Advertisement

ಶ್ರೀನಿವಾಸ ಕಲ್ಯಾಣೋತ್ಸವ ಸಂಪನ್ನ

01:29 AM Feb 21, 2020 | Sriram |

ಬೈಂದೂರು: ತಿರುಪತಿ ಶ್ರೀನಿವಾಸ-ಪದ್ಮಾವತಿಯರ ವಿವಾಹ ಹಾಗೂ ಜೀವನ ಆದರ್ಶಮಯ ವಾಗಿದ್ದು, ಒಬ್ಬೊಬ್ಬ ವ್ಯಕ್ತಿಗೆ ಒಂದೊಂದು ಸನ್ನಿವೇಶದಲ್ಲಿ ಒಂದೊಂದು ರೀತಿಯಲ್ಲಿ ದಾರಿದೀಪವಾಗಬಲ್ಲುದು. ಸಮ ರ್ಪಣಾ ಮನೋಭಾವದಿಂದ ಕಾರ್ಯತಣ್ತೀರಾಗುವುದು ಧಾರ್ಮಿಕ ಮನೋಭಾವದ ಮೊದಲ ಹೆಜ್ಜೆಯಾಗಿದೆ ಬೆಂಗಳೂರು ಶ್ರೀವಾರಿ ಫೌಂಡೇಶನ್‌ನ ವೆಂಕಟೇಶಮೂರ್ತಿ ಹೇಳಿದರು.

Advertisement

ಬೈಂದೂರು ವತ್ತಿನಕಟ್ಟೆ ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನದ ಪ್ರತಿಷ್ಠಾ ವರ್ಧಂತಿ ದಶಮಾನೋತ್ಸವ ಪ್ರಯುಕ್ತ ಆಯೋಜಿಸಿದ ಶ್ರೀನಿವಾಸ ಕಲ್ಯಾಣೋತ್ಸವದ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿ, ಭಗವಂತನ ಕಲ್ಯಾಣೋತ್ಸವದಲ್ಲಿ ಹಲವಾರು ರೀತಿಯ ಪ್ರಯೋಜನಗಳಿವೆ. ಸಮಾಜ ಸುಭಿಕ್ಷೆಯಾಗುತ್ತದೆ. ಆದ್ದರಿಂದ ನಾವು ನಮ್ಮ ಜೀವನದಲ್ಲಿ ಆದರ್ಶ, ತತ್ತÌ ಹಾಗೂ ಉತ್ತಮ ಚಿಂತನೆ ಗಳನ್ನು ಅಳವಡಿಸಿಕೊಳ್ಳಲು ಸಹಕಾರಿ ಯಾಗುತ್ತದೆ. ಇದೊಂದು ಪುಣ್ಯದ ಕಾರ್ಯವಾಗಿದ್ದರಿಂದ ಮಂಗಳ ಕಾರ್ಯ, ಶುಭವಿವಾಹವೆಂದು ಸಂಬೋಧಿಸುತ್ತಾರೆ. ವಿವಾಹವೆಂಬುದು ಧರ್ಮ, ಅರ್ಥ, ಕಾಮಗಳನ್ನು ಅತಿಕ್ರಮಿಸಿ ಹೊಗುವುದಿಲ್ಲ ಎಂಬ ನೆಲೆಯಲ್ಲಿ ಸಂದೇಶ ಸಾರುವ ಪವಿತ್ರ ಬಂಧನವಾಗಿದೆ. ಪತಿ-ಪತ್ನಿಯರ ಪರಸ್ಪರ ನಿಷ್ಠೆ ಮತ್ತು ಅನ್ಯೋನ್ಯತೆ ಸುಖಮಯ ಜೀವನದ ಮೊದಲ ಸೂತ್ರ ಎಂದರು.

ನಾಕಟ್ಟೆಯಿಂದ ಯಡ್ತರೆ ಜಂಕ್ಷನ್‌ ಮೂಲಕ ಹೊರಟ ಶ್ರೀನಿವಾಸ ಪದ್ಮಾವತಿಯರ ಮದುವೆ ದಿಬ್ಬಣ ವತ್ತಿನಕಟ್ಟೆ ಕಲ್ಯಾಣೊÂàತ್ಸವ ಸ್ಥಳಕ್ಕೆ ಆಗಮಿಸಿದ ಬಳಿಕ ಕಲ್ಯಾಣೋತ್ಸವದ ಪ್ರಕ್ರಿಯೆಗಳು ಆರಂಭಗೊಂಡವು. ಆರಂಭದಲ್ಲಿ ದೀಪಿಕಾ ಪಾಂಡುರಂಗಿ ಅವರ ದಾಸರ ಪದಗಳ ಗಾಯನ ಜರಗಿತು. ತಿರುಪತಿ ಆಚಾರ್ಯರು, ದಾಸ ಶೈಲಿಯಲ್ಲಿ ಕಲ್ಯಾಣೋತ್ಸವ ನಡೆಸಿದರು. ಬಳಿಕ ಮಂತ್ರಾಕ್ಷತೆ, ಲಡ್ಡು ಪ್ರಸಾದ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಶಾಸಕ ಬಿ. ಎಂ. ಸುಕುಮಾರ್‌ ಶೆಟ್ಟಿ, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ದಾಸರಪದಗಳ ಪ್ರಾಯೋಜಕರಾದ ಎನ್‌.ವಿ. ರಾಘವೇಂದ್ರ ರಾವ್‌, ದಿನೇಶ್‌ ನೇರಂಬಳ್ಳಿ ಸೇರಿದಂತೆ ಅನೇಕ ಜನಪ್ರತಿನಿಧಿಗಳು ಹಾಗೂ ಸುಮಾರು ಹದಿನೈದು ಸಾವಿರಕ್ಕೂ ಹೆಚ್ಚಿನ ಭಕ್ತರು ಕ್ಷೇತ್ರಕ್ಕಾಗಮಿಸಿ ಕಲ್ಯಾಣೋತ್ಸವಕ್ಕೆ ಸಾಕ್ಷಿಯಾದರು.

ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನದ ಪ್ರಧಾನ ಅರ್ಚಕ ಬಿ. ಕೃಷ್ಣಮೂರ್ತಿ ನಾವಡ, ಸೇವಾ ಸಮಿತಿ ಗೌರವಾಧ್ಯಕ್ಷ ಎಸ್‌. ರಾಜು ಪೂಜಾರಿ, ಅಧ್ಯಕ್ಷ ಎನ್‌. ನಾಗರಾಜ ಶೆಟ್ಟಿ, ಕಾರ್ಯದರ್ಶಿ ಶಿವರಾಮ ಪೂಜಾರಿ ಯಡ್ತರೆ, ಸದಸ್ಯರಾದ ಶ್ರೀನಿವಾಸ ಕುಮಾರ್‌, ಶಂಕರ ಮೊಗವೀರ, ಮಂಜುನಾಥ ಆಚಾರ್ಯ, ಸತ್ಯಪ್ರಸನ್ನ, ಅಣ್ಣಪ್ಪ ಪೂಜಾರಿ (ಪಾತ್ರಿ), ನಾಗರಾಜ ಗಾಣಿಗ ಬಂಕೇಶ್ವರ, ದೊಟ್ಟಯ್ಯ ಪೂಜಾರಿ ಬೆಳYಲ್‌ಕಟ್ಟೆ, ಕೃಷ್ಣಯ್ಯ ಮಧ್ದೋಡಿ, ರವೀಂದ್ರ ಶ್ಯಾನುಭಾಗ್‌, ಎಚ್‌. ಉದಯ್‌ ಆಚಾರ್ಯ ಹಾಗೂ ಭಕ್ತರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next