Advertisement

ಐಸಿಸಿಗೆ ಮಾಜಿ ಮುಖ್ಯಸ್ಥ ಶ್ರೀನಿವಾಸನ್‌ ಸವಾಲು

12:30 AM Jan 01, 2019 | Team Udayavani |

ಚೆನ್ನೈ: ಅಂತಾರಾಷ್ಟ್ರೀಯ ಕ್ರಿಕೆಟ್‌ ಸಂಸ್ಥೆ (ಐಸಿಸಿ) ವಿರುದ್ಧ ಐಸಿಸಿ ಮತ್ತು ಬಿಸಿಸಿಐ ಮಾಜಿ ಮುಖ್ಯಸ್ಥ ಎನ್‌.ಶ್ರೀನಿವಾಸನ್‌ ಹರಿಹಾಯ್ದಿದ್ದಾರೆ. 

Advertisement

ಭಾರತದಲ್ಲಿ ಆಯೋಜನೆಯಾಗಿದ್ದ 2016ರ ಟಿ20 ವಿಶ್ವಕಪ್‌ನ ತೆರಿಗೆಯನ್ನು ಪಾವತಿಸಿ, ಇಲ್ಲವೇ 2021ರ ಚಾಂಪಿಯನ್ಸ್‌ ಟ್ರೋಫಿ, 2023ರ ಏಕದಿನ ವಿಶ್ವಕಪ್‌ ಆತಿಥ್ಯ ಕಳೆದುಕೊಳ್ಳಲು ಸಿದ್ಧವಾಗಿರಿ ಎಂಬ ಐಸಿಸಿ ಎಚ್ಚರಿಕೆಗೆ ತಿರುಗೇಟು ನೀಡಿದ್ದಾರೆ. ನೀವು ತೆರಿಗೆ ಪಾವತಿಸದಿದ್ದರೆ, 2023ರ ವಿಶ್ವಕಪ್‌ ಆತಿಥ್ಯ ಸಿಗುವುದಿಲ್ಲ ಎಂದು ನನಗೆ ಹೇಳಲಾಗಿತ್ತು. ಆಗಲಿ, ನಾವು ಆಡುವುದಿಲ್ಲ. ಆಗ ಉಳಿದ ದೇಶಗಳು ಬೊಬ್ಬೆ ಹೊಡೆಯುತ್ತವೆ. ಕಾರಣ ಕಳೆದುಕೊಳ್ಳುವವರು ಅವರೇ ಹೊರತು, ನಾವಲ್ಲ. ಕ್ರಿಕೆಟ್‌ನಲ್ಲಿ ಭಾರತ ಎಷ್ಟು ಶಕ್ತಿಶಾಲಿ ಎಂಬುದು ಈಗಷ್ಟೇ ನಮಗೆ ಗೊತ್ತಾಗುತ್ತಿದೆ ಎಂದು ಶ್ರೀನಿವಾಸನ್‌ ಹೇಳಿದ್ದಾರೆ.

ಶ್ರೀನಿವಾಸನ್‌ ಬಿಸಿಸಿಐ ಅಧ್ಯಕ್ಷರಾಗಿದ್ದಾಗ, ಜಾರಿಗೊಳಿಸಲಾಗಿದ್ದ ಬಿಗ್‌ ಥ್ರಿ ಆರ್ಥಿಕ ನೀತಿಯನ್ನು ಐಸಿಸಿ ರದ್ದು ಮಾಡಿದ್ದನ್ನೂ ಶ್ರೀನಿವಾಸನ್‌ ಕಟುವಾಗಿಯೇ ಟೀಕಿಸಿದ್ದಾರೆ. ಐಸಿಸಿಯಲ್ಲಿ ಬಿಸಿಸಿಐಯನ್ನು ಪ್ರತಿನಿಧಿಸುವ ಬುದ್ಧಿವಂತರೊಬ್ಬರು, ಬಿಗ್‌ಥ್ರಿà ನೀತಿಯಿಂದ ಐಸಿಸಿಗೆ ಭಾರೀ ಹೊಡೆತವಾಗುತ್ತದೆ ಎಂದು ಹೇಳಿ ಅದನ್ನು ರದ್ದು ಮಾಡಿದ್ದಾರೆ. ನಾನು ಐಸಿಸಿ ಮುಖ್ಯಸ್ಥನಾಗಿದ್ದಾಗ, 2 ಬಿಲಿಯನ್‌ ಡಾಲರ್‌ ಹಣ ಐಸಿಸಿಗೆ ಬಂದಿತ್ತು. ಅದರಲ್ಲಿ 1.7 ಬಿಲಿಯನ್‌ ಡಾಲರ್‌ ಬರೀ ಭಾರತೀಯ ಉಪಖಂಡದಿಂದಲೇ ಲಭ್ಯವಾಗಿತ್ತು. 

ಉಳಿದ ಶೇ.20ರಿಂದ 30 ಮಿಲಿಯನ್‌ ಡಾಲರ್‌ ಮಾತ್ರ ಉಳಿದ ರಾಷ್ಟ್ರಗಳು ನೀಡಿದ್ದು. ಭಾರತ ಶೇ.70ರಷ್ಟು ಆದಾಯಕ್ಕೆ ಕಾರಣವಾಗುವುದಾದರೆ, ಭಾರತಕ್ಕೆ ಕನಿಷ್ಠ ಶೇ.20ರಷ್ಟು ಹಣ ವಾಪಸ್‌ ಬರಬೇಕು ಎಂದು ನಾನು ವಾದಿಸಿದ್ದೆ ಎಂದು ಶ್ರೀನಿವಾಸನ್‌ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next