ಹನೂರು: ತನ್ನ ಪ್ರಾಣಕ್ಕೆ ಅಪಾಯವಿದೆ ಎಂಬುದು ತಿಳಿದಿದ್ದರೂ ನರಹಂತಕ ವೀರಪ್ಪನ್ ಬಳಿಗೆ ಹೋಗಿ ಮೃತಪಟ್ಟ ದಿ.ಪಿ.ಶ್ರೀನಿವಾಸ್ ಅವರು ತಮ್ಮ ಕೆಲಸ ಕಾರ್ಯಗಳ ಮೂಲಕ ಜನಮಾನಸದಲ್ಲಿ ಜೀವಂತ ವಾಗಿದ್ದಾರೆ ಎಂದು ಕಾವೇರಿ ವನ್ಯಜೀವಿ ವಲಯದ ಡಿಎಫ್ಒ ರಮೇಶ್ ಕುಮಾರ್ ಬಣ್ಣಿಸಿದರು.
ಸಮೀಪದ ಕಾವೇರಿ ವನ್ಯಧಾಮದ ಎರಕೆಯಂ ಅರಣ್ಯ ಪ್ರದೇಶದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತ ನಾಡಿ, ಅರಣ್ಯಾಧಿಕಾರಿ ಯಾಗಿದ್ದರೂ ಸದಾ ಜನರ ಸುಖದುಃಖಗಳಿಗೆ ಭಾಗಿಯಾಗುವ ಮೂಲಕ ಎಲ್ಲರ ವಿಶ್ವಾಸ ಗಳಿಸಿದ್ದ ಶ್ರೀನಿವಾಸ್, ವೀರಪ್ಪನ್ ಮನಪರಿವರ್ತನೆ ಮಾ ಡಲು ಹೋಗಿ ಅವನ ಕುತಂತ್ರಕ್ಕೆ ಬಲಿಯಾ ದರು. ತನಗೆ ಆತನಿಂದ ಅಪಾಯವಿದೆ ಎಂಬ ಅರಿವಿದ್ದರೂ ಆತನ ಮನಸ್ಸು ಬದಲಾಯಿ ಸಲು ಪ್ರಯತ್ನಿಸಿದ ಶ್ರೀನಿವಾಸ್ ಅವರ ದೃಢಸಂಕಲ್ಪ ಇಂದಿನ ಅಧಿಕಾರಿಗಳಿಗೆ ಮಾದರಿಯಾಗಿದೆ ಎಂದರು.
ನಿವೃತ್ತ ಡಿಎಫ್ಒ ಉದಯ್‌ಕುಮಾರ್ ಮಾತನಾಡಿ, ವೀರಪ್ಪನ್‌ನನ್ನು ಕೊಲ್ಲುವುದಕ್ಕಿಂತ ಆತನನ್ನು ಜೀವಂತವಾಗಿ ಹಿಡಿದು ಅವನ ಮನಃಪರಿವರ್ತನೆ ಮಾಡುವುದೇ ಶ್ರೀನಿವಾಸ್ ಅವರ ಗುರಿಯಾಗಿತ್ತು. ಆದರೆ ತಾನು ಶರಣಾಗು ವುದಾಗಿ ಹೇಳಿದಾಗ ಅತ್ಯಂತ ಖುಷಿಯಿಂದಲೇ ಆತನ ಬಳಿಗೆ ಹೋದ ಅವರು ದಾರುಣವಾಗಿ ಹತ ರಾದರು. ಅವರ ಕಾರ್ಯವೈಖರಿಯನ್ನು ಇಂದಿನ ಸಿಬ್ಬಂದಿ ಮೈಗೂಡಿಸಿಕೊಳ್ಳಬೇಕಿದೆ ಎಂದರು.
ಮಾದರಿ ಅಧಿಕಾರಿ: ಮಲೆಮಹದೇಶ್ವರ ವನ್ಯ ಧಾಮದ ಡಿಎಫ್ಒ ಏಡುಕುಂಡಲು ಮಾತನಾಡಿ, ಶ್ರೀನಿವಾಸ್ ಅವರು ವೀರಪ್ಪನ್‌ನಿಂದ ಹತರಾಗಿ ಇಂದಿಗೆ 27 ವರ್ಷಗಳು ಕಳೆದರೂ ಗೋಪಿನಾಥಂ ಜನತೆ ಅವರನ್ನು ಇಂದಿಗೂ ನೆನೆಪಿಸಿ ಕೊಳ್ಳುತ್ತಿ ರುವುದು ಸಂತಸದ ವಿಚಾರ. ಜನ ಸಾಮಾನ್ಯ ರೊಂ ದಿಗೆ ಬೆರೆಯುತ್ತಿದ್ದ ವ್ಯಕ್ತಿತ್ವ ಇಂದು ಎಲ್ಲಾ ಅರಣ್ಯಾ ಧಿಕಾರಿಗಳಿಗೆ ಮಾದರಿಯಾಗಬೇಕಿದೆ ಎಂದರು.
13 ಲಕ್ಷ ಪರಿಹಾರ ವಿತರಣೆ: ಕಾವೇರಿ ವನ್ಯ ಧಾಮದ ನಾಗಮಲೆ ಬೀಟ್‌ನಲ್ಲಿ ಕಳೆದ ನಾಲ್ಕು ತಿಂಗಳ ಹಿಂದೆ ಕಾಡಾನೆ ದಾಳಿಗೆ ತುತ್ತಾಗಿ ಮೃತಪಟ್ಟ ಹಲಗತಂಬಡಿ ಕುಟುಂಬಕ್ಕೆ 13 ಲಕ್ಷ ಪರಿಹಾರ ವಿತರಿಸಲಾಯಿತು. ಸಹಾಯಕ ಅರಣ್ಯ ಸಂರಕ್ಷ ಣಾಧಿಕಾರಿ ಅಂಕರಾಜು, ನಿವೃತ್ತ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಾಸುದೇವಮೂರ್ತಿ, ಗೋಪಿನಾಥಂ ಗ್ರಾಪಂ ಅಧ್ಯಕ್ಷ ಮುರುಗೇಶ್, ವಲಯ ಅರಣ್ಯಾಧಿಕಾರಿಗಳಾದ ಸುಂದರ, ಮಹದೇವಸ್ವಾಮಿ, ರಾಜೇಶ್‌ಗವಾಲ್, ಸಯ್ನಾದ್ ಸಾಬಾ ನಧಾಫ್, ವಿನಯ್, ಕಿರಣ್‌ಕುಮಾರ್, ನಿಶ್ಚಿತ್ ಇತರರು ಇದ್ದರು.