Advertisement

ಬಿಎಸ್‌ವೈ ನಿರ್ಧಾರಕ್ಕೆ ಶ್ರೀನಿವಾಸ್‌ ಪ್ರಸಾದ್‌ ಆಕ್ಷೇಪ

12:37 AM Nov 01, 2019 | Sriram |

ಮೈಸೂರು: ಪಠ್ಯದಲ್ಲಿ ಟಿಪ್ಪು ಸುಲ್ತಾನ್‌ ಕುರಿತ ಅಧ್ಯಾಯವನ್ನು ತೆಗೆದು ಹಾಕುವ ವಿಚಾರದ ಕುರಿತು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಎಚ್ಚರಿಕೆಯಿಂದ
ನಿರ್ಧಾರ ತೆಗೆದುಕೊಳ್ಳಬೇಕಿತ್ತು, ಈ ಕುರಿತು ಸಿಎಂ ಅವರ ಆತುರದ ನಿರ್ಧಾರ ಸರಿಯಲ್ಲ ಎಂದು ಸಂಸದ ವಿ. ಶ್ರೀನಿವಾಸ್‌ ಪ್ರಸಾದ್‌ ಸಿಎಂ ನಿರ್ಧಾರವನ್ನು ಆಕ್ಷೇಪಿಸಿದ್ದಾರೆ.

Advertisement

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಈಗಾಗಲೇ ಜನರಲ್ಲಿ ಬಿಜೆಪಿ ಒಂದು ಕೋಮುವಾದಿ ಪಕ್ಷ ಎಂಬ ಆರೋಪವಿದೆ. ರಾಜ್ಯ ಸರ್ಕಾರ ಇಂತಹ
ಆರೋಪಗಳನ್ನು ಅಳಿಸಿ ಹಾಕುವ ಕೆಲಸ ಮಾಡಬೇಕು. ಆದರೆ, ಟಿಪ್ಪು ಕುರಿತ ಸರ್ಕಾರದ ನಿರ್ಧಾರ ಕೋಮುವಾದಕ್ಕೆ ಪ್ರಚೋದನೆ ನೀಡಿದಂತಾಗುತ್ತದೆ. ಯಾವ ಸರ್ಕಾರಗಳೂ ಒಂದು ಸಮುದಾಯದ ಭಾವನೆಗಳಿಗೆ ಧಕ್ಕೆ ಉಂಟಾಗುವ ರೀತಿಯಲ್ಲಿ ಯಾವ ತೀರ್ಮಾನಗಳನ್ನೂ ತೆಗೆದುಕೊಳ್ಳಬಾರದು ಎಂದು ಹೇಳಿದರು.

ಈಗ ರಾಜ್ಯ ಸರ್ಕಾರಕ್ಕೆ ಮಾಡಲು ಬೇಕಾದಷ್ಟು ಕೆಲಸಗಳಿವೆ. ಅದೆಲ್ಲವನ್ನೂ ಬಿಟ್ಟು ಏಕೆ ಟಿಪ್ಪು ವಿಚಾರ ಮಾತನಾಡುತ್ತೀರಿ ಎಂದು ಪ್ರಶ್ನಿಸಿದ ಶ್ರೀನಿವಾಸ ಪ್ರಸಾದ್‌, ಇಡೀ ರಾಜ್ಯ
ಭೀಕರ ಪ್ರವಾಹದಿಂದ ತತ್ತರಿಸಿ ಹೋಗಿದೆ. ನೆರೆ ಪರಿಹಾರದ ಕೆಲಸಗಳು ಸಾಕಷ್ಟಿವೆ. ಕೇಂದ್ರ ಸರ್ಕಾರ ಮಧ್ಯಂತರ ಪರಿಹಾರ ಬಿಡುಗಡೆ ಮಾಡಿದೆ. ನೀಡಿರುವ
1,200 ಕೋಟಿ ರೂ.ಯಾವುದಕ್ಕೂ ಸಾಲುತ್ತಿಲ್ಲ. ಹೆಚ್ಚಿನ ಅನುದಾನ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕು. 17 ಶಾಸಕರು ಮೈತ್ರಿ ಸರ್ಕಾರದ
ವಿರುದಟಛಿ ಮತ ಹಾಕಿ ರಾಜೀನಾಮೆ ನೀಡಿದ್ದಾರೆ.

ಚುನಾವಣಾ ಆಯೋಗ ಉಪಚುನಾವಣೆಯನ್ನೂ ಘೋಷಣೆ ಮಾಡಿದೆ. ಅನರ್ಹ ಶಾಸಕರ ಪರಿಸ್ಥಿತಿ ನಿವಾರಣೆ ದೊಡ್ಡ ಸವಾಲಾಗಿದೆ. ಇಷ್ಟೆಲ್ಲ ಇಕ್ಕಟ್ಟುಗಳು ಇರುವಾಗ ಟಿಪ್ಪು ವಿಚಾರ ಯಾಕೆ ಬೇಕಿತ್ತು ಎಂದು ಬೇಸರ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next