Advertisement
ಇದು ಪಟ್ಟಣದ ಹೊರವಲಯದ ಕಾಳಿಕಾಂಬಾ ದೇವಸ್ಥಾನದ ಬಳಿ ಇರುವ ಸಾರ್ವಜನಿಕ ಗ್ರಂಥಾಲಯದ ಬಗ್ಗೆ ಜನರು ಆಡಿಕೊಳ್ಳುತ್ತಿರುವ ಮಾತು. ಬಸ್ ನಿಲ್ದಾಣದ ಕಟ್ಟಡದ ಒಂದು ಕೊಠಡಿಯಲ್ಲಿ 1980ರಿಂದಲೂ ಪುರಸಭೆ ವಾಚನಾಲಯವಾಗಿ ನಂತರ ಜಿಲ್ಲಾಡಳಿತದ ಕೃಪಕಟಾಕ್ಷದಿಂದ ಸಾರ್ವಜನಿಕ ಗ್ರಂಥಾಲಯ ಸ್ಥಾಪನೆಗೊಂಡಿತ್ತು. ಆಗ ಸಾರ್ವಜನಿಕ ಗ್ರಂಥಾಲಯದಲ್ಲಿ ಪ್ರತಿನಿತ್ಯ ಓದುಗರ ಸಂಖ್ಯೆ ಹರಿದು ಬರುತ್ತಿತ್ತು. ಶಾಲಾ- ಕಾಲೇಜು ವಿದ್ಯಾರ್ಥಿಗಳು, ಮಕ್ಕಳು, ಸಾರ್ವಜನಿಕರು ಇಲ್ಲಿ ಬಂದು ಪುಸ್ತಕ, ಮ್ಯಾಗಝಿನ್ ಹಾಗೂ ದಿನಪತ್ರಿಕೆಗಳನ್ನು ಓದುತ್ತಿದ್ದರು.
Related Articles
Advertisement
ಇರುವ ಕಟ್ಟಡದ ಜಾಗ ಚಿಕ್ಕದಾಗಿರುವುದರಿಂದ ಅವಶ್ಯವಿರುವ ಕುರ್ಚಿ- ಬೆಂಚು ಇದ್ದರೂ ಸಹ ಸ್ಥಳವಿಲ್ಲದೇ ಪರದಾಡುವಂತಾಗಿದೆ. ಸಾಕಷ್ಟು ಸಮಯ ದಿನಪತ್ರಿಕೆ ಓದುವವರ ಸಂಖ್ಯೆ ಹೆಚ್ಚಿರುವುದರಿಂದ ಅವರಿಗೆ ಕುರ್ಚಿ- ಬೆಂಚು ಅವಶ್ಯಕತೆ ಇದೆ. ಇಲ್ಲಿ ಒಬ್ಬರೇ ಗ್ರಂಥ ಪಾಲಕರಿದ್ದು, ಅವರು ಕೊಪ್ಪ ಗ್ರಂಥಾಲಯದ ಜೊತೆಗೆ ಇಲ್ಲಿಯೂ ಕರ್ತವ್ಯ ನಿರ್ವಹಿಸಬೇಕಾಗಿದೆ. ತಿಂಗಳಿಗೆ ಒಮ್ಮೆ ಇಲ್ಲಿಗೆ ಬಂದು ತಿಂಗಳ ವರದಿ ತೆಗೆದುಕೊಂಡು ಹೋಗುತ್ತಾರೆ. ಕಳೆದ 7ತಿಂಗಳ ಹಿಂದೆ ಒಬ್ಬರು ಹಂಗಾಮಿ ಗ್ರಂಥ ಪಾಲಕಿಯನ್ನು ನೇಮಿಸಲಾಗಿದೆ. ಇವರಿಂದ ಪ್ರತಿದಿನ ಗ್ರಂಥಾಲಯ ಬಾಗಿಲು ತೆರೆಯುತ್ತಿದೆ. ಅವರು ಅನಿವಾರ್ಯ ಕಾರಣಕ್ಕೆ ರಜೆ ಮೇಲೆ ಹೋದರೆ ಮಾತ್ರ ಗ್ರಂಥಾಲಯದ ಬಾಗಿಲು ಹಾಕಲಾಗುತ್ತದೆ. ಇದರಿಂದ ನಿತ್ಯ ಓದುಗರಿಗೆ ತೊಂದರೆ ಉಂಟಾಗುತ್ತದೆ. ಓದುಗರಿಗೆ ಅವರದೇ ಮಾತೃ ಭಾಷೆಯಲ್ಲಿ ಗ್ರಂಥಗಳು, ಪುಸ್ತಕಗಳು ಸಿಗುವ ವ್ಯವಸ್ಥೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗ್ರಂಥಾಲಯ ಇಲಾಖೆ ಮೂಲಕ ಜಂಟಿಯಾಗಿ ಮಾಡುತ್ತಿವೆ. ಆದರೆ, ಸಾಹಿತ್ಯಾಸಕ್ತರು, ಶಿಕ್ಷಕರು, ವಿದ್ಯಾರ್ಥಿಗಳು ಇಲ್ಲಿ ಇದ್ದರೂ ಓದುಗರ ಕೊರತೆ ಕಾಡುತ್ತಿದೆ. ಆದರೆ, ಗ್ರಂಥಾಲಯ ಕಟ್ಟಡಕ್ಕೆ ಕಾಯಕಲ್ಪ ನೀಡುವ ಕಾಯಕಕ್ಕೆ ಸರ್ಕಾರ ಮುಂದಾಗಿಲ್ಲ ಎನ್ನುವ ಕೊರಗು ಸದಸ್ಯರನ್ನು ಕಾಡುತ್ತಿದೆ.