದಲ್ಲೂ ಕಾಣಿಸಿಕೊಳ್ಳುತ್ತದೆ. ಅದು ಹೇಗೆ ಸಾಧ್ಯ ಎಂದರೆ, ಅದು ಪರಶುರಾಮ ಅಲ್ಲ ಆತನ ಸಂತತಿ ಅಥವಾ ಗೋತ್ರದವರು ಎನ್ನಬಹುದು. ಆ ಗೋತ್ರದವರನ್ನು ಅದೇ ಹೆಸರಿನಿಂದ ಗುರ್ತಿಸುವುದು ಇದರ ಹಿಂದಿನ ತರ್ಕ. ಈ ದೃಷ್ಟಿಯಲ್ಲಿ ನೋಡಿದರೆ, ರಾಮನ ನಂತರ ಆಳಿದ ಆತನ ಸಂತತಿಯವರನ್ನೆಲ್ಲ ರಾಮ ಎಂಬ ಮಹಾಪುರುಷನ ಹೆಸರಿನಲ್ಲೇ ಗುರ್ತಿಸಲಾಗುತ್ತಿತ್ತು. ಹಾಗಾಗಿ ಆಳಿದ್ದು ಸಂತತಿಯವರಾದರೂ, ರಾಮನೇ ಹೆಸರೇ ಮುಖ್ಯವಾಯಿತು. ಇದರಲ್ಲಿ ಇನ್ನೊಂದು ಆಯಾಮವೂ ಇದೆ. ರಾಮ ಎಂಬ ಮಹಾತ್ಮ ಹಾಕಿಕೊಟ್ಟ ಆದರ್ಶ ಆಡಳಿತದ ಮಾದರಿಯನ್ನು, ಸಾವಿರಾರು ವರ್ಷಗಳ ಕಾಲ ಮುಂದಿನಪೀಳಿಗೆ ಅನುಸರಿಸಿರುವುದು ಅಸಂಭವವಲ್ಲ. ಹೀಗೆಯೂ ಜನರಪ್ರಜ್ಞೆಯಲ್ಲಿ ರಾಮ ಸಾವಿರಾರುವರ್ಷ ಬದುಕಿದ್ದರಿಂದ ಅದನ್ನು ರಾಮನೇ ಬದುಕಿದ ಎಂಬರ್ಥದಲ್ಲಿ ಹೇಳಿರಬಹುದು. ಇಂತಹ ರಾಮನಿಗೆ ಎದುರಾದ ವಿರಹವೇದನೆ ಹೇಗಿತ್ತು ಗೊತ್ತಾ?
Advertisement
ಮಹಾಯೋಗಿ ರಾಮನಿಗೂ ವಿರಹವೇ?
08:24 PM Aug 19, 2019 | mahesh |
Advertisement
Udayavani is now on Telegram. Click here to join our channel and stay updated with the latest news.