Advertisement
ಸರ್ಕಾರ ಕೆರೆಗಳ ಅಭಿವೃದ್ಧಿಗಾಗಿ ಹಲವಾರು ಯೋಜನೆ ಹಮ್ಮಿಕೊಂಡಿದ್ದರೂ ಹಲವಾರು ಕೆರೆಗಳು ಅವಸಾನದ ಅಂಚಿಗೆ ತಲುಪಿರುವುದು ದುರ್ದೈವ. ಹೀಗಾಗಿ ಅಂತರ್ಜಲ ಕುಸಿತದ ಪರಿಣಾಮದಿಂದ ಕುಡಿಯುವ ಹನಿ ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
Related Articles
Advertisement
ರಾಜ್ಯ ಹೆದ್ದಾರಿ ಶೃಂಗೇರಿ ಆಗುಂಬೆ ನಡುವೆ ಇರುವ ನೆಲ್ಲೂರು ಕೆರೆ ರಸ್ತೆ ಬದಿಯಲ್ಲಿ ವಿಶಾಲವಾಗಿದೆ. ಈ ಕೆರೆ ನೂರಾರು ವರ್ಷದ ಇತಿಹಾಸ ಹೊಂದಿದ್ದು, ಜಮೀನಿಗೆ ನೀರೊದಗಿಸುತ್ತಿದೆ. ಕೆರೆಯ ಆಸು-ಪಾಸಿನಲ್ಲಿ ಒತ್ತುವರಿಯಾಗಿರುವ ಕಾರಣದಿಂದ ಕೆರೆಯಲ್ಲಿ ನೀರು ಸಂಗ್ರಹವಾಗುವ ಪ್ರದೇಶ ಕಡಿಮೆಯಾಗುತ್ತಿದೆ. ಗ್ರಾಪಂ ಸಮೀಪದ ಹಳ್ಳಿಗಳಿಗೆ ಈ ಕೆರೆಯಿಂದಲೇ ಕುಡಿಯುವ ನೀರು ಪೂರೈಸುತ್ತಿದೆ.
ಉಪಯೋಗಕ್ಕೆ ಬಾರದಂತಾದ ಕೆರೆಗಳು: ತಾಲೂಕಿನಾದ್ಯಂತ ಸಣ್ಣ ಕೆರೆಗಳು ಸಾಕಷ್ಟು ಇದ್ದರೂ, ಹೂಳು ತುಂಬಿರುವುದು, ಕೆರೆಯ ದುರಸ್ತಿಯಾಗದೇ ಗಿಡ-ಗಂಟಿ ಮುಚ್ಚಿ ಉಪಯೋಗಕ್ಕೆ ಬಾರದಂತಾಗುತ್ತಿವೆ. ಖಾಸಗಿಯಾಗಿ ರೈತರ ಜಮೀನೊಳಗಿನ ಕೆರೆಗಳು ಜಮೀನಿಗೆ ನೀರೊದಗಿಸಲು ಮಾತ್ರ ಉಪಯೋಗವಾಗುತ್ತಿದೆ. 2018-19ನೇ ಸಾಲಿನಲ್ಲಿ ಧರೆಕೊಪ್ಪ ಗ್ರಾಪಂಯ ಹೊನ್ನವಳ್ಳಿ ಗದ್ದೆಬೈಲಿನ ಕೆರೆ 6.58 ಲಕ್ಷ ಹಾಗೂ ಕೂತಗೋಡು ಗ್ರಾಪಂ ಯ ಕಲ್ಲಾಳಿ ಕೆರೆ 3.29 ಲಕ್ಷ ರೂ. ವೆಚ್ಚದಲ್ಲಿ ದುರಸ್ತಿಯಾಗಿದೆ.
2019-2020ರಲ್ಲಿ ಧರೆಕೊಪ್ಪ ಗ್ರಾಪಂಯ ಚೇರ್‌ಗೊàಡು ಕೆರೆಯನ್ನು 2.5 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಹಗಡೂರು ಕೆಳಗಿನ ಕೆರೆ ಹಾಗೂ ಮರ್ಕಲ್ ಗ್ರಾಪಂಯ ಹೊಳಂದೂರು ತೋಟದ ಕೆರೆ ಅಭಿವೃದ್ಧಿಗೆ ಅನುದಾನ ಮೀಸಲಿರಿಸಲಾಗಿದೆ.
ಮಲೆನಾಡಿನಲ್ಲಿ ಏರು-ತಗ್ಗು ಪ್ರದೇಶವೇ ಹೆಚ್ಚಾಗಿರುವುದರಿಂದ ದೊಡ್ಡ ಕೆರೆಗಳ ಸಂಖ್ಯೆ ಕಡಿಮೆ. ಇರುವ ಕೆರೆಗಳನ್ನು ಸುಸ್ಥಿತಿಯಲ್ಲಿಡಲು ಸರ್ಕಾರ ಹೆಚ್ಚಿನ ಅನುದಾನ ಒದಗಿಸಬೇಕು. ಹೂಳು ತುಂಬಿ ಗಿಡಗಳು ಬೆಳೆಯುತ್ತಿದ್ದಂತೆ, ಅಲ್ಲಿ ಒತ್ತುವರಿ ಆರಂಭವಾಗುತ್ತದೆ. ಸರ್ಕಾರ ಆಯಾ ಗ್ರಾಪಂ ವ್ಯಾಪ್ತಿಯ ಕೆರೆ ಗುರುತಿಸಿ ಅಭಿವೃದ್ಧಿಪಡಿಸುವುದರಿಂದ ಅಂತರ್ಜಲ ಹೆಚ್ಚುತ್ತಿದ್ದು, ಇದರಿಂದ ಜಮೀನು- ಕುಡಿಯುವ ನೀರಿನ ಪೂರೈಕೆಗೆ ಅನುಕೂಲವಾಗುತ್ತದೆ.ಎಂ.ಪಿ. ಚಂದ್ರಹಾಸ,
ಮಸಿಗೆ (ಶೃಂಗೇರಿ) ಸರ್ಕಾರ ನೀಡುತ್ತಿರುವ ಅನುದಾನ ಉಪಯೋಗಿಸಿ ತಾಲೂಕಿನ ಕೆರೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಕಳೆದ ವರ್ಷ ಬಿಡುಗಡೆಯಾದ ಅನುದಾನ ಉಪಯೋಗಿಸಿಕೊಂಡು ಮೂರು ಕೆರೆ ಅಭಿವೃದ್ಧಿ ಮಾಡಲಾಗಿದೆ. ಈ ವರ್ಷವೂ ಕೆರೆ ಹೂಳೆತ್ತಲು ಕ್ರಮ ಕೈಗೊಳ್ಳಲಾಗುತ್ತದೆ.
ಸೈಪುಲ್ಲಾ,
ಜಿಪಂ ಇಂಜಿನಿಯರ್, ಶೃಂಗೇರಿ