ಬೆಂಗಳೂರು : ಕೈಲಾಸ ಕಲಾಧರ ಕಲ್ಚರಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಆಯೋಜಿಸಿರುವ ಶ್ರೀನಿವಾಸ ಕಲ್ಯಾಣ & ವೆಂಕಟಾದ್ರಿ ಮಹಿಮೆ ಭರತನಾಟ್ಯ ಕಾರ್ಯಕ್ರಮ ಏ. 3, ಭಾನುವಾರ ಜಯನಗರದ ಜೆಎಸ್ ಎಸ್ ಸಭಾಂಗಣದಲ್ಲಿ ಸಂಜೆ 6 ಗಂಟೆಯಿಂದ ನಡೆಯಲಿದೆ.
ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಅತಿಥಿಗಳಾಗಿ ಸಂಸದ ತೇಜಸ್ವಿ ಸೂರ್ಯ, ಶಾಸಕಿ ಸೌಮ್ಯ ರೆಡ್ಡಿ, ಖ್ಯಾತ ನಿರ್ದೇಶಕ ಟಿ.ಎಸ್. ನಾಗಾಭರಣ ಸೇರಿ ಗಣ್ಯರು ಉಪಸ್ಥಿತರಿರಲಿದ್ದಾರೆ.
ವಿಶೇಷ ಅತಿಥಿಗಳಾಗಿ ಐಸಿಸಿಆರ್ ಪ್ರಾದೇಶಿಕ ಅಧಿಕಾರಿ ಸುದರ್ಶನ ಶೆಟ್ಟಿ, ಐಸಿಸಿಆರ್ ನ ಮಾಜಿ ಪ್ರಾದೇಶಿಕ ಅಧಿಕಾರಿ ವೇಣುಗೋಪಾಲ್, ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಯ ದತ್ತಿ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ರಮ ರಾಮಮೂರ್ತಿ, ಆದರ್ಶ ಸುಗಮ ಸಂಗೀತ ಅಕಾಡೆಮಿ ಅಧ್ಯಕ್ಷ ಕಿಕ್ಕೇರಿ ಕೃಷ್ಣಮೂರ್ತಿ, ಬಂಗಾರಪೇಟೆ ಕನ್ನಡ ಸಂಘದ ಅಧ್ಯಕ್ಷ ಸುಬ್ರಮಣಿ ಪಲ್ಲವಿ ಮಣಿ, ಲೇಖಕ, ಸಂಪಾದಕ ಮಣ್ಣಿ ಮೋಹನ್,ರಾಜ್ಯ ಹಿಂದುಳಿದ ವರ್ಗಗಗಳ ಮೋರ್ಚಾದ ಕೋಶಾಧ್ಯಕ್ಷ ಆರ್.ಗೋವಿಂದ ನಾಯ್ಡು ಪಾಲ್ಗೊಳ್ಳಲಿದ್ದಾರೆ.
ಕಾರ್ಯಕ್ರಮವನ್ನು ಗುರು ಡಾ. ಜಯಲಕ್ಷ್ಮಿ ಜೀತೆಂದ್ರ ಭಾಗವತ್ ಅವರು ಕಥಾ ನಿರೂಪಣೆ, ನೃತ್ಯ ನಿರ್ದೇಶನ ಮತ್ತು ಸಂಯೋಜನೆ ಮಾಡಲಿದ್ದಾರೆ. ಕೈಶಿಕಿ ನಾಟ್ಯ ವಾಹಿನಿಯ ಪ್ರಧಾನ ಪ್ರಾಚಾರ್ಯ ಭರತ ಕಲಾ ಮಣಿ ಡಾ.ಸಿ. ರಾಧಾಕೃಷ್ಣ, ಕೈಶಿಕಿ ನಾಟ್ಯ ವಾಹಿನಿಯ ಸಂಸ್ಥಾಪಕಿ ಮತ್ತು ನಿರ್ದೇಶಕಿ ಡಾ.ಮಾಲಾ ಶಶಿಕಾಂತ್, ಶ್ರೀ ರಾಜ ರಾಜೇಶ್ವರಿ ಕಲಾ ನಿಕೇತನದ ನಿರ್ದೇಶಕರಾದ ವೀಣಾ ಮೂರ್ತಿ ವಿಜಯ್ , ಬೆಂಗಳೂರು ವಿವಿ ಸಂಗೀತ ವಿಭಾಗದ ಪ್ರಾಧ್ಯಾಪಕರಾದ ಎಸ್. ಎನ್. ಸುಶೀಲಾ ಅವರ ಗುರು ಚರಣಾಮೃತದಲ್ಲಿ ಕಾರ್ಯಕ್ರಮ ನಡೆಯಲಿದೆ.
ಸಂಗೀತ ಸಂಯೋಜನೆ ಮತ್ತು ಹಾಡುಗಾರಿಕೆಯನ್ನು ಡಿ.ಶ್ರೀನಿವಾಸ್ ಶ್ರೀವತ್ಸ ಮತ್ತು ಭಾರತಿ ವೇಣುಗೋಪಾಲ್ ಅವರು ಮಾಡಲಿದ್ದು, ಕೊಳಲಿನಲ್ಲಿ ನರಸಿಂಹ ಮೂರ್ತಿ ವೀಣೆಯಲ್ಲಿ ಗೋಪಾಲ್ ವೆಂಕಟರಮಣ, ಮೃದಂಗದಲ್ಲಿ ವಿನೋದ್ ಶ್ಯಾಮ್ ಆನೂರು ಮತ್ತು ರಿಧಂ ಪ್ಯಾಡ್ ನಲ್ಲಿ ಸಾಯಿ ವಂಶಿ ಸಹಕರಿಸಲಿದ್ದಾರೆ.