ಕಲಾಕದಂಬ ಆರ್ಟ್ ಸೆಂಟರ್‌ನ ಡಾ.ರಾಧಾಕೃಷ್ಣ ಉರಾಳ ಅವರ ನೇತೃತ್ವದಲ್ಲಿ, ಕವಿ ಪಾರ್ತಿಸುಬ್ಬ ರಚಿಸಿದ “ಶ್ರೀರಾಮ ಪಟ್ಟಾಭಿಷೇಕ’ ಯಕ್ಷ ಪ್ರಸಂಗ ಹಮ್ಮಿಕೊಳ್ಳಲಾಗಿದೆ.
ಈ ಪ್ರಸಂಗವನ್ನು ಅಂಬರೀಷ್ ಭಟ್ ನಿರ್ದೇಶಿಸಿದ್ದು, ಮುಮ್ಮೇಳದಲ್ಲಿ ಡಾ.ಪ್ರದೀಪ ಸಾಮಗ, ಪ್ರಶಾಂತ ಹೆಗಡೆ, ದೇವರಾಜ ಕರಬ, ವಿನಾಯಕ ಭಟ್, ಭರತ ಪರ್ಕಳ, ನಾಗೇಶ್ ಅಪ್ಪಿ, ನಿತ್ಯಾನಂದ ನಾಯಕ್, ಕಾರ್ತಿಕ್, ಹಿಮ್ಮೇಳದಲ್ಲಿ ಸುಬ್ರಾಯ ಹೆಬ್ಟಾರ್, ರಾಜೇಶ್ ಸಾಗರ,
ಆದಿತ್ಯ ಕಶ್ಯಪ್ ಜೊತೆಗಿರಲಿದ್ದಾರೆ.
ರಂಗಕರ್ಮಿ ಗೋಪಾಲಕೃಷ್ಣ ನಾಯರಿ, ಡಾ.ಗಂಗೂಬಾಯಿ ಹಾನಗಲ್ ವಿ.ವಿ.ಯ ರಿಜಿಸ್ಟ್ರಾರ್, ಡಾ.ನಾಗೇಶ್ ಬೆಟ್ಟುಕೋಟೆ, ಚಿತ್ರ ನಿರ್ದೇಶಕಿ ಚಂಪಾ ಪಿ.ಶೆಟ್ಟಿ, ಅಕ್ಷಯ ನ್ಪೋರ್ಟ್ಸ್ ಅಕಾಡೆಮಿ ನಿರ್ದೇಶಕ ಲಕ್ಷ್ಮೀನಾರಾಯಣ, ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕೇಂದ್ರ ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದೆ.
ಎಲ್ಲಿ?: ಜೂನ್ 2, ಸಂಜೆ 4
ಯಾವಾಗ?: ಉದಯಭಾನು ಕಲಾಸಂಘ, ಕೆಂಪೇಗೌಡನಗರ, ಚಾಮರಾಜಪೇಟೆ
ಪ್ರವೇಶ: ಉಚಿತ